»   » ತಮಿಳು ನಟ ಸೂರ್ಯ ಬಗ್ಗೆ ಸುದೀಪ್ ಹೀಗ್ಯಾಕಂದ್ರು.?

ತಮಿಳು ನಟ ಸೂರ್ಯ ಬಗ್ಗೆ ಸುದೀಪ್ ಹೀಗ್ಯಾಕಂದ್ರು.?

Posted By:
Subscribe to Filmibeat Kannada
ತಮಿಳು ನಟ ಸೂರ್ಯ ಬಗ್ಗೆ ಸುದೀಪ್ ಹೀಗ್ಯಾಕಂದ್ರು.? | FIlmibeat Kannada

ಕಿಚ್ಚ ಸುದೀಪ್ ಕನ್ನಡದಲ್ಲಿ ಮಾತ್ರವಲ್ಲದೇ ಬೇರೆ ಭಾಷೆಗಳಲ್ಲೂ ಛಾಪು ಮೂಡಿಸಿರುವ ಕಲಾವಿದ. ಬೇರೆ ಭಾಷೆಯ ನಟರ ಜೊತೆಯೂ ಉತ್ತಮ ಸ್ನೇಹ ಸಂಬಂಧ ಹೊಂದಿರುವ ಸ್ಯಾಂಡಲ್ ವುಡ್ ನಟ. ಅದರಲ್ಲೂ ತಮಿಳು ನಟ ಸೂರ್ಯ ಅವರಂದ್ರೆ ಒಂದು ರೀತಿ ಸೆಂಟಿಮೆಂಟ್ ಎನ್ನಬಹುದು.

ಹೀಗಾಗಿ, ನಟ ಸೂರ್ಯ ಅವರಿಗೆ ಕಿಚ್ಚ ಸುದೀಪ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ''ಸೂರ್ಯ ಅವರು ಗ್ರೇಟ್ ವ್ಯಕ್ತಿ ಹಾಗೂ ನನ್ನ ಆತ್ಮೀಯ ಸ್ನೇಹಿತ'' ಎಂದು ಟ್ವಿಟ್ಟರ್ ನಲ್ಲಿ ಸಹ ನಟನ ಬಗ್ಗೆ ಪ್ರಶಂಸಿದ್ದಾರೆ.

ಅಮಿತಾಬ್ ಬಚ್ಚನ್ ನಂತರ ಕಿಚ್ಚ ಸುದೀಪ್.!

Sudeep appreciate to tamil actor suriya

ಅಷ್ಟಕ್ಕೂ, ಸುದೀಪ್ ಅವರು ಸೂರ್ಯ ಬಗ್ಗೆ ಹೀಗೆ ಯಾಕೆ ಹೇಳಿದ್ರು ಎನ್ನುವುದಕ್ಕೂ ಒಂದು ಸಣ್ಣ ಕಥೆ ಇದೆ. ತಮಿಳು ನಟ ಸೂರ್ಯ ಅಭಿನಯಿಸಿದ್ದ 'ಸಿಂಗಂ-2' ಚಿತ್ರದ ಆಡಿಯೋ ಬಿಡುಗಡೆ ಸಮಾರಂಭಕ್ಕೆ ಸುದೀಪ್ ವಿಶೇಷ ಅತಿಥಿಯಾಗಿ ಹೋಗಿದ್ದರು. ಒಂದೇ ವೇದಿಕೆಯಲ್ಲಿ ಇಬ್ಬರು ಒಟ್ಟಾಗಿದ್ದರು. ಈ ವಿಡಿಯೋವನ್ನ ಅಭಿಮಾನಿಯೊಬ್ಬ ಸುದೀಪ್ ಅವರಿಗೆ ಶೇರ್ ಮಾಡಿದ್ದಾರೆ.

'ಸುದೀಪ್'ಗಾಗಿ ಕನ್ನಡ ಕಲಿಯುತ್ತಿರುವ ತಮಿಳು ಅಭಿಮಾನಿ: ಕಾರಣವೇನು.?

ಸೂರ್ಯ ಮತ್ತು ಸುದೀಪ್ ಅವರು ಒಟ್ಟಿಗೆ ಇರುವ ಈ ವಿಡಿಯೋ ಶೇರ್ ಮಾಡಿರುವ ಅಭಿಮಾನಿ ''ಹೆಚ್ಚು ತಮಿಳು ಚಿತ್ರಗಳಲ್ಲಿ ನಟಿಸಿ ಮತ್ತು ಸೂರ್ಯ ಅವರ ಜೊತೆಯೂ ಒಂದು ಸಿನಿಮಾ ಮಾಡಿ'' ಎಂದು ಮನವಿ ಮಾಡಿಕೊಂಡಿದ್ದಾರೆ.

ಈ ವಿಡಿಯೋ ನೋಡಿ ಸಂತಸಗೊಂಡ ಸುದೀಪ್ ''ಈ ವಿಡಿಯೋ ಪೋಸ್ಟ್ ಮಾಡಿದ್ದಕ್ಕೆ ಥ್ಯಾಂಕ್ ಯೂ ಫ್ರೆಂಡ್. ಸೂರ್ಯ ಅವರ ಗ್ರೇಟ್ ವ್ಯಕ್ತಿ ಹಾಗೂ ನನ್ನ ಆತ್ಮೀಯ ಸ್ನೇಹಿತ. ಅವರ ಜೊತೆ ವೇದಿಕೆ ಹಂಚಿಕೊಂಡಿದ್ದು ನಿಜಕ್ಕೂ ಅದ್ಭುತ'' ಎಂದು ಹೇಳಿದ್ದಾರೆ.

ಇನ್ನು ಸೂರ್ಯ ಅವರು ಅಭಿನಯಿಸಿದ್ದ 'ಸಿಂಗಂ' ಚಿತ್ರವನ್ನ ಕನ್ನಡದಲ್ಲಿ ಸುದೀಪ್ 'ಕೆಂಪೇಗೌಡ' ಎಂಬ ಹೆಸರಿನಲ್ಲಿ ರೀಮೇಕ್ ಮಾಡಿದ್ದರು. ಈ ಸಿನಿಮಾ ಸುದೀಪ್ ವೃತ್ತಿಜೀವನದಲ್ಲಿ ಹೊಸ ಇಮೇಜ್ ತಂದುಕೊಟ್ಟಿತ್ತು ಅಂದ್ರೆ ತಪ್ಪಾಗಲಾರದು.

English summary
Kannada Actor kiccha sudeep has taken his twitter account to appreciate tamil actor suriya. and he said ''Suriya is a great human n a very dear friend of mine''.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X