For Quick Alerts
  ALLOW NOTIFICATIONS  
  For Daily Alerts

  ಟ್ವಿಟ್ಟರ್ ಕಾಂಪಿಟೇಷನ್: 'ಉಪೇಂದ್ರ' ಕೇಳಿದ ಪ್ರಶ್ನೆಗೆ 'ಕಿಚ್ಚನ' ಉತ್ತರ ಇಲ್ಲಿದೆ

  By Bharath Kumar
  |

  ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಾಗೂ ರಿಯಲ್ ಸ್ಟಾರ್ ಉಪೇಂದ್ರ ಮಧ್ಯೆ ಟ್ವಿಟ್ಟರ್ ಕಾಂಪಿಟೇಷನ್ ನಡೆಯುತ್ತಿದೆ ಅಂತ ಫಿಲ್ಮಿಬೀಟ್ ನಲ್ಲಿ (ಅಕ್ಟೋಬರ್ 24) ನಾವೇ ವರದಿ ಮಾಡಿದ್ವಿ. ಟ್ವಿಟ್ಟರ್ ನಲ್ಲಿ ಕಿಚ್ಚನಿಗೆ ಉಪ್ಪಿ, ಒಂದು ಪ್ರಶ್ನೆ ಕೇಳಿದ್ದರು, ಅದಕ್ಕೆ ಸುದೀಪ್ ಕೂಡ ಪ್ರತಿಕ್ರಿಯೆ ಕೊಟ್ಟಿದ್ದರು.

  ಕೇವಲ ಪ್ರತಿಕ್ರಿಯೆ ಕೊಟ್ಟಿದ್ದ ಸುದೀಪ್, ಉಪ್ಪಿಯ ಪ್ರಶ್ನೆಗೆ ಉತ್ತರ ಕೊಟ್ಟಿರಲಿಲ್ಲ. ಆದರೆ, ಈಗ ಆ ಪ್ರಶ್ನೆಗೆ ಉತ್ತರ ಕೊಟ್ಟಿದ್ದು, ಎರಡನೇ ಪ್ರಶ್ನೆಗೆ ಆಹ್ವಾನ ಮಾಡಿದ್ದಾರೆ. ಏನಪ್ಪಾ ಇದು, ಟ್ವಿಟ್ಟರ್ ಅಂತಾರೆ, ಪ್ರಶ್ನೆ-ಉತ್ತರ ಅಂತಾರೆ ಅಂತ ತಲೆಕೆಡಿಸಿಕೊಳ್ಳಬೇಡಿ. ನಿಮ್ಮ ಕನ್ ಫ್ಯೂಷನ್ ಗೆ ಒಂದು ಸಣ್ಣ ಫ್ಲ್ಯಾಶ್ ಬ್ಯಾಕ್ ಇಲ್ಲಿದೆ..

  ಕಿಚ್ಚ ಸುದೀಪ್ ಹಾಗೂ ರಿಯಲ್ ಸ್ಟಾರ್ ಉಪೇಂದ್ರ ಒಟ್ಟಾಗಿ ಅಭಿನಯಿಸಿರುವ 'ಮುಕುಂದ ಮುರಾರಿ' ಚಿತ್ರದ ಪ್ರಮೋಷನ್ ಗಾಗಿ ಉಪೇಂದ್ರ, 'ಬಿಗ್ ಬಾಸ್' ವೇದಿಕೆಗೆ ಅತಿಥಿಯಾಗಿ ಬಂದಿದ್ದರು. ಈ ವೇಳೆ ಸುದೀಪ್, ಉಪ್ಪಿಗೆ ಹಲವು ಪ್ರಶ್ನೆಗಳನ್ನ ಕೇಳಿದರು. ಕಿಚ್ಚ ಕೇಳಿದ ಎಲ್ಲ ಪ್ರಶ್ನೆಗಳಿಗೂ ತನ್ನದೇ ಆದ ಸ್ಟೈಲ್ ನಲ್ಲಿ ಉಪೇಂದ್ರ ಉತ್ತರ ಕೊಟ್ಟಿದ್ದರು. [ಟ್ವಿಟ್ಟರ್ ಸ್ಪರ್ಧೆ: ಸುದೀಪ್-ಉಪೇಂದ್ರ ಇಬ್ಬರಲ್ಲಿ 'ಬ್ಯಾಟ್' ಯಾರು.? 'ಬಾಲ್' ಯಾರು.?]

  ಆದರೆ, ಕಿಚ್ಚ ಸುದೀಪ್ ಗೆ ಉಪ್ಪಿ ಕೆಲ ಪ್ರಶ್ನೆಗಳನ್ನ ಕೇಳಲು ಮುಂದಾದಾಗ ನಿಮ್ಮ ಪ್ರಶ್ನೆಯನ್ನ ಟ್ವಿಟ್ಟರ್ ನಲ್ಲಿ ಕೇಳಿ ಅಲ್ಲಿಯೇ ಉತ್ತರ ನೀಡುತ್ತೇನೆ ಅಂತ ಕಿಚ್ಚ ಹೇಳಿದ್ದರು. ಕೊಟ್ಟ ಮಾತಿನಂತೆ ಉಪೇಂದ್ರ, ಸುದೀಪ್ ಗೆ ಟ್ವಿಟ್ಟರ್ ನಲ್ಲಿ ಪ್ರಶ್ನೆ ಕೇಳಿದ್ದು, ಉತ್ತರಕ್ಕಾಗಿ ಕಾಯುತ್ತಿದ್ದರು. ಈಗ ಉಪ್ಪಿಯ ಪ್ರಶ್ನೆಗೆ ಸುದೀಪ್ ಉತ್ತರ ಕೊಟ್ಟಿದ್ದಾರೆ. ಏನದು ಆ ಉತ್ತರ ಅಂತ ಇಲ್ಲಿದೆ ನೋಡಿ...

  ಉಪೇಂದ್ರ ಕೇಳಿದ್ದ ಪ್ರಶ್ನೆ

  ಉಪೇಂದ್ರ ಕೇಳಿದ್ದ ಪ್ರಶ್ನೆ

  ''ನಾವಿಬ್ಬರು ಸೇರಿ ಒಂದು ಸಿನಿಮಾ ಮಾಡಿದ್ದೀವಿ. ಅದರಲ್ಲಿ ಒಬ್ಬರು ಬ್ಯಾಟ್, ಒಬ್ಬರು ವಿಕೆಟ್ ಅಂತ ಎಲ್ಲೋ ಒಂದು ಕಡೆಯಿಂದ ಕೇಳದೆ, ನಮ್ಮಿಬ್ಬರ ಮಧ್ಯೆ ಬ್ಯಾಟ್ ಯಾರು? ವಿಕೆಟ್ ಯಾರು? ಉತ್ತರ ಕೊಡಿ'' - ಅಂತ ಉಪೇಂದ್ರ ಪ್ರಶ್ನೆ ಮಾಡಿದ್ದರು.[ಆ ವಿಡಿಯೋ ಇಲ್ಲಿದೆ ನೋಡಿ]

  ಉಪ್ಪಿ ಪ್ರಶ್ನೆಗೆ ಮರು ಪ್ರಶ್ನೆ ಹಾಕಿದ್ದ ಕಿಚ್ಚ

  ಉಪ್ಪಿ ಪ್ರಶ್ನೆಗೆ ಮರು ಪ್ರಶ್ನೆ ಹಾಕಿದ್ದ ಕಿಚ್ಚ

  ''ಮುರಾರಿ ಆಗಿರುವ ಉಪ್ಪಿ ಸಾರ್ ಅವರಿಗೆ ಕಿಚ್ಚನ ನಮಸ್ಕಾರ, ನಿನ್ನೆ ರಾತ್ರಿ ನೀವು ಒಂದು ಪ್ರಶ್ನೆ ಹಾಕಿದ್ರಿ? ಬ್ಯಾಟ್ ಯಾರು, ವಿಕೆಟ್ ಯಾರು ಅಂತ? ಕ್ರಿಕೆಟ್ ನಲ್ಲಿ ಬಾಲ್ ಬಹಳ ಇಂಪಾರ್ಟೆಂಟ್ ಉಪ್ಪಿ ಸಾರ್. ಬಾಲ್ ಯಾರು ಅಂತ ತಾವು ನನಗೆ ಫಸ್ಟ್ ಹೇಳಿ. ನಮ್ಮಿಬ್ರಲ್ಲಿ ಬ್ಯಾಟ್ ಯಾರು, ವಿಕೆಟ್ ಯಾರು ಅಂತ ಹೇಳ್ತಿನಿ'' - ಅಂತ ಸುದೀಪ್ ವಿಡಿಯೋ ಕಳುಹಿಸಿದ್ದರು[ಆ ವಿಡಿಯೋ ಇಲ್ಲಿದೆ ನೋಡಿ]

  ಮತ್ತೆ ಸುದೀಪ್ ಅಂಗಳಕ್ಕೆ ಬಂದ ಪ್ರಶ್ನೆ

  ಮತ್ತೆ ಸುದೀಪ್ ಅಂಗಳಕ್ಕೆ ಬಂದ ಪ್ರಶ್ನೆ

  ''ಸುದೀಪ್, ಬಾಲ್ ಯಾರು ಅಂತ ನೀವು ಕೇಳ್ತಾ ಇದ್ದೀರಾ. ಮೊದಲು ಆ ಬಾಲು, 'ಕಾರ್ಕ್ ಬಾಲ್', 'ಟೆನ್ನಿಸ್ ಬಾಲ್', 'ಲೆದರ್ ಬಾಲ್' ಇಲ್ಲ, ಬ್ಲೋ ಹೋಗಿರುವ 'ಟುಸ್ ಬಾಲ್' ಅಂತ ನೀವೇ ಹೇಳಿ. ಅಮೇಲೆ ಆ ಬಾಲ್ ಯಾರು ಅಂತ ನಾನು ಹೇಳ್ತಿನಿ'' ಅಂತ ಮತ್ತೆ ಬಾಲ್ ನ ಸುದೀಪ್ ಅಂಗಳಕ್ಕೆ ಹೊಡೆದಿದ್ದರು.[ಆ ವಿಡಿಯೋ ಇಲ್ಲಿದೆ ನೋಡಿ]

  ಉಪ್ಪಿಯ 'ಬ್ಯಾಟ್-ವಿಕೆಟ್' ಪ್ರಶ್ನೆಗೆ ಕಿಚ್ಚನ ಉತ್ತರ

  ಉಪ್ಪಿಯ 'ಬ್ಯಾಟ್-ವಿಕೆಟ್' ಪ್ರಶ್ನೆಗೆ ಕಿಚ್ಚನ ಉತ್ತರ

  ''ನನ್ನ ಪ್ರಕಾರ ಬಾಲ್ ಅಂದ್ರೆ ಸಿಚುವೇಷನ್ (situation), ಬೇರೆ ಬೇರೆ ರೀತಿಯ ಸಿಚುವೇಷನ್ ಬರ್ತಾ ಇರುತ್ತೆ ನಮಗೆ, ಬ್ಯಾಟ್ ಎನ್ನುವುದು ಬುದ್ದಿವಂತಿಕೆ. ಆ ಬುದ್ದಿವಂತಿಕೆ ಎನ್ನುವ ಬ್ಯಾಟ್ ಹಿಡಿದುಕೊಂಡು, ಬರ್ತಾ ಇರುವ 'ಬಾಲ್' ಅಂದ್ರೆ ಸಿಚುವೇಷನ್ಸ್ ನ ಹೇಗೆ ಫೇಸ್ ಮಾಡುತ್ತೇವೆ ಎನ್ನುವುದರ ಮೇಲೆ ನಿರ್ಧಾರವಾಗುತ್ತೆ. ವಿಕೆಟ್ ಎನ್ನುವುದು ಜೀವನ. ಈ ಸಿಚುವೇಷನ್ಸ್ ನ ಸರಿಯಾಗಿ ನಾವು ನಿಯಂತ್ರಣ ಮಾಡದೆ ಹೋದರೆ, ವಿಕೆಟ್ ಉದುರಿ ಹೋಗುತ್ತೆ'' ಅಂತ ಉಪ್ಪಿಯ ಪ್ರಶ್ನೆಗೆ ಕಿಚ್ಚ ಉತ್ತಮ ಉತ್ತರ ಕೊಟ್ಟಿದ್ದಾರೆ. [ಆ ವಿಡಿಯೋ ಇಲ್ಲಿದೆ ನೋಡಿ]

