»   » 'ರಂಗನ್ ಸ್ಟೈಲ್' ಪ್ರದೀಪ್ ಜೊತೆ ಸುದೀಪ್ ಹೊಸ ಸ್ಟೈಲ್

'ರಂಗನ್ ಸ್ಟೈಲ್' ಪ್ರದೀಪ್ ಜೊತೆ ಸುದೀಪ್ ಹೊಸ ಸ್ಟೈಲ್

Posted By:
Subscribe to Filmibeat Kannada
ಇದು ಗಂಗ್ನಮ್ ಸ್ಟೈಲ್ ಅಲ್ಲ 'ರಂಗನ್ ಸ್ಟೈಲ್'. ಈ ಚಿತ್ರದ ಮೂಲಕ 'ಜಾಲಿಡೇಸ್' ಖ್ಯಾತಿಯ ಪ್ರದೀಪ್ ಪೂರ್ಣ ಪ್ರಮಾಣದ ನಾಯಕ ನಟನಾಗಿ ಚಿತ್ರರಂಗಕ್ಕೆ ಪ್ರವೇಶ ಪಡೆಯುತ್ತಿದ್ದಾರೆ. ಗುರುಕಿರಣ್ ಅವರ ಸಂಗೀತ ಚಿತ್ರಕ್ಕಿದ್ದು ಮಂಗಳೂರಿನ ಪ್ರಶಾಂತ್ ಎಸ್ ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ.

ಕರಾವಳಿ ಹುಡುಗರ ಈ ಚಿತ್ರ ಈಗಾಗಲೆ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಈ ಚಿತ್ರದ ಇನ್ನೊಂದು ವಿಶೇಷ ಎಂದರೆ ಕಿಚ್ಚ ಸುದೀಪ್ ಅವರು ಅಭಿನಯಿಸಿರುವುದು. ಈ ಚಿತ್ರದಲ್ಲಿ ಸುದೀಪ್ ಅತಿಥಿ ಪಾತ್ರವನ್ನು ಪೋಷಿಸಲು ರೆಡಿಯಾಗಿದ್ದಾರೆ.

ತೆಲುಗಿನ 'ಬಾಹುಬಲಿ' ಚಿತ್ರದ ಬಳಿಕ ಸುದೀಪ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಚಿತ್ರ ಇದಾಗಿದೆ. ಸೋಮವಾರ (ಆ.5) ಸುದೀಪ್ ಪಾತ್ರದ ಚಿತ್ರೀಕರಣ ನಡೆಯಲಿದೆ. 'ಬಿಗ್ ಬಾಸ್' ರಿಯಾಲಿಟಿ ಶೋನಲ್ಲಿ ಬಿಜಿಯಾಗಿದ್ದ ಸುದೀಪ್, ಬಣ್ಣಹಚ್ಚಿಕೊಂಡು ಒಂಭತ್ತು ತಿಂಗಳಾಗುತ್ತಿದೆ.

ಶಶಾಂಕ್ ನಿರ್ದೇಶನದ 'ಬಚ್ಚನ್' ಚಿತ್ರದ ಬಳಿಕ ಸುದೀಪ್ ಬಣ್ಣಹಚ್ಚುತ್ತಿದ್ದಾರೆ. ಆಗಸ್ಟ್ 19ಕ್ಕೆ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಜೊತೆಗಿನ ಚಿತ್ರ ಸೆಟ್ಟೇರುತ್ತಿದೆ. ಇನ್ನು 'ರಂಗನ್ ಸ್ಟೈಲ್' ಚಿತ್ರದ ವಿಚಾರಕ್ಕೆ ಬಂದರೆ, ಚಿತ್ರಕ್ಕೆ ಮಂಜು ಸಂಭಾಷಣೆ ಬರೆದಿದ್ದಾರೆ. ಸಿನಿಟೆಕ್‌ ಸೂರಿ ಕ್ಯಾಮೆರಾ ಹಿಡಿಯುತ್ತಿದ್ದಾರೆ.

ಚಿತ್ರದಲ್ಲಿ ಸಾಧುಕೋಕಿಲ, ಶರತ್‌ ಲೋಹಿತಾಶ್ವ ಮತ್ತಿತರರು ಇದ್ದಾರೆ. ಕಾರ್ಕಳದ ಖ್ಯಾತ ಯುವ ಉದ್ಯಮಿಗಳಾದ ಅಜಿತ್ ಕಾಮತ್, ಬೋಳ ಶ್ರೀನಿವಾಸ ಕಾಮತ್ ಮತ್ತು ಬೋಳ ಶ್ರೀಪತಿ ಕಾಮತ್ ಅವರು ತಮ್ಮ ಆರೆಂಜ್ ಸಿನಿಮಾಸ್ ಬ್ಯಾನರ್‌ನಡಿ ನಿರ್ಮಿಸುತ್ತಿದ್ದಾರೆ.

ಯುವ ಪ್ರತಿಭೆಗಳ ಈ ಚಿತ್ರದಲ್ಲಿ ಸುದೀಪ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಚಿತ್ರದ ಬಗ್ಗೆ ಇನ್ನಷ್ಟು ಕುತೂಹಲ ಮೂಡಿಸಿದ್ದಾರೆ. ಈ ಚಿತ್ರದಲ್ಲಿ ಲೇಡಿ ವಿಲನ್ ಪಾತ್ರವನ್ನು ದೀಪಿಕಾ ದಾಸ್ ಪೋಷಿಸುತ್ತಿದ್ದಾರೆ. (ಏಜೆನ್ಸೀಸ್)

English summary
Kichcha Sudeep to play a guest role in Kannada film Rangan Style. The film which has Pradeep in the lead. After Bachchan, Sudeep accepts this cameo role.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada