For Quick Alerts
  ALLOW NOTIFICATIONS  
  For Daily Alerts

  ಸೈಕಲ್ ಏರಿ ಚಿತ್ರೀಕರಣ ಸ್ಥಳಕ್ಕೆ ಬಂದ ಕಿಚ್ಚ ಸುದೀಪ್

  |
  Sudeep came to shooting spot in bi-cycle | FILMIBEAT KANNADA

  ಸಾಮಾನ್ಯವಾಗಿ ಸ್ಟಾರ್ ಗಳು ಐಶಾರಾಮಿ ಕಾರ್ ನಲ್ಲಿ ಚಿತ್ರೀಕರಣದ ಸೆಟ್ ಗೆ ಬರುತ್ತಾರೆ. ನಟ ಸುದೀಪ್ ಕೂಡ ತಮ್ಮ ಕಾರ್ ನಲ್ಲಿಯೇ ಶೂಟಿಂಗ್ ಗೆ ಹೋಗುತ್ತಾರೆ. ಆದರೆ, ಇದೀಗ ಸೈಕಲ್ ಏರಿ ಬಂದು ಸುದೀಪ್ ಅಚ್ಚರಿ ಮೂಡಿಸಿದ್ದಾರೆ.

  ನಟಿ ಶ್ರುತಿ ಹರಿಹರನ್ ಹೊಗಳಿದ ಕಿಚ್ಚ ಸುದೀಪ್ ನಟಿ ಶ್ರುತಿ ಹರಿಹರನ್ ಹೊಗಳಿದ ಕಿಚ್ಚ ಸುದೀಪ್

  ವ್ಯಾಯಾಮಕ್ಕೆ ಹೆಚ್ಚು ಒತ್ತು ನೀಡಿರುವ ಸುದೀಪ್, ಸೈಕಲ್ ಸವಾರಿ ಮಾಡಿದ್ದಾರೆ. ರಾಜ್ ಕುಮಾರ್ ರಸ್ತೆಯಲ್ಲಿ ಇರುವ ಶೆರಟಾನ್ ಹೋಟೆಲ್‌ ನಿಂದ ಕಂಠೀರವ ಸ್ಟೂಡಿಯೊಗೆ ಸೈಕಲ್ ನಲ್ಲಿ ಬಂದಿದ್ದಾರೆ. 'ಕೋಟಿಗೊಬ್ಬ 3' ಸಿನಿಮಾದ ಚಿತ್ರೀಕರಣ ಅಲ್ಲಿ ನಡೆಯುತ್ತಿದೆ.

  ಬೆಂಗಳೂರಿಗೆ ಬೆಳಗ್ಗೆಯ ಚಳಿಯ ನಡುವೆ ಸುದೀಪ್ ಸೈಕಲ್ ಸವಾರಿ ಮಾಡಿದ್ದಾರೆ. ಜನರ ನಡುವೆಯೇ ಸೈಕಲ್ ಸವಾರಿ ಮಾಡಿದರೂ, ಯಾರ ಕಣ್ಣೀಗೂ ಅವರು ಬಿದ್ದಿಲ್ಲ. ಅಂದಹಾಗೆ, ಸೈಕಲ್ ಸವಾರಿ ಮಾಡಿದ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

  View this post on Instagram

  Get closer to ur life.... 🤗

  A post shared by kicchasudeep (@kichchasudeepa) on

  ಸುದೀಪ್ 'ಕೋಟಿಗೊಬ್ಬ 3' ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಮಡೋನಾ ಹಾಗೂ ಶ್ರದ್ಧಾ ದಾಸ್ ಸಿನಿಮಾದ ನಾಯಕಿ ಆಗಿದ್ದಾರೆ. ಶಿವ ಕಾರ್ತಿಕ್ ಈ ಸಿನಿಮಾದ ನಿರ್ದೇಶನ ಮಾಡುತ್ತಿದ್ದಾರೆ.

  English summary
  Actor Sudeep came to 'Kotigobba 3' shooting set by cycle riding.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X