»   » 'ಗೂಗ್ಲಿ' ತೆಲುಗು ರೀಮೇಕ್ ರೈಟ್ಸ್ ಗೆ ಭರ್ಜರಿ ಬೆಲೆ

'ಗೂಗ್ಲಿ' ತೆಲುಗು ರೀಮೇಕ್ ರೈಟ್ಸ್ ಗೆ ಭರ್ಜರಿ ಬೆಲೆ

Posted By:
Subscribe to Filmibeat Kannada

ಪವನ್ ಒಡೆಯರ್ ನಿರ್ದೇಶನದ 'ಗೂಗ್ಲಿ' ಚಿತ್ರದ ತೆಲುಗು ರೀಮೇಕ್ ರೈಟ್ಸ್ ಗೆ ಭರ್ಜರಿ ರೈಟ್ಸ್ ಸಿಕ್ಕಿದೆ. ತೆಲುಗು ರೀಮೇಕ್ ಚಿತ್ರಕ್ಕೂ ಪವನ್ ಒಡೆಯರ್ ಆಕ್ಷನ್ ಕಟ್ ಹೇಳುತ್ತಿರುವುದು ಇನ್ನೊಂದು ವಿಶೇಷ. 'ಗೂಗ್ಲಿ' ಚಿತ್ರದಲ್ಲಿ ರಾಕ್ ಸ್ಟಾರ್ ಯಶ್ ಹಾಗೂ ಕೃತಿ ಕರಬಂಧ ಮುಖ್ಯಪಾತ್ರಗಳನ್ನು ಪೋಷಿಸಿದ್ದಾರೆ.

ರಾಜ್ಯದಾದ್ಯಂತ ಗೂಗ್ಲಿ ಚಿತ್ರ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು 100ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಅರ್ಧ ಸೆಂಚುರಿ ಭಾರಿಸಲು ಸಿದ್ಧವಾಗಿದೆ. ಇದೇ ಸಂದರ್ಭದಲ್ಲಿ ತೆಲುಗು ರೀಮೇಕ್ ರೈಟ್ಸ್ ಸುಮಾರು ರು.45 ಲಕ್ಷಕ್ಕೆ ಮಾರಾಟವಾಗಿದೆ. [ಗೂಗ್ಲಿ ಚಿತ್ರ ವಿಮರ್ಶೆ ಓದಿ]


ಗೋವಿಂದಾಯ ನಮಃ ತೆಲುಗು ರೀಮೇಕ್ ಚಿತ್ರಕ್ಕೂ ಪವನ್ ಒಡೆಯರ್ ಆಕ್ಷನ್ ಕಟ್ ಹೇಳಿದ್ದರು. ಈಗ ಇನ್ನೊಂದು ತೆಲುಗು ಚಿತ್ರಕ್ಕೆ ಪವನ್ ಸಜ್ಜಾಗುತ್ತಿದ್ದಾರೆ. ಗೋವಿಂದಾಯ ನಮಃ' ದಂತಹ ಕಾಮಿಡಿ ಹಿಟ್ ಚಿತ್ರ ಕೊಟ್ಟ ಪವನ್ ಈ ಬಾರಿ ಆಕ್ಷನ್, ರೊಮ್ಯಾನ್ಸ್ ಮೂಲಕ ಜನಮನ ಗೆದ್ದಿದ್ದಾರೆ.

ಜಯಣ್ಣ ಕಂಬೈನ್ಸ್ ಲಾಂಛನದಲ್ಲಿ ಜಯಣ್ಣ ಹಾಗೂ ಭೋಗೇಂದ್ರ ಅವರು ನಿರ್ಮಿಸಿರುವ ಚಿತ್ರವಿದು. ಅನಂತನಾಗ್, ಸುಧಾಬೆಳವಾಡಿ, ಸಾಧುಕೋಕಿಲ, ನೀನಾಸಂ ಅಶ್ವತ್ ಮುಂತಾದವರು 'ಗೂಗ್ಲಿ' ಚಿತ್ರದ ತಾರಾಬಳಗದಲ್ಲಿದ್ದಾರೆ.

ವೈದಿ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಜೋಶ್ವ ಶ್ರೀಧರ್ ಸಂಗೀತ ನೀಡಿದ್ದಾರೆ. ಸನತ್ ಸುರೇಶ್ ಸಂಕಲನ, ಪಳನಿರಾಜ್, ರವಿವರ್ಮ ಸಾಹಸ ನಿರ್ದೇಶನ, ಮುರಳಿ ನೃತ್ಯ ನಿರ್ದೇಶನವಿರುವ ಈ ಚಿತ್ರದ ಹಾಡುಗಳನ್ನು ಪವನ್ ಒಡೆಯರ್, ಯೋಗರಾಜ್ ಭಟ್, ಜಯಂತ ಕಾಯ್ಕಿಣಿ, ಕವಿರಾಜ್ ಬರೆದಿದ್ದಾರೆ. (ಏಜೆನ್ಸೀಸ್)

English summary
Sources revealed that Rock Star Yash lead and Pawan Wodeyar directed 'Googly' has been offered Rs 45 lakhs for the Telugu remake rights. Ananth Nag, Sadhu Kokila,among others play the supporting roles. Joshua Sridhar is the score and soundtrack composer.
Please Wait while comments are loading...