Just In
Don't Miss!
- Sports
ಥೈಲ್ಯಾಂಡ್ ಓಪನ್: ಸಮೀರ್, ಸಾತ್ವಿಕ್-ಪೊನ್ನಪ್ಪ ಕ್ವಾರ್ಟರ್ ಫೈನಲ್ಗೆ
- News
ಬೆಂಗಳೂರು; ಜ. 24ರಿಂದ ಕೆಲವು ರೈಲುಗಳ ಸಂಚಾರ ರದ್ದು, ಪಟ್ಟಿ
- Lifestyle
ರುಚಿ ರುಚಿಯಾದ ಸ್ನ್ಯಾಕ್ಸ್ ಕಾರ್ನ್-ಚೀಸ್ ಬಾಲ್ ರೆಸಿಪಿ
- Automobiles
ಬೈಕ್ ಉತ್ಪಾದನೆಯಲ್ಲಿ ಹೊಸ ಮೈಲಿಗಲ್ಲು- 10 ಕೋಟಿ ಬೈಕ್ ಉತ್ಪಾದಿಸಿದ ಹೀರೋ ಮೋಟೊಕಾರ್ಪ್
- Finance
ದಿನದ ಗರಿಷ್ಠ ಮಟ್ಟದಿಂದ 500ಕ್ಕೂ ಹೆಚ್ಚು ಪಾಯಿಂಟ್ ಕುಸಿದ ಸೆನ್ಸೆಕ್ಸ್
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸದ್ಯಕ್ಕಿಲ್ಲ ಸುದೀಪ ಮತ್ತು ಸೂರಿ ಕಾಂಬಿನೇಷನ್ ಸಿನಿಮಾ
ಸ್ಯಾಂಡಲ್ ವುಡ್ ನಲ್ಲಿ ಸದ್ಯ ನಿರ್ದೇಶಕ ಸೂರಿ ಮತ್ತು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ಅವರ ಸಿನಿಮಾದ್ದೇ ಸುದ್ದಿ. ಸುದೀಪ್ ಅವರು ಸದ್ಯ ಸಾಲು-ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಅವರು ಸುಕ್ಕ ಸೂರಿ ನಿರ್ದೇಶನದ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ಚರ್ಚೆ ಜೋರಾಗಿದೆ.
ಸುದೀಪ ಮತ್ತು ಸೂರಿ ಸಿನಿಮಾಗೆ 'ಟಗರು' ಖ್ಯಾತಿಯ ನಿರ್ಮಾಪಕ ಶ್ರೀಕಾಂತ್ ಬಂಡವಾಳ ಹೂಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದ್ರೆ ನಿರ್ದೇಶಕ ಸೂರಿ ಸದ್ಯ ಬೇರೆ ಸಿನಿಮಾಗಳಲ್ಲಿ ಬ್ಯುಸಿ ಇರುವ ಕಾರಣ "ಈ ಸಿನಿಮಾ ಸಧ್ಯಕ್ಕೆ ಇಲ್ಲ, ನನ್ನ ಸಿನಿಮಾವನ್ನು ನಾನೆ ಅನೌನ್ಸ್ ಮಾಡುತ್ತೇನೆ. ಸುಮ್ಮನೆ ಸುದ್ದಿಯಾಗುವುದು ಇಷ್ಟವಿಲ್ಲ" ಎಂದು ಹೇಳಿದ್ದಾರೆ.
