»   » ಗೋವಾ ಬೀಚ್ ನಲ್ಲಿ ಯಶ್-ರಾಧಿಕಾ ಮೋಜು-ಮಸ್ತಿ

ಗೋವಾ ಬೀಚ್ ನಲ್ಲಿ ಯಶ್-ರಾಧಿಕಾ ಮೋಜು-ಮಸ್ತಿ

Posted By: ಹರಾ
Subscribe to Filmibeat Kannada

'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಸಿನಿಮಾ ನೋಡಿದ್ದೀರಾ...ಅದ್ರಲ್ಲಿ ಒಂದು ಸನ್ನಿವೇಶ ಇದೆ. ರಾಧಿಕಾ ಫ್ರೆಂಡ್ಸ್ ಗೆ ಯಶ್ ಹೇಳ್ತಾರೆ - ''ನಾವಿಬ್ಬರು 'ಜಸ್ಟ್ ಫ್ರೆಂಡ್ಸ್', ನಮ್ಮ ನಡುವೆ ಏನಿಲ್ಲ!'' ಅಂತ.

ಇದನ್ನ ನೋಡಿ ರಾಧಿಕಾ ಯಶ್ ಬಳಿ ಬಂದು - ''ನಾವಿಬ್ಬರು 'ಜಸ್ಟ್ ಫ್ರೆಂಡ್ಸ್' ಅಂತ ಒತ್ತಿ ಒತ್ತಿ ಹೇಳೋ ಅವಶ್ಯಕತೆ ಏನಿತ್ತು'' ಅಂತ ಪ್ರಶ್ನೆ ಮಾಡ್ತಾರೆ.

ಆಗ ಯಶ್ ಹೇಳ್ತಾರೆ - ''ನಾವಿಬ್ಬರು ಏನು ಅಂತ ಎಲ್ಲರಿಗೂ ಗೊತ್ತಿದೆ. ಅದನ್ನ ಅವರೂ ಕೇಳಬಾರದು, ನಾವೂ ಹೇಳಬಾರದು''.

Successful Couple Yash-Radhika Pandit celebrates New Year in Goa1

ಈ ಸೀನ್ ನ ಬೆಳ್ಳಿಪರದೆಯಲ್ಲಿ ನೋಡಿದ ಮೇಲೆ ಪ್ರತಿಯೊಬ್ಬರಿಗೂ ಯಶ್-ರಾಧಿಕಾ ಮಧ್ಯೆ ಇರುವ ಗುಸುಗುಸು ನೆನಪಾಗದೇ ಇರಲ್ಲ. ತೆರೆಮೇಲೆ 'ರಿಯಲ್' ಜೋಡಿಗಳಂತೆ ರೋಮ್ಯಾನ್ಸ್ ಮಾಡಿರುವ ಯಶ್-ರಾಧಿಕಾ ಮಧ್ಯೆ ನಿಜಕ್ಕೂ ಸಂಥಿಂಗ್ ಸಂಥಿಂಗ್ ಇದೆಯಾ...? [ರಾಧಿಕಾ ಮತ್ತು ಯಶ್ ನಡುವೆ ಸಂಥಿಂಗ್ ಸಂಥಿಂಗ್]

ಈ ಅನುಮಾನಕ್ಕೆ ಇದೀಗ ಕ್ಲಾರಿಟಿ ಸಿಕ್ಕಿದೆ. ಅದೇನಂತ ತಿಳ್ಕೋಬೇಕಂದ್ರೆ ಮೊದಲು ಈ ಫೋಟೋನ ಒಮ್ಮೆ ನೋಡಿ....

Post by YASH SUPER STAR.

ಬೀಚ್ ಸೈಡ್ ನಲ್ಲಿ, ರಾತ್ರಿ ಹೊತ್ತಲ್ಲಿ, ರಾಧಿಕಾ ಪಂಡಿತ್ ಮತ್ತು ಯಶ್ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಹಾಗಂತ ಈ ಫೋಟೋ ಯಾವಾಗಲೋ ಕ್ಲಿಕ್ ಮಾಡಿರುವುದಲ್ಲ. ಕೇವಲ ಐದು ದಿನಗಳ ಹಿಂದೆಯಷ್ಟೇ, ಅಂದ್ರೆ ಡಿಸೆಂಬರ್ 31 ರ ರಾತ್ರಿ ತೆಗೆದಿರುವ ಫೋಟೋ.

ಎಲ್ಲಿ ಅಂತ ಕೇಳಿ...!? 'ಫಿಲ್ಮಿಬೀಟ್ ಕನ್ನಡ'ಕ್ಕೆ ರಾಧಿಕಾ ಪಂಡಿತ್ ಹೇಳಿದ ಹಾಗೆ, ಗೋವಾದಲ್ಲಿ! ಹೊಸ ವರ್ಷವನ್ನು ರಾಧಿಕಾ ಪಂಡಿತ್ ಈ ಬಾರಿ ಬರಮಾಡಿಕೊಂಡಿದ್ದು ಗೋವಾದಲ್ಲಿ. ಫ್ಯಾಮಿಲಿ ಜೊತೆ ನ್ಯೂ ಇಯರ್ ಸೆಲೆಬ್ರೇಟ್ ಮಾಡ್ತೀನಿ ಅಂದಿದ್ದ ರಾಧಿಕಾ, ತಮ್ಮ ಕುಟುಂಬದೊಂದಿಗೆ ಹೊಸ ವರ್ಷವನ್ನ ಗ್ರ್ಯಾಂಡಾಗಿ ಸೆಲೆಬ್ರೇಟ್ ಮಾಡಿದ್ದಾರೆ. [ಹೊಸ ವರ್ಷದ ಸಂಭ್ರಮ: ಯಾವ್ಯಾವ ತಾರೆಯರು ಎಲ್ಲೆಲ್ಲಿ?]

