For Quick Alerts
  ALLOW NOTIFICATIONS  
  For Daily Alerts

  ಬೆಂಗಳೂರು ಟ್ರಾಫಿಕ್ ರಾಯಭಾರಿ ಕಿಚ್ಚ ಸುದೀಪ್

  By Rajendra
  |

  ಆಟೋ ಡ್ರೈವರ್ ಗಳು ಯಾರ ಮಾತು ಕೇಳಲ್ಲ. ಆಟೋ ಹೋಗಿದ್ದೇ ದಾರಿ ಎಂಬ ಮಾತುಗಳು ಆಗಾಗ ಕಿವಿಗೆ ಬೀಳುತ್ತಿರುತ್ತವೆ. ಟ್ರಾಫಿಕ್ ಸಿಗ್ನಲ್ ಸರಿಯಾಗಿ ಫಾಲೋ ಮಾಡ್ರಪ್ಪಾ. ಸುರಕ್ಷತೆ ಕಡೆಗೂ ಗಮನಕೊಡಿ. ಲೇನ್ ಬಿಟ್ಟು ಅಡ್ಡಾದಿಡ್ಡಿಯಾಗಿ ಚಲಿಸಬೇಡಿ ಎಂಬ ಬುದ್ಧಿಮಾತನ್ನು ಕಿಚ್ಚ ಸುದೀಪ್ ಇನ್ನು ಮುಂದೆ ಹೇಳಲಿದ್ದಾರೆ.

  ಏಕೆಂದರೆ ಅವರೀಗ ಬೆಂಗಳೂರು ಟ್ರಾಫಿಕ್ ಪೊಲೀಸ್ ರಾಯಭಾರಿ. ಕಿಚ್ಚ ಸುದೀಪ್ ಹೇಳಿದ ಮೇಲೆ ಆಟೋ ಡ್ರೈವರ್ ಗಳು ಟ್ರಾಫಿಕ್ ರೂಲ್ಸ್ ಫಾಲೋ ಮಾಡ್ದೆ ಇರಕ್ಕೆ ಸಾಧ್ಯವೇ? ಇದನ್ನು ಮನಗಂಡೇ ನಮ್ಮ ಟ್ರಾಫಿಕ್ ಪೊಲೀಸರು ಕಿಚ್ಚ ಸುದೀಪ್ ಅವರನ್ನು ರಾಯಭಾರಿಯಾಗಿ ಆಯ್ಕೆ ಮಾಡಿಕೊಂಡಿದ್ದಾರೆ. [ಓ ಮೈ ಗಾಡ್ ಕಿಚ್ಚ ಸುದೀಪ್ ಇನ್ನೊಂದು ರೀಮೇಕ್]

  ಈಗಾಗಲೆ ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರು ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಮಹತ್ವದ ಬಗ್ಗೆ ಹೇಳುತ್ತಲೇ ಇದ್ದಾರೆ. ಅವರು ಬೆಂಗಳೂರು ಟ್ರಾಫಿಕ್ ಪೊಲೀಸ್ ರಾಯಭಾರಿ. ಈಗ ಸುದೀಪ್ ಅವರು ಆಟೋ ಡ್ರೈವರ್ ಆಗಿ ಯೂನಿಫಾಮ್ ಹಾಕಿಕೊಂಡಿದ್ದಾರೆ.

  ಇದೇ ಭಾನುವಾರ (ಡಿಸೆಂಬರ್ 15) ಸುದೀಪ್ ಜಾಹೀರಾತನ್ನು ಚಿತ್ರೀಕರಿಸಿಕೊಳ್ಳಲಾಯಿತು. ಸುದೀಪ್ ಅವರ ಟ್ರಾಫಿಕ್ ಬಗ್ಗೆ ಅರಿವು ಮೂಡಿಸುವ ಚಿತ್ರಗಳು ಇನ್ನು ಮುಂದೆ ನಗರದಲ್ಲಿ ಕಾಣಿಸಲಿವೆ. ಈಗಾಗಲೆ ಟ್ರಾಫಿಕ್ ಬಗ್ಗೆ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ತಮ್ಮ ಧ್ವನಿಗುಡಿಸಿರುವುದು ಗೊತ್ತೇ ಇದೆ. (ಏಜೆನ್ಸೀಸ್)

  English summary
  Kannada actor Sudeep is now brand ambassador of Bangalore City traffic police. The actor will campaign for auto drivers. The traffic police will use his image across the city to inform auto drivers to follow traffic rules and safety standards.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X