ಸುದೀಪ್ ಹಾಗೂ ಸೂರಿ ಕಾಂಬಿನೇಷನ್‌ನಲ್ಲಿ ಸಿನಿಮಾಗಾಗಿ ಅಭಿಮಾನಿಗಳು ಎದುರು ನೋಡುತ್ತಿದ್ದರು, ಹಾಗಾಗಿ ಸೂರಿಯ ಈ ಮಾತು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ. ಸದ್ಯದಲ್ಲೆ ಇಬ್ಬರ ಕಾಂಬಿನೇಷನ್ ನ ಸಿನಿಮಾ ಪ್ರಾರಂಭವಾಗಲಿದೆ ಎಂದುಕೊಂಡಿದ್ದ ಅಭಿಮಾನಿಗಳಿಗೆ ಕೊಂಚ ನಿರಾಸೆಯಾಗಿದೆ. ಆದ್ರೆ ಟಗರು ನಿರ್ದೇಶಕ ಸುದೀಪ ಅವರೊಂದಿಗೆ ಸಿನಿಮಾ ಮಾಡುವುದು ಪಕ್ಕಾ ಯವಾಗಾ, ಹೇಗಿರಲಿದೆ ಸಿನಿಮಾ? ಮುಂದೆ ಓದಿ..
ಸುದೀಪ್ ಜೊತೆ ಸೂರಿ ಸಿನಿಮಾ : ಸಿಹಿ ಸುದ್ದಿ ನೀಡಿದ ನಿರ್ಮಾಪಕ
ಸೂರಿ ಮತ್ತು ಸುದೀಪ್ ಅವರ ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಮುಂದೆ ಓದಿ...

ನನ್ನ ಸಿನಿಮಾ ನಾನೆ ನಿರ್ಧರಿಸುತ್ತೇನೆ
ನಿರ್ದೇಶಕ ಸೂರಿ ಅವರು ಸುದೀಪ ಅವರಿಗೆ ಆಕ್ಷನ್ ಕಟ್ ಹೇಳುತ್ತಾರೆ ಎನ್ನುವ ವಿಚಾರ ಈಗ ಬಾರಿ ಸದ್ದು ಮಾಡುತ್ತಿದೆ. "ಈ ಬಗ್ಗೆ ನಾನೆಲ್ಲೂ ಹೇಳಿಲ್ಲ. ಸುಖಾಸುಮ್ಮನೆ ಸುದ್ದಿ ಆಗುವುದು ಇಷ್ಟವಿಲ್ಲ. ನನ್ನ ಸಿನಿಮಾವನ್ನು ನಾನೆ ನಿರ್ಧಾರ ಮಾಡುತ್ತೇನೆ. ನಾನೆ ಅನೌನ್ಸ್ ಮಾಡುತ್ತೇನೆ" ಎಂದು ಹೇಳಿದ್ದಾರೆ.
ಗಾಂಧಿನಗರದಲ್ಲಿ ಸದ್ದು ಮಾಡುತ್ತಿರುವ ದೊಡ್ಡ ಸುದ್ದಿಗಳಿವು.!

ಸುದೀಪ ಅವರಿಗೆ ಸಿನಿಮಾ ಮಾಡಲು ಸಮಯ ಬೇಕು
ಸುದೀಪ ಅವರು ದೊಡ್ಡ ನಟ. ಅವರನ್ನು 'ರಂಗ ಎಸ್ ಎಸ್ ಎಲ್ ಸಿ' ಸಿನಿಮಾದಿಂದ ನೋಡಿಕೊಂಡು ಬಂದಿದ್ದೇನೆ. ಅವರ ಜೊತೆ ಕೆಲಸ ಮಾಡಬೇಕು ಅಂದ್ರೆ ಸಾಕಷ್ಟು ತಯಾರಿಗಳು ಆಗಬೇಕು. ಸುಮ್ಮನೆ ಸಿನಿಮಾ ಮಾಡಲು