»   » ಟ್ವಿಟ್ಟರ್ ನಲ್ಲಿ ಸುದೀಪ್-ರಕ್ಷಿತ್ ಶೆಟ್ಟಿ ಮಧ್ಯೆ ಮಾತಿನ ಸಮರ, ಸಮರ್ಥನೆ.!

ಟ್ವಿಟ್ಟರ್ ನಲ್ಲಿ ಸುದೀಪ್-ರಕ್ಷಿತ್ ಶೆಟ್ಟಿ ಮಧ್ಯೆ ಮಾತಿನ ಸಮರ, ಸಮರ್ಥನೆ.!

Posted By:
Subscribe to Filmibeat Kannada

ಎಲ್ಲರಿಗಿಂತಲೂ ಕಡಿಮೆ ಮಾತನಾಡಿದ್ರೂ, ಬಹಳ ಯೋಚಿಸಿ, ಕರೆಕ್ಟ್ ಆಗಿ ಮಾತನಾಡುವವರು ಕಿಚ್ಚ ಸುದೀಪ್. ಒಂದೊಂದು ಪದವನ್ನು ಅಳೆದು ತೂಗಿ ಮಾತನಾಡುವುದರಲ್ಲಿ ಸುದೀಪ್ ಎಕ್ಸ್ ಪರ್ಟ್. ಅದಕ್ಕೆ ಅಲ್ವೇ 'ಬಿಗ್ ಬಾಸ್ ಕನ್ನಡ' ಫೇಮಸ್ ಆಗಿದ್ದು.!

ವಾದ ಮಾಡಿದರೂ ಅದಕ್ಕೆ 'ವಾಗ್ವಾದ'ದ ಬಣ್ಣ ಬಳಿಯದೆ, ಮಾತಲ್ಲೇ ಎದುರಾಳಿಯನ್ನು ಸೋಲಿಸುವ ಚಾಣಾಕ್ಷ ಕಿಚ್ಚ ಸುದೀಪ್ ಇಂದು ಟ್ವಿಟ್ಟರ್ ನಲ್ಲಿ ರಕ್ಷಿತ್ ಶೆಟ್ಟಿ ಜೊತೆ ಮಾತಿಗಿಳಿದರು. [ಸುದೀಪ್ ಗಾಗಿ ಚೋರರ ಕಥೆ ಹೆಣೆಯುತ್ತಿರುವ ರಕ್ಷಿತ್]

ರಕ್ಷಿತ್ ಶೆಟ್ಟಿ ಮಾಡಿದ ಒಂದು ಕಾಮೆಂಟ್ ನ ಇಟ್ಟುಕೊಂಡು ಕಿಚ್ಚ ಸುದೀಪ್ ಮಂಡಿಸಿದ ವಾದವೇನು ಎಂಬುದರ ಸಂಪೂರ್ಣ ವರದಿ ಇಲ್ಲಿದೆ, ಕೆಳಗಿರುವ ಸ್ಲೈಡ್ ಗಳಲ್ಲಿ ಟ್ವೀಟ್ ಸಮೇತ ಓದಿರಿ....

ಶುರುವಾಗಿದ್ದು ಎಲ್ಲಿಂದ.?

'ರಂಗಿತರಂಗ' ಸಿನಿಮಾ ಮಾಡಿದ್ದ ಭಂಡಾರಿ ಸಹೋದರರು ಈಗ 'ರಾಜರಥ' ಎಂಬ ಹೊಸ ಚಿತ್ರ ಮಾಡುತ್ತಿದ್ದಾರೆ. ಅವರಿಗೆ ಶುಭಾಶಯ ಕೋರಿ ನಟ ರಕ್ಷಿತ್ ಶೆಟ್ಟಿ ಒಂದು ಟ್ವೀಟ್ ಮಾಡಿದ್ದರು. ಆ ಟ್ವೀಟ್ ನಲ್ಲಿ ಏನಿತ್ತು ಅಂತ ತಿಳಿಯಲು ಮುಂದಿನ ಸ್ಲೈಡ್ ಕ್ಲಿಕ್ ಮಾಡಿ....

ರಕ್ಷಿತ್ ಟ್ವೀಟ್ ನಲ್ಲಿ ಏನಿತ್ತು.?

