Don't Miss!
- Sports
ಭಾರತ vs ಆಸ್ಟ್ರೇಲಿಯಾ ಟೆಸ್ಟ್ ಸರಣಿಯಲ್ಲಿ ಈ ತಂಡವೇ ಗೆಲ್ಲಲಿದೆ ಎಂದ ಮೈಕಲ್ ವಾನ್
- News
Breaking; ಕೋಲಾರ ಕ್ಷೇತ್ರವೇ ಏಕೆ, ಸಿದ್ದರಾಮಯ್ಯ ಪ್ರತಿಕ್ರಿಯೆ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Lifestyle
ತಿಂದ ಆಹಾರ ಸರಿಯಾಗಿ ಜೀರ್ಣವಾಗ್ತಿಲ್ವಾ ಹಾಗಾದ್ರೆ ಈ ಆಸನಗಳನ್ನ ಮಾಡಿ
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Finance
LIC Jeevan Umang: ದಿನಕ್ಕೆ 150 ರೂ ಹೂಡಿಕೆ ಮಾಡಿ, 10 ಲಕ್ಷ ಪಡೆಯಿರಿ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಪೊಲೀಸರ ವಿರುದ್ಧ ಸುದೀಪ್ ಹಾಗೂ ಗೆಳೆಯರ ಕ್ರಿಕೆಟ್: ಗೆದ್ದವರು ಯಾರು?
ಸುದೀಪ್‌ಗೆ ನಟನೆ ಜೊತೆಗೆ ಕ್ರಿಕೆಟ್ ಸಹ ಬಲು ಪ್ರಿಯ. ಅತ್ಯುತ್ತಮ ನಟರಾಗಿರುವ ಸುದೀಪ್ ಅತ್ಯುತ್ತಮ ಕ್ರಿಕೆಟ್ ಪ್ರೇಮಿಯೂ ಹೌದು.ನಟನೆಯಿಂದ ಆಗಾಗ್ಗೆ ಬಿಡುವು ಪಡೆದು ಕ್ರಿಕೆಟ್ ಅಂಗಳಕ್ಕಿಳಿಯುತ್ತಾರೆ ಸುದೀಪ್, ನಿನ್ನೆ ಭಾನುವಾರ ಸುದೀಪ್ ಮತ್ತೆ ಬ್ಯಾಟ್ ಹಿಡಿದು ಫೀಲ್ಡ್‌ಗೆ ಇಳಿದಿದ್ದರು.
'ವಿಕ್ರಾಂತ್ ರೋಣ' ಸಿನಿಮಾದ ಪ್ರಚಾರದ ನಡುವೆಯೂ ಬಿಡುವು ಮಾಡಿಕೊಂಡು ಸುದೀಪ್ ಅವರು ಕ್ರಿಕೆಟ್ ಬ್ಯಾಟ್ ಹಿಡಿದಿದ್ದರು.
ಭಾನುವಾರದ ರಜಾ ದಿನದಂದು ಸುದೀಪ್ ಹಾಗೂ ಅವರ ಇತರೆ ಕೆಲವು ಗೆಳೆಯರು ಸೇರಿಕೊಂಡು ಬೆಳ್ಳಂಬೆಳಿಗ್ಗೆ ಪೊಲೀಸ್ ತಂಡದ ವಿರುದ್ಧ ಸ್ನೇಹಪರವಾಗಿ ಕ್ರಿಕೆಟ್ ಮ್ಯಾಚ್ ಒಂದನ್ನು ಆಡಿದ್ದಾರೆ.
Recommended Video

ಬೆಂಗಳೂರಿನ ಬಿಜಿಎಸ್ ಕ್ರೀಡಾಂಗಣದಲ್ಲಿ ಸುದೀಪ್ ಅವರ 'ನಮ್ಮ 11' ತಂಡ ಹಾಗೂ ಪೊಲೀಸರ ತಂಡದೊಂದಿಗೆ ಸ್ನೇಹಪರ ಪಂದ್ಯ ನಡೆದಿದೆ. ಬೆಳ್ಳಂಬೆಳಿಗ್ಗೆಯೇ ಎರಡು ಪಂದ್ಯಗಳನ್ನು ಬೆಂಗಳೂರು ಪೊಲೀಸರು ಹಾಗೂ ಸುದೀಪ್ ತಂಡ ಆಡಿದೆ.

ಕೀಪಿಂಗ್ ಮಾಡಿದ ಸುದೀಪ್
ಸುದೀಪ್ ಎಂದಿನಂತೆ ಕೀಪಿಂಗ್ ಹಾಗೂ ಬ್ಯಾಟಿಂಗ್ ಮಾಡಿದ್ದಾರೆ. ಸುದೀಪ್ ತಂಡದಲ್ಲಿ ಕೆಪಿ ಶ್ರೀಕಾಂತ್, ಬಿಗ್‌ಬಾಸ್ ರಾಜೀವ್, ಮಂಜು, ನಿರ್ದೇಶಕ ನಂದ ಕಿಶೋರ್, ಪ್ರದೀಪ್, ಜೆಕೆ, ಪ್ರೀತಂ ಗುಬ್ಬಿ ಇನ್ನೂ ಹಲವರು ಸುದೀಪ್ ತಂಡದ ಪರವಾಗಿ ಕ್ರಿಕೆಟ್ ಆಡಿದರು. ಇನ್ನೂ ಹಲವು ಸಿನಿಮಾ ಮಂದಿ ಹಾಗೂ ಸುದೀಪ್ ಗೆಳೆಯರು ಸುದೀಪ್ ತಂಡದ ಭಾಗವಾಗಿದ್ದರು. ಪೊಲೀಸ್ ಹಾಗೂ ಸುದೀಪ್ ತಂಡದ ನಡುವೆ ಮೂರು ಪಂದ್ಯಗಳ ಸರಣಿ ಇದಾಗಿದ್ದು, 2-1 ಅಂತರದಲ್ಲಿ ಸುದೀಪ್ ತಂಡ ವಿಜಯ ಸಾಧಿಸಿದೆ.

ಮನೊರಂಜನೆಗೆ ಕ್ರೀಡೆಯೇ ಬೆಸ್ಟ್: ಸುದೀಪ್
ಆಟ ಆರಂಭಕ್ಕೂ ಮುನ್ನ ಮಾಧ್ಯಮಗಳೊಟ್ಟಿಗೆ ಮಾತನಾಡಿದ ನಟ ಸುದೀಪ್, ''ಪೊಲೀಸರು ನಮ್ಮ ಸ್ನೇಹಿತರು. ಪ್ರತಿನಿತ್ಯ ಬಹಳ ಒತ್ತಡದ ನಡುವೆ ಅವರು ಕೆಲಸ ಮಾಡುತ್ತಿದ್ದಾರೆ. ಆ ಒತ್ತಡದಿಂದ ಬಿಡುಗಡೆಗೆ ಕ್ರೀಡೆ ಅವಶ್ಯಕ. ನಿತ್ಯ ಜಂಜಾಟಗಳ ನಡುವೆ ಅವರಿಗೆ ಮನೊರಂಜನೆ ಬೇಕಾಗುತ್ತದೆ. ನಮಗೂ ಸಹ ಮನೊರಂಜನೆ ಬೇಕಾಗುತ್ತದೆ. ಮನೊರಂಜನೆ ವಿಷಯದಲ್ಲಿ ಕ್ರೀಡೆಯೇ ಬೆಸ್ಟ್'' ಎಂದರು ಸುದೀಪ್. ''ರಾತ್ರಿ ಸಹ ಸೇರಬಹುದು, ಆದರೆ ಬೆಳಿಗ್ಗೆ ಸೇರುವುದೇ ಬೆಸ್ಟ್'' ಎಂದು ಚಟಾಕಿ ಹಾರಿಸಿದ್ದಾರೆ ಸುದೀಪ್.

ಜಾಸ್ ಬಟ್ಲರ್ ಬ್ಯಾಟಿನ ಬಗ್ಗೆ ಮಾತು
ಇದೇ ಸಂದರ್ಭದಲ್ಲಿ ಜಾಸ್ ಬಟ್ಲರ್ ತಮಗೆ ನೀಡಿದ ಬ್ಯಾಟ್ ಕುರಿತು ಮಾತನಾಡಿದ ಸುದೀಪ್, ''ಮಹಾನ್ ವ್ಯಕ್ತಿ, ಮಹಾನ್ ಕ್ರಿಕೆಟರ್ ನಮ್ಮನ್ನು ಗುರುತಿಸಿ ಪ್ರೀತಿಯಿಂದ ಬ್ಯಾಟ್ ಕೊಟ್ಟು ಕಳಿಸಿದ್ದಾರೆ. ಅವರು ಸೆಂಚುರಿ ಹೊಡೆದ ಬ್ಯಾಟ್ ಅನ್ನು ನೀಡಿರುವುದು ಖುಷಿಯ ವಿಚಾರ ಅದನ್ನು ಕಾಪಿಟ್ಟುಕೊಂಡಿದ್ದೇನೆ'' ಎಂದರು. ಇಂದು ಆ ಬ್ಯಾಟ್ ಬಳಸುತ್ತೀರ? ಎಂದಿದ್ದಕ್ಕೆ ಖಂಡಿತ ಇಲ್ಲ. ಅದು ನನಗೆ ಸಿಕ್ಕ ಉಡುಗೊರೆ ಅದನ್ನು ಫೀಲ್ಡ್‌ಗೆ ತರಲಾಗುವುದಿಲ್ಲ, ಅದನ್ನು ಶೋಕೇಸ್‌ನಲ್ಲಿ ಒಪ್ಪವಾಗಿ ಜೋಡಿಸಿಟ್ಟಿದ್ದೀನಿ ಎಂದರು ಸುದೀಪ್.

ಜುಲೈ ನಲ್ಲಿ ಬಿಡುಗಡೆ ಆಗಲಿದೆ 'ವಿಕ್ರಾಂತ್ ರೋಣ'
ಸುದೀಪ್ ನಟನೆಯ 'ವಿಕ್ರಾಂತ್ ರೋಣ' ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾವು ಪ್ಯಾನ್ ಇಂಡಿಯಾ ಸಿನಿಮಾ ಆಗಿರಲಿದ್ದು, ದಕ್ಷಿಣ ಭಾರತದ ಭಾಷೆ, ಹಿಂದಿ ಹಾಗೂ ಇಂಗ್ಲೀಷ್‌ನಲ್ಲಿ ಸಹ ಸಿನಿಮಾ ಬಿಡುಗಡೆ ಆಗಲಿದೆ. ಸಿನಿಮಾದ ಅಧಿಕೃತ ಟ್ರೇಲರ್ ಜೂನ್ 23 ರಂದು ಬಿಡುಗಡೆ ಆಗಲಿದೆ. 'ವಿಕ್ರಾಂತ್ ರೋಣ' ಸಿನಿಮಾವು ಜುಲೈ 29 ರಂದು ತೆರೆಗೆ ಬರಲಿದೆ. ಸಿದ್ದಾರೆ. ಸಿನಿಮಾವನ್ನು ಅನುಪ್ ಭಂಡಾರಿ ನಿರ್ದೇಶನ ಮಾಡಿದ್ದಾರೆ. ನಿರ್ಮಾಣ ಮಾಡಿರುವುದು ಸುದೀಪ್ ಗೆಳೆಯ ಜಾಕ್ ಮಂಜು.