ಆಗುವುದಿಲ್ಲ. ಸಾಕಷ್ಟು ಸಮಯ ಹಿಡಿಯುತ್ತೆ. ಕ್ರಿಯೇಟಿವ್ ಆಗಿ ಸಿನಿಮಾ ಮಾಡಬೇಕಾದ್ರೆ ಸಮಯ ಬೇಕು ಎಂದು ಸೂರಿ ಹೇಳಿದ್ದಾರೆ. ದಿಢೀರನೆ ಸಿನಿಮಾ ಅನೌನ್ಸ್ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಶ್ರೀಕಾಂತ್ ಜೊತೆ ಬ್ಯುಸಿನೆಸ್ ಅಗ್ರಿಮೆಂಟ್ ಇದೆ
ಸೂರಿ ನಿರ್ದೇಶನದ 'ಟಗರು' ಚಿತ್ರಕ್ಕೆ ಶ್ರೀಕಾಂತ್ ನಿರ್ಮಾಣ ಮಾಡಿದ್ದಾರೆ. 'ಟಗರು' ನಂತರ ಸೂರಿ 'ಪಾಪ್ ಕಾರ್ನ್ ಮಂಕಿ ಟೈಗರ್' ಚಿತ್ರವನ್ನು ಕೈ ಗೆತ್ತಿಕೊಂಡಿದ್ದಾರೆ. ಈ ಚಿತ್ರಕ್ಕೆ ಮೊದಲು ಕೆಪಿ ಶ್ರೀಕಾಂತ್ ಅವರೆ ಬಂಡವಾಳ ಹೂಡಿದ್ದರು. ಕಾರಣಾಂತರಗಳಿಂದ ಅವರು ಚಿತ್ರದಿಂದ ಹೊರನಡೆದಿದ್ದಾರೆ. ಸದ್ಯ 'ಪಾಪ್ ಕಾರ್ನ್ ಮಂಕಿ ಟೈಗರ್' ಚಿತ್ರಕ್ಕೆ ಸುಧೀರ್ ಬಂಡವಾಳ ಹೂಡುತ್ತಿದ್ದಾರೆ. ಆದ್ರೆ ಶ್ರೀಕಾಂತ್ ಮತ್ತೊಂದು ಸಿನಿಮಾ ಮಾಡುವುದಾಗಿ ಅಗ್ರಿಮೆಂಟ್ ಇದೆ ಎಂದು ಸೂರಿ ಹೇಳಿದ್ದಾರೆ.

ಸೂರಿ ಮುಂದಿನ ಸಿನಿಮಾ 'ಕಾಗೆ ಬಂಗಾರ'
'ಕಾಗೆ ಬಂಗಾರ' ಬಾರಿ ನಿರೀಕ್ಷೆಯ ಸಿನಿಮಾ. 'ಕಾಗೆ ಬಂಗಾರ' ಸಿನಿಮಾ ಬರುತ್ತೆ ಎಂದು ವರ್ಷಗಳಿಂದ ಹೇಳಲಾಗುತ್ತಿದೆ. ಆದ್ರಿನ್ನು ಸೆಟ್ಟೇರಿಲ್ಲ. 'ಪಾಪ್ ಕಾರ್ನ್ ಮಂಕಿ ಟೈಗರ್' ಚಿತ್ರ ಮುಗಿದ ಬಳಿಕ ಸೂರಿ 'ಕಾಗೆ ಬಂಗಾರ' ಕೈಗೆತ್ತಿಕೊಳ್ಳಲಿದ್ದಾರಂತೆ. ಈಗಾಗಲೆ 'ಪಾಪ್ ಕಾರ್ನ್ ಮಂಕಿ ಟೈಗರ್' ಸಿನಿಮಾ ಬಹುತೇಕ ಮುಕ್ತಾಯದ ಹಂತಕ್ಕೆ ಬಂದಿದೆ. ಅಂದ್ಮೇಲೆ ಸಧ್ಯದಲ್ಲೇ 'ಕಾಗೆ ಬಂಗಾರ' ಸಿನಿಮಾ ಸೆಟ್ಟೇರಲಿದೆ. ಹಾಗಾದ್ರೆ ಸುದೀಪ ಮತ್ತು ಸೂರಿ ಸಿನಿಮಾ ಇನ್ನಷ್ಟು ತಡವಾಗುವ ಸಾಧ್ಯತೆ ಇದೆ.