''ಕನ್ನಡ ಚಿತ್ರಗಳು Transformation (ರೂಪಾಂತರ/ಬದಲಾಗುತ್ತಿರುವ) ಈ ಕಾಲದಲ್ಲಿ ಕೆಲ ನಿರ್ದೇಶಕರ ಕಲಾ ಕೌಶಲ್ಯವನ್ನು ನಾನು ಎದುರು ನೋಡುತ್ತಿದ್ದೇನೆ. ಅಂಥವರ ಪೈಕಿ ಅನೂಪ್ ಭಂಡಾರಿ ಕೂಡ ಒಬ್ಬರು. 'ರಾಜರಥ' ಚಿತ್ರಕ್ಕಾಗಿ ಕಾಯುತ್ತಿದ್ದೇನೆ. ಅನೂಪ್ ಭಂಡಾರಿ, ನಿರೂಪ್ ಭಂಡಾರಿ, ಅವಂತಿಕಾ, ಸತೀಶ್ ಶಾಸ್ತ್ರಿ ಮತ್ತು ಇಡೀ ತಂಡಕ್ಕೆ ನನ್ನ ಶುಭಾಶಯಗಳು'' ಅಂತ ರಕ್ಷಿತ್ ಶೆಟ್ಟಿ ಟ್ವೀಟ್ ಮಾಡಿದ್ದರು. ['ರಂಗಿತರಂಗ' ನಿರ್ಮಾಪಕರಿಗೆ ರಕ್ಷಿತ್ ಶೆಟ್ಟಿನೇ ಬೇಕಂತೆ.!]

ಕಿಚ್ಚ ಸುದೀಪ್ ಕಣ್ಣಿಗೆ ಬಿತ್ತು.!

ರಕ್ಷಿತ್ ಶೆಟ್ಟಿ ಮಾಡಿದ್ದ ಈ ಟ್ವೀಟ್ ಕಿಚ್ಚ ಸುದೀಪ್ ಕಣ್ಣಿಗೆ ಬಿದ್ದಿದೆ. ಟ್ವೀಟ್ ನಲ್ಲಿ Transformation (ಬದಲಾವಣೆ/ರೂಪಾಂತರ) ಅಂತ ರಕ್ಷಿತ್ ಶೆಟ್ಟಿ ಉಲ್ಲೇಖಿಸಿರುವ ಬಗ್ಗೆ ಸುದೀಪ್ ಪ್ರಶ್ನೆ ಕೇಳಲು ಆರಂಭಿಸಿದರು.

ರಕ್ಷಿತ್ ಶೆಟ್ಟಿಗೆ ಸುದೀಪ್ ಪ್ರಶ್ನೆ.!

''ನೀವು ಹೇಳಿರುವ Transformation ಅಂದ್ರೆ ಏನು.? ನಿಮ್ಮ ಉತ್ತರಕ್ಕಾಗಿ ಎದುರು ನೋಡುತ್ತಿದ್ದೇನೆ. ನೀವು ಬರೆದಿರುವ ಸಾಲು ತುಂಬಾ ಇಂಟ್ರೆಸ್ಟಿಂಗ್ ಆಗಿದೆ'' ಅಂತ ಸುದೀಪ್ ಟ್ವೀಟ್ ಮಾಡಿದರು.

ರಕ್ಷಿತ್ ಶೆಟ್ಟಿ ಕೊಟ್ಟ ಉತ್ತರವೇನು.?

''ದಶಕದ ಹಿಂದೆ ಹೊಸ ಅಲೆಯ ಅಥವಾ ಸ್ವಮೇಕ್ ಕನ್ನಡ ಚಿತ್ರಗಳಿಗೆ ಇದ್ದ ಸ್ಕೋಪ್ ತುಂಬಾ ವೀಕ್. ಆದ್ರೀಗ ಹಾಗಿಲ್ಲ. ಎಲ್ಲವೂ ಬದಲಾಗುತ್ತಿದೆ'' ಅಂತ ರಕ್ಷಿತ್ ಶೆಟ್ಟಿ ಉತ್ತರ ಕೊಟ್ಟರು.

ರಕ್ಷಿತ್ ಕೊಟ್ಟ ಉತ್ತರ ಸುದೀಪ್ ಗೆ ತೃಪ್ತಿ ಆಗ್ಲಿಲ್ಲ.!

''ಅದಕ್ಕೆ Acceptance (ಸ್ವೀಕಾರ) ಅಥವಾ ಬದಲಾವಣೆ ಎಂದು ಹೇಳುತ್ತಾರೆ. ಆದ್ರೆ, Transformation ಎಂಬ ಪದಕ್ಕೆ ನಿಮ್ಮ ಸಮರ್ಥನೆ ಏನು.?'' ಅಂತ ಸುದೀಪ್ ಮರುಪ್ರಶ್ನೆ ಮಾಡಿದರು.

ರಕ್ಷಿತ್ ಶೆಟ್ಟಿ ಸಮರ್ಥನೆ

''Transformation ಆದ ನಂತರ Acceptance (ಸ್ವೀಕಾರ) ಬರುವುದು. Transformation ಎಂದರೆ ಇಂತಹ ಚಿತ್ರಗಳನ್ನ ಒಪ್ಪಿಕೊಳ್ಳುವುದು ಎಂದಾಗಬಹುದು'' - ರಕ್ಷಿತ್ ಶೆಟ್ಟಿ

ಸುದೀಪ್ ವರ್ಷನ್ ಕೇಳಿ...

''ದಶಕದ ಹಿಂದೆ ಕೂಡ ಅನೇಕ ಹೊಸ ಅಲೆಯ ಸಿನಿಮಾಗಳು ಬಂದ್ವು. ಅದರಿಂದ ಇಂದಿನ ಸ್ಟಾರ್ ಗಳು ಹುಟ್ಟಿಕೊಂಡಿರುವುದು'' - ಸುದೀಪ್

Transformation ಅಲ್ಲ.!

''ನಮ್ಮನ್ನ ಜನ ಒಪ್ಪಿಕೊಂಡಿದ್ದಾರೆ ಎಂದೇ ಸ್ಟಾರ್ ಗಳು ಹೇಳುತ್ತಿದ್ದರು. ಆದ್ರೆ, Transformation ಅಂತ ಯಾರೂ ಹೇಳಿಲ್ಲ'' - ಸುದೀಪ್

ಮಾತಲ್ಲಿ ಸೋತ್ರಾ ರಕ್ಷಿತ್.?

''ನನಗೆ ಅದರ ಬಗ್ಗೆ ಯಾವುದೇ ಅನುಮಾನ ಇಲ್ಲ. ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆಯ ಸಿನಿಮಾಗಳು ಶುರು ಆಗಿದ್ದು ಈ ದಶಕದಲ್ಲಿ ಅಂತ ನಾನು ಹೇಳ್ತಿಲ್ಲ. ಆದ್ರೆ, Acceptance (ಸ್ವೀಕಾರ) ಮಟ್ಟ ಕೊಂಚ ಜಾಸ್ತಿ ಆಗಿದೆ'' ಅಂತ ಸುದೀಪ್ ಹಾದಿಗೆ ರಕ್ಷಿತ್ ಬಂದರು.

ಮಾತಲ್ಲಿ ಗೆದ್ದ ಸುದೀಪ್.!

''ನಿಮ್ಮ ಬಾಯಿಂದ Acceptance (ಸ್ವೀಕಾರ) ಪದ ಬಂದಿದ್ದು ಅಚ್ಚರಿ ಆಯ್ತು. Transformation ಎನ್ನುವುದೇ ಬೇರೆ. ನಿಮ್ಮ ಈ ದಿನ ಶುಭವಾಗಿರಲಿ. Much Love'' ಅಂತ ಖುಷಿಯಿಂದ ಸುದೀಪ್ ಟ್ವೀಟ್ ಮಾಡಿದ್ದಾರೆ.

ಲವ್ ಯು ಟೂ ಎಂದ ರಕ್ಷಿತ್.!

ವಾದದಲ್ಲಿ ಸೋತ ರಕ್ಷಿತ್ ''ಲವ್ ಯು ಟೂ ಸರ್'' ಎಂದು ಟ್ವೀಟ್ ಮಾಡಿದ್ದಾರೆ.

English summary
Kannada Actor Kiccha Sudeep and Rakshit Shetty had a tweet argument over the line 'Transformation in Kannada Film Industry'. Check out the tweets.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada