»   » ಬಂದೇಬಿಟ್ಟಿದೆ ಕಾಲ: ಸುದೀಪ್ 'ಕಾಲು ಎಳೆದ' ಉಪೇಂದ್ರ.!

ಬಂದೇಬಿಟ್ಟಿದೆ ಕಾಲ: ಸುದೀಪ್ 'ಕಾಲು ಎಳೆದ' ಉಪೇಂದ್ರ.!

Posted By: Bharath kumar
Subscribe to Filmibeat Kannada

'ಎಲ್ಲರ ಕಾಲೆಳೀತದೆ ಕಾಲ' ಅಂತ ರಿಯಲ್ ಸ್ಟಾರ್ ಉಪೇಂದ್ರ ಹೇಳಿದ ಮಾತು ಈಗ ಮತ್ತೆ ನೆನಪಾಗುತ್ತಿದೆ. ಇದಕ್ಕೆ ಕಾರಣ ಒನ್ಸ್ ಅಗೇನ್ ರಿಯಲ್ ಡೈರೆಕ್ಟರ್ ಉಪೇಂದ್ರ.

ಹೌದು, ಕಾಲೆಳೆಯೋದ್ರಲ್ಲಿ ಉಪೇಂದ್ರ ನಿಸ್ಸೀಮ ಅಂತ ಸ್ಪೆಷಲ್ ಆಗಿ ಸರ್ಟಿಫಿಕೇಟ್ ಕೊಡೋದೇ ಬೇಕಾಗಿಲ್ಲ. ಯಾಕಂದ್ರೆ, 'ಎ' ಚಿತ್ರದಿಂದ ಹಿಡಿದು 'ಉಪ್ಪಿ-2' ಚಿತ್ರದವರೆಗೂ ಒಂದಲ್ಲ ಒಂದು ವಿಷಯವನ್ನಿಟ್ಟುಕೊಂಡು 'ಎಲ್ಲರ ಕಾಲನ್ನೂ ಎಳೆದಿದ್ದಾರೆ' ಉಪೇಂದ್ರ.

'ನಾನ್ ಕಾಲು ಎಳೀತದೆ ಕಾಲ' ಅಂತ ಹೇಳಿಕೊಂಡು ಸ್ಯಾಂಡಲ್ ವುಡ್ ನಟರ ಕಾಲು ಎಳೆದಿದ್ದ ಉಪೇಂದ್ರ, ಈಗ ಟ್ವಿಟ್ಟರ್ ನಲ್ಲಿ ಸುದೀಪ್ ಕಾಲು ಎಳೆಯುತ್ತಿದ್ದಾರೆ.[ಹೀಗೂ ಉಂಟೆ! ಯಶ್ ಬಾಯಲ್ಲಿ 'ಬ್ಯಾಟು-ಬಾಲ್' ಬಂದಿದ್ದಕ್ಕೆ ಉಪ್ಪಿ-ಸುದೀಪ್ ಚರ್ಚೆ?]

ಕಳೆದ ಎರಡು ದಿನಗಳಿಂದ ಕಿಚ್ಚ ಸುದೀಪ್ ಹಾಗೂ ಉಪೇಂದ್ರ ನಡುವೆ ಟ್ವಿಟ್ಟರ್ ನಲ್ಲಿ ಆಗುತ್ತಿರುವ ಪ್ರಶ್ನೋತ್ತರ ಕಾರ್ಯಕ್ರಮ ನಿಮಗೆಲ್ಲಾ ಗೊತ್ತಿದೆ. ಉಪೇಂದ್ರ ಕೇಳುತ್ತಿರುವ ಪ್ರಶ್ನೆಗಳಿಗೆ, ತಮ್ಮದೇ ಶೈಲಿಯಲ್ಲಿ ಸುದೀಪ್ ಉತ್ತರ ಕೊಡುತ್ತಾ ಬಂದಿದ್ದಾರೆ. ಹೀಗಿರುವಾಗಲೇ, 'ಕಾಂಪಿಟೇಷನ್' ಬಗ್ಗೆ ಟಾಪಿಕ್ ತೆಗೆದು ಸುದೀಪ್ ಕಾಲು ಎಳೆಯಲು ಶುರು ಮಾಡಿದ್ದಾರೆ ಉಪೇಂದ್ರ.!