Successful Couple Yash-Radhika Pandit celebrates New Year in Goa2

ಅಪ್ಪ, ಅಮ್ಮ, ಆಪ್ತೇಷ್ಟರ ಜೊತೆಗೆ ರಾಧಿಕಾ ಪಾರ್ಟಿಯಲ್ಲಿ ಯಶ್ ಕೂಡ ಭಾಗಿಯಾಗಿದ್ದಾರೆ. ಅವರೆಲ್ಲರೂ ಈ ಫೋಟೋದಲ್ಲೇ ಕ್ಲಿಯರ್ ಆಗಿ ಕಾಣ್ತಾರೆ. ಇಬ್ಬರ ಪ್ರೇಮಕ್ಕೆ ಅದಾಗಲೇ ಮಲ್ಲೇಶ್ವರಂನ ಕಾಫಿ ಡೇಗಳು ಅನೇಕ ಬಾರಿ ಸಾಕ್ಷಿಯಾಗಿದ್ವು. ಇದೀಗ ಗೋವಾದ ವರೆಗೂ ಇಬ್ಬರ ಲವ್ವಿ-ಡವ್ವಿ ಸುಸೂತ್ರವಾಗಿ ಸಾಗಿದೆ.

ಅಂದ್ಹಾಗೆ ಈ ಫೋಟೋನ ಬಹಿರಂಗ ಮಾಡಿರುವುದು ಇನ್ಯಾರು ಅಲ್ಲ. ಖುದ್ದು ರಾಕಿಂಗ್ ಸ್ಟಾರ್ ಯಶ್, ತಮ್ಮ ಫೇಸ್ ಬುಕ್ ನಲ್ಲಿ ಹಾಕಿಕೊಂಡಿದ್ದಾರೆ. ಕುಟುಂಬದವರ ಜೊತೆಗೆ ಯಶ್-ರಾಧಿಕಾ ಜೋಡಿ ಒಟ್ಟಿಗೆ ಇರುವುದರಿಂದ ಇಬ್ಬರ ಪ್ರೀತಿಗೆ ಹಿರಿಯರ ಸಮ್ಮತಿ ಸಿಕ್ಕಿದೆ ಅಂತರ್ಥ.

Successful Couple Yash-Radhika Pandit celebrates New Year in Goa3

ಹಿಂದೊಮ್ಮೆ 'ವೀಕೆಂಡ್ ವಿಥ್ ರಮೇಶ್' ಕಾರ್ಯಕ್ರಮದಲ್ಲಿ ರಾಧಿಕಾ ತಮ್ಮ ಇನಿಯನ ಬಗ್ಗೆ - ''ನನ್ನ ಹುಡುಗನ ಮನಸ್ಸು ಮೊಗ್ಗಿನ ಹಾಗೆ ಇರಬೇಕು (ಮೊಗ್ಗಿನ ಮನಸ್ಸು), ಅವನಿಗೆ ಆನೆ ಬಲ ಇರಬೇಕು (ಗಜಕೇಸರಿ), ಯಾವುದೇ ಕಾರಣಕ್ಕೂ 'ಡ್ರಾಮಾ' ಮಾಡಬಾರದು'' ಅಂತ ಹೇಳಿದ್ದರು. [ನನ್ನ ಪತಿ ಹೀಗಿರಬೇಕೆಂದು ರಾಧಿಕಾ ಹೇಳಿದ್ದು ಯಾರಿಗೆ?]

ಅಸಲಿಗೆ ಯಶ್ ಅಭಿನಯದ ಮೂರೂ ಚಿತ್ರಗಳನ್ನು ಕಾವ್ಯಾತ್ಮಕವಾಗಿ ಹೇಳಿ, ಚಿತ್ರ ಬಿಡಿಸಿದ್ದ ರಾಧಿಕಾ, ''ನನ್ನ ಹುಡುಗ ಯಶ್'' ಅಂತ ಆಗಲೇ ಹಿಂಟ್ ಕೊಟ್ಟಿದ್ದರು. ಇದೀಗ ಇಬ್ಬರೂ, ಫ್ಯಾಮಿಲಿ ಜೊತೆ ಒಟ್ಟಿಗಿರುವ ಫೋಟೋವನ್ನ ಯಶ್ ಬಹಿರಂಗ ಮಾಡಿ ಗಾಸಿಪ್ ಪಂಡಿತರ ಬಾಯಿಗೆ ಬೀಗ ಹಾಕಿದ್ದಾರೆ ಅಷ್ಟೆ. [ರಾಧಿಕಾ ಪಂಡಿತ್-ಯಶ್ ಇಬ್ಬರದ್ದೂ ಒಂದೇ ಪಾಲಿಸಿ]

ಗಾಸಿಪ್ ಏನೇ ಇರಲಿ, ಬಿಡಲಿ...ಗುರುಹಿರಿಯರ ಜೊತೆಗೆ ಬಿಂದಾಸ್ ಆಗಿರುವ ಈ ಜೋಡಿ, ರಿಯಲ್ ಲೈಫಲ್ಲೂ 'ಮಿಸ್ಟರ್ ಅಂಡ್ ಮಿಸಸ್' ರಾಮಾಚಾರಿ ಆದರೆ, ಅವರ ಅಭಿಮಾನಿಗಳಿಗೇ ಖುಷಿ ಅಲ್ಲವೇ..! (ಫಿಲ್ಮಿಬೀಟ್ ಕನ್ನಡ)

English summary
Sandalwood's successful Couple Yash-Radhika Pandit snapped celebrating New Year in Goa. The picture shows, Yash and Radhika Pandit partying with their families.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X