  ಸುದೀಪ್ ಪ್ರಕಾರ 'ಬ್ಯಾಟ್, ಬಾಲ್, ವಿಕೆಟ್' ಎಂದರೆ

  ಸುದೀಪ್ ಪ್ರಕಾರ 'ಬ್ಯಾಟ್, ಬಾಲ್, ವಿಕೆಟ್' ಎಂದರೆ

  ''ಸೋ ನನ್ನ ಪ್ರಕಾರ ಬಾಲ್ ಎನ್ನುವುದು ಸಿಚುವೇಷನ್, ಬ್ಯಾಟ್ ಎನ್ನುವುದು ಬುದ್ದಿವಂತಿಕೆ, ವಿಕೆಟ್ ಎನ್ನುವುದು ಜೀವನ. ನಿಮ್ಮ ಪ್ರಶ್ನೆಗೆ ಉತ್ತರ ಸರಿಯಾಗಿ ಕೊಟ್ಟಿದ್ದೀನಿ ಅಂತ ನಾನ್ ಅಂದುಕೊಂಡಿದ್ದೀನಿ. ಈಗ ತಾವು ಹೇಳಬೇಕು, ಸರಿನಾ? ತಪ್ಪಾ? ಅಂತ''- ಸುದೀಪ್ ಹೇಳಿದ್ದಾರೆ.

  ಉಪ್ಪಿಯ ಎರಡನೇ ಪ್ರಶ್ನೆ?

  ಉಪ್ಪಿಯ ಎರಡನೇ ಪ್ರಶ್ನೆ?

  ಕಿಚ್ಚನ ಬುದ್ದಿವಂತಿಕೆಯ ಉತ್ತರ ನೋಡಿದ 'ಬುದ್ದಿವಂತ'. ''Soooper Sudeep'' ಅಂತ ಟ್ವೀಟ್ ಮಾಡಿದ್ದಾರೆ. ಉಪೇಂದ್ರ ಅವರ ಎರಡನೇ ಪ್ರಶ್ನೆಗಾಗಿ ಕಿಚ್ಚ ಸುದೀಪ್ ಕಾಯುತ್ತಿದ್ದಾರೆ. ಮತ್ತೊಂದೆಡೆ ಎರಡನೇ ಪ್ರಶ್ನೆ ಏನು ಎಂಬುದು ಕುತೂಹಲ ಹುಟ್ಟಿಹಾಕಿದೆ. ಕಾದು ನೋಡೋಣ. ಉಪೇಂದ್ರ ಅವರ ಮುಂದಿನ ಪ್ರಶ್ನೆ ಏನು ಅಂತ. ಮುಂದಿನ ಪ್ರಶ್ನೆ ಹಾಗೂ ಉತ್ತರಕ್ಕಾಗಿ ನಿರೀಕ್ಷಿಸಿ.............

  English summary
  After respecting Kiccha Sudeep's words in 'Bigg Boss Kannada 4' stage, Real Star Upendra has taken his Twitter Account to ask questions for Kiccha Sudeep through videos. Now Sudeep has given answer to Upendra's 1st Question in Twitter. Here is the detailed report.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X