ಉಪ್ಪಿಯ ಪ್ರಶ್ನೆ ಏನು?

''ಕಾಂಪಿಟೇಷನ್ ಅಂದ್ರೆ ಏನು? ನಿಮ್ಮ ಜೊತೆ ನೀವೇ ಕಾಂಪೀಟ್ ಮಾಡ್ಕೊಂಡು ಗೆಲ್ಲೋಕೆ ಇಷ್ಟ ಪಡುತ್ತೀರಾ? ಬೇರೆಯವರ ಜೊತೆ ಕಾಂಪೀಟ್ ಮಾಡಿ ಗೆಲ್ಲೋಕೆ ಇಷ್ಟ ಪಡುತ್ತೀರಾ? ನನಗೆ ತುಂಬಾ ಫ್ರಾಂಕ್ ಒಪೀನಿಯನ್ ಬೇಕು'' ಅಂತ ವಿಡಿಯೋ ಮೂಲಕ ಸುದೀಪ್ ರವರಿಗೆ ಉಪೇಂದ್ರ ಪ್ರಶ್ನೆ ಕೇಳಿದ್ದರು.(ಇಲ್ಲಿದೆ ನೋಡಿ ಆ ವಿಡಿಯೋ)

ಸುದೀಪ್ ಕೊಟ್ಟ ಉತ್ತರ

''ಒಬ್ಬರೇ ಬಂದಿರುವುದು ಸತ್ಯ, ಒಬ್ಬರೇ ಹೋಗುವುದು ಕೂಡ ಅಷ್ಟೇ ಸತ್ಯ. ಇನ್ನೊಬ್ಬರ ಮೇಲೆ ಚಾಲೆಂಜ್ ಮಾಡಿ ಅರ್ಥವಿಲ್ಲ. ನಮ್ಮನ್ನ ನಾವು ಗೆಲ್ಲಬೇಕು ಮೊದಲು. ನಮ್ಮನ್ನ ನಾವೇ ನೋಡ್ಕೊಂಡು ಇನ್ನೂ ಏನು ಬದಲಾವಣೆ ಮಾಡಿಕೊಳ್ಳಬೇಕು ಅಂತ ಕಲಿಯಬೇಕು. ಕಾಂಪಿಟೇಷನ್ ಅಂದ್ರೆ ಅದು ನನಗೆ ಮಾತ್ರ. ಚಾಲೆಂಜ್ ಎನ್ನುವುದು ನನಗೆ ನಾನೇ ಹಾಕಿಕೊಳ್ಳುವುದು. ಬೇರೆಯವರ ಜೊತೆಯಲ್ಲ'' ಅಂತ ಉಪ್ಪಿ ಪ್ರಶ್ನೆಗೆ ಸುದೀಪ್ ಉತ್ತರ ಕೊಟ್ಟರು. (ಇಲ್ಲಿದೆ ನೋಡಿ ಆ ವಿಡಿಯೋ)

ಕಿಚ್ಚನ ಕಾಲೆಳೆದ ಉಪೇಂದ್ರ

ಉಪ್ಪಿ ಕೇಳಿದ 'ಕಾಂಪಿಟೇಷನ್ ಅಂದ್ರೆ ಏನು' ಎಂಬ ಪ್ರಶ್ನೆಗೆ, ಸುದೀಪ್ ಉತ್ತರದಲ್ಲಿ 'ಫಿಲಾಸಫಿ' ಇತ್ತು. ಅದನ್ನ ಕೇಳಿದ್ಮೇಲೆ, ಉಪೇಂದ್ರ ಮತ್ತೊಂದು ಗೂಗ್ಲಿ ಬಾಲ್ ಹಾಕಿದರು. (ಟ್ವಿಟ್ಟರ್ ಸ್ಪರ್ಧೆ: ಸುದೀಪ್-ಉಪೇಂದ್ರ ಇಬ್ಬರಲ್ಲಿ 'ಬ್ಯಾಟ್' ಯಾರು.? 'ಬಾಲ್' ಯಾರು.?)

ಕಿಚ್ಚನ ಕಾಲೆಳೆದ ಉಪ್ಪಿ

''ಒಂಥರಾ ಚೆನ್ನಾಗಿದೆ. ಆದ್ರೆ, ನೀವು ಹೇಳುವ ಪ್ರಕಾರ ನಮ್ ಜೊತೆ ನಾವೇ ಕಾಂಪೀಟ್ ಮಾಡಿಕೊಳ್ಳಬೇಕು. ಹಾಗಾದ್ರೆ, ನಾವೇ ನಮ್ಮ ಚಿತ್ರವನ್ನ ಶೂಟ್ ಮಾಡಿ, ಅದನ್ನ ನಮ್ಮ ಹೋಮ್ ಥಿಯೇಟರ್ ನಲ್ಲಿ ಹಾಕ್ಕೊಂಡು ನೋಡಿ, ಇದು ಇನ್ನೂ ಸರಿಯಿಲ್ಲ. ಇದಕ್ಕಿಂತ ಬೆಟರ್ ಮಾಡಬೇಕು ಅಂತ ಇನ್ನೊಂದು ಸಿನಿಮಾ ನೋಡಿ, ನಮ್ಮನ್ನ ನಾವೇ ನೋಡ್ಕೊಂಡು ನೋಡ್ಕೊಂಡು ನಮಗೆ ನಾವೇ ಇಂಪ್ರೂವ್ ಮಾಡ್ಕೊಂಡು ಖುಷಿಯಾಗಿ ಇರಬಹುದು ಅಲ್ವಾ? ಕಾಂಪಿಟೇಷನ್ ಅಂದ್ರೆ ಇನ್ನೊಬ್ಬರು ಜೊತೆಯಲ್ಲಿದ್ರೆ ಅಲ್ವಾ? ನನಗೆ ಸ್ವಲ್ಪ ಕನ್ ಫ್ಯೂಷನ್ ಇದೆ. ಕ್ಲಾರಿಟಿ ಕೊಡ್ತಿರಾ?'' ಸುದೀಪ್ ಕಾಲೆಳೆಯಲು ಉಪೇಂದ್ರ ಶುರುಮಾಡಿದರು.(ಇಲ್ಲಿದೆ ನೋಡಿ ಆ ವಿಡಿಯೋ)

ತರ್ಲೆ ಪ್ರಶ್ನೆ.!

ಉಪೇಂದ್ರ ಅವರ ಈ ಪ್ರತಿಕ್ರಿಯೆ ನೋಡಿ, ''ಇದು ಎಷ್ಟು ತರ್ಲೆ ಪ್ರಶ್ನೆ ಅಂತ ಗೊತ್ತಾಗುತ್ತಿದೆ'' ಅಂತ ಸುದೀಪ್ ನಗು ನಗುತ್ತಲೇ ಮಾತನಾಡಲು ಆರಂಭಿಸಿದರು. ''ಸರ್, ನಾನು ಕಲಾವಿದನಾಗಿರುವುದೇ ಜನರನ್ನ ಸಂಪಾದನೆ ಮಾಡುವುದಕ್ಕೆ, ಸಾಧನೆ ಮಾಡುವುದಕ್ಕೆ. ಇನ್ನೊಬ್ಬರಿಗೆ ಚಾಲೆಂಜ್ ಮಾಡಿದ್ರೆ ಸಾಧನೆ ಆಗಲಿ ಜನರುಗಳನ್ನಾಗಲಿ ಸಂಪಾದನೆ ಮಾಡುವುದಕ್ಕೆ ಆಗಲ್ಲ. ಇನ್ನೊಬ್ಬರು ಗೆಲ್ಲುವುದರಿಂದ ನಾನು ಸೋಲಲ್ಲ. ಅಥವಾ ಇನ್ನೊಬ್ಬರು ಸೋಲುವುದರಿಂದ ನಾವು ಗೆಲ್ಲಲ್ಲ. ನಾವು ಗೆಲ್ಲೋದು ನಮ್ಮ ಶ್ರಮದಿಂದ, ನಾವು ಸೋಲುವುದು ನಮ್ಮ ತಪ್ಪಿನಿಂದ'' - ಸುದೀಪ್ (ಇಲ್ಲಿದೆ ನೋಡಿ ಆ ವಿಡಿಯೋ)

