»   » ಮತದಾನ ಮಾಡಿದ ಕಿಚ್ಚನಿಗೆ ಸಿಕ್ಕಿತು ಉಡುಗೊರೆ

ಮತದಾನ ಮಾಡಿದ ಕಿಚ್ಚನಿಗೆ ಸಿಕ್ಕಿತು ಉಡುಗೊರೆ

Posted By:
Subscribe to Filmibeat Kannada

ರಾಜ್ಯದ ಎಲ್ಲೆಡೆ ಮತದಾನ ನಡೆಯುತ್ತಿದೆ. ಕಳೆದ ಬಾರಿಗೆ ಹೋಲಿಕೆ ಮಾಡಿಕೊಂಡರೆ ಈ ಸಲ ಜನರು ಮನೆಯಿಂದ ಹೊರಬಂದು ವೋಟ್ ಮಾಡಲು ಹಿಂದೆಟು ಹಾಕುತ್ತಿದ್ದಾರೆ. ಆದರೆ ಸಿನಿಮಾ ಕಲಾವಿದರು ಮಾತ್ರ ತಮ್ಮ ಹಕ್ಕನ್ನು ಚಲಾಯಿಸಲು ಕೆಲಸದ ಮಧ್ಯೆ ಬಿಡುವು ಮಾಡಿಕೊಂಡು ಬಂದಿದ್ದಾರೆ.

ನಟ ಕಿಚ್ಚ ಸುದೀಪ್ ತಮ್ಮ ಪತ್ನಿ ಪ್ರಿಯ ಅವರ ಜೊತೆಯಲ್ಲಿ ಬಂದು ಮತಗಟ್ಟೆ ಸಂಖ್ಯೆ 175 ಬೊಮ್ಮನಹಳ್ಳಿಯಲ್ಲಿ ಮತಚಲಾಯಿಸಿದರು. ಇದೇ ವೇಳೆ ಮಾತನಾಡಿದ ಕಿಚ್ಚ "ಎಲ್ಲೆಡೆ ಮತದಾನ ಕಡಿಮೆಯಾಗಿದೆ ಎಂದು ಕೇಳ್ಪಟ್ಟೆ, ನಾನು ಪತ್ನಿ ಜೊತೆ ಮತದಾನ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ಅಭಿವೃದ್ಧಿ ಕೆಲಸ ಆಗಿಲ್ಲ ಎಂದು ದೂರಬೇಡಿ. ಇಂದೇ ಮತ ಚಲಾಯಿಸಿ, ಅಭಿವೃದ್ಧಿಗೆ ನಾಂದಿ ಹಾಡಿ ಎಂದರು.

Sudeep and his wife Priya Sudeep has voted at bommanahalli.

ಹಕ್ಕು ಚಲಾಯಿಸಿದ ಕಿರುತೆರೆಯ ಕಲಾವಿದರು

ಮತದಾನ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮತದಾನ ಮಾಡಿದ ಕಿಚ್ಚ ಸುದೀಪ್ ಹಾಗೂ ಪತ್ನಿಗೆ ಪ್ರಿಯಾ ಅವರಿಗೆ ತುಳಸಿ ಗಿಡವನ್ನ ಉಡುಗೊರೆಯಾಗಿ ನೀಡಿಲಾಯ್ತು. ಕಳೆದ ಒಂದು ತಿಂಗಳಿನಿಂದ ಬಿ ಪ್ಯಾಕ್ ಸಂಸ್ಥೆ ಯಿಂದ ಗಿಡಗಳ ಹಂಚಿಕೆ ಮಾಡುವ ಮೂಲಕ ಮತದಾನದ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.

Sudeep and his wife Priya Sudeep has voted at bommanahalli.

ಬಿ ಪ್ಯಾಕ್ ಸಂಸ್ಥೆಯಿಂದ ಪ್ರಥಮ ಬಾರಿಗೆ ಮತ ಚಲಾಯಿಸುವವರಿಗೂ ಹಾಗೂ ಹಿರಿಯ ನಾಗರಿಕರಿಗೆ ಗಿಡಗಳನ್ನ ವಿತರಿಸಲಾಗುತ್ತಿದ್ದು, ೧೦೦೦ ತುಳಸಿ ಮತ್ತು ಹೂವಿನ ಗಿಡಗಳನ್ನ ಹಂಚಿಕೆ ಮಾಡಲಾಗುತ್ತಿದೆ. ಮತದಾನವನ್ನ ಜಾಗೃತಿ ಮಾಡಿಕೊಂಡು ಬಂದಿರುವ ಬಿ ಪ್ಯಾಕ್ ಸಂಸ್ಥೆ ಬಸವನಗುಡಿ, ಶಿವಾಜಿನಗರ, ಗೋವಿಂದ ರಾಜನಗರ , ಮಲ್ಲೇಶ್ವರಂ ಬಿಟಿಎಂ ಲೇಔಟ್ ನಲ್ಲಿ ಗಿಡಗಳನ್ನ ಹಂಚುತ್ತಿದ್ದಾರೆ.

English summary
Karnataka Assembly Elections 2018 Kannada actor Kiccha Sudeep and his wife Priya Sudeep has voted at bommanahalli.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X