ಹೋಮ್ ಥಿಯೇಟರ್ ನಲ್ಲಿ ಸಿನಿಮಾ ನೋಡಿದ್ರೆ ಸಾಧನೆ ಬರಲ್ಲ

''ಹೋಮ್ ಥಿಯೇಟರ್ ನಲ್ಲಿ ಸಿನಿಮಾ ನೋಡಬಹುದು. ಆದ್ರೆ ಸಾಧನೆ ಬರಲ್ಲ ಸರ್. ಕಲಾವಿದರಾಗಿ ಉಪಯೋಗವಿಲ್ಲ. ನಾವು ಸಾಧನೆ ಮಾಡುವುದೇ ಜನಗಳ ಮಧ್ಯೆ ಹೋದಾಗ. ಕಲೆಯಲ್ಲಿ ಕಾಂಪಿಟೇಷನ್ ಬೇಡ. ನಾವು ಜೀವನದಲ್ಲಿ ಮುಂದೆ ಹೋಗುವುದಕ್ಕೆ ಇನ್ನೊಬ್ಬರು ಸೋಲಬೇಕಿಲ್ಲ. ಹಾಗೆ ನನಗೆ ಕಾಂಪಿಟೇಷನ್ ಅವಶ್ಯಕತೆಯಿಲ್ಲ ಸರ್'' ಎಂದು ಉತ್ತರಿಸಿದ್ದಾರೆ ಸುದೀಪ(ಇಲ್ಲಿದೆ ನೋಡಿ ಆ ವಿಡಿಯೋ)

ಕಿಚ್ಚನಿಗೆ ಭೇಷ್ ಎಂದ ಉಪೇಂದ್ರ

ಸುದೀಪ್ ಅವರ ಈ ಉತ್ತರ ಕೇಳಿ, ಖುಷಿಯಾದ ಉಪೇಂದ್ರ, 'ಸೂಪರ್' ಅಂತ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.[ ಟ್ವಿಟ್ಟರ್ ಸ್ಪರ್ಧೆ: ಸುದೀಪ್-ಉಪೇಂದ್ರ ಇಬ್ಬರಲ್ಲಿ 'ಬ್ಯಾಟ್' ಯಾರು.? 'ಬಾಲ್' ಯಾರು.?]

ಕಿಚ್ಚನಿಗೆ ಕಿವಿ ಮಾತು ಹೇಳಿದ ಉಪ್ಪಿ

''ಕಲೆ ಇಲ್ಲದ ಕಲೆ ಇಲ್ಲ ಕಾಂತ. ಕಲೆಗೆ ಬೆಲೆ ಕಟ್ಟುವ ಗಾಂಧಿನಗರದ ತಲೆಯಿರುವವರೆಗೂ ಶಿಲೆ ಕಾಣುವುದಲ್ಲದೇ ಕಲೆ ಕಾಣವುದೇ ಕಾಂತ, ಐ ಲೈಕ್ ಇಟ್....ಐ ಲೈಕ್ ಇಟ್....ಸೂಪರ್'' ಎಂದರು.(ಇಲ್ಲಿದೆ ನೋಡಿ ಆ ವಿಡಿಯೋ)

English summary
Real Star Upendra has taken his Twitter Account to ask question for Kiccha Sudeep on 'Competition in Sandalwood'. Here is the detailed report on Upendra's Questions and Sudeep's Answers in Twitter.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada