»   » ಸಿಎಂ ಸಿದ್ದರಾಮಯ್ಯ ಪರವಾಗಿ ಸುದೀಪ್ ಪ್ರಚಾರ.!

ಸಿಎಂ ಸಿದ್ದರಾಮಯ್ಯ ಪರವಾಗಿ ಸುದೀಪ್ ಪ್ರಚಾರ.!

Posted By:
Subscribe to Filmibeat Kannada
ಈ ರಾಜಕಾರಣಿ ಪರ ಪ್ರಚಾರ ಮಾಡ್ತಾರಂತೆ ಕಿಚ್ಚ ಸುದೀಪ್ | FIlmibeat Kannada

ಚುನಾವಣೆ ದಿನಾಂಕ ಹತ್ತಿರವಾಗುತ್ತಿದ್ದಂತೆ ರಾಜಕೀಯ ಪಕ್ಷಗಳ ಪರವಾಗಿ ಪ್ರಚಾರ ಮಾಡಲು ಸಿನಿಮಾ ತಾರೆಯರು ಮುಂದಾಗುತ್ತಿದ್ದಾರೆ. ಕರ್ನಾಟಕ ಚುನಾವಣೆಗಾಗಿ ಕೇವಲ ಕನ್ನಡದ ಸ್ಟಾರ್ ಗಳು ಮಾತ್ರವಲ್ಲ, ಬೇರೆ ಭಾಷೆಯಿಂದ ಕೂಡ ಕಲಾವಿದರು ಬರ್ತಿದ್ದಾರೆ.

ಸ್ಯಾಂಡಲ್ ವುಡ್ ಸ್ಟಾರ್ ನಟ ಸುದೀಪ್ ಯಾರ ಪರವಾಗಿ ಮತ್ತು ಯಾವ ಪಕ್ಷದ ಪರವಾಗಿ ಪ್ರಚಾರ ಮಾಡ್ತಾರೆ ಎಂಬುದು ಸಾಕಷ್ಟು ಚರ್ಚೆ ಮತ್ತು ಕುತೂಹಲ ಹುಟ್ಟಿಸಿದೆ. ಈ ಬಗ್ಗೆ ಸಣ್ಣದೊಂದು ಸುಳಿವು ಸಿಕ್ಕಿದ್ದು, ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಹೇಳಿರುವುದು ವಿಶೇಷವಾಗಿದೆ.

ಹೌದು, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕಾಂಗ್ರೆಸ್ ಪರವಾಗಿ ಪ್ರಚಾರ ಮಾಡ್ತಾರಂತೆ. ಕೇವಲ ಸಿಎಂ ಸಿದ್ದರಾಮಯ್ಯ ಅವರ ಪರವಾಗಿ ಪ್ರಚಾರ ಮಾಡ್ತಾರಂತೆ. ಹೀಗಂತ ಸ್ವತಃ ಸುದೀಪ್ ಅವರು ಹೇಳಿದ್ದಾರಂತೆ.

ಕಿಚ್ಚ ಸುದೀಪ್ ಸಿಎಂ ಸಿದ್ಧರಾಮಯ್ಯ ಅವರನ್ನು ಭೇಟಿ ಮಾಡಿದ್ದು ಯಾಕೆ?

Sudeep campaigning for siddaramaiah

ಕನ್ನಡ ಚಲನಚಿತ್ರ ಕಪ್ ಕ್ರಿಕೆಟ್ ಟೂರ್ನಿ ಉದ್ಘಾಟನೆ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಅವರನ್ನ ಆಹ್ವಾನಿಸಲು ಆಗಮಿಸಿದ್ದ ಸುದೀಪ್, ಆ ಸಂದರ್ಭದಲ್ಲಿ ಈ ಮಾತನ್ನ ಹೇಳಿದ್ದರಂತೆ. ತದ ನಂತರ ಈ ಬಗ್ಗೆ ಯಾವುದೇ ಮಾತುಕತೆ ಆಗಿಲ್ಲ ಎಂದು ಸಿದ್ದರಾಮಯ್ಯ ಅವರು ಮೈಸೂರಿನಲ್ಲಿ ಮಾಧ್ಯಮದವರಿಗೆ ತಿಳಿಸಿದ್ದಾರೆ.

ಕೆಸಿಸಿ ಕ್ರಿಕೆಟ್ ಟೂರ್ನಿಗೆ ಸಿದ್ಧರಾಮಯ್ಯ ಚಾಲನೆ : ಶಿವಣ್ಣ - ಸುದೀಪ್ ನಡುವೆ ಮೊದಲ ಪಂದ್ಯ

ಇನ್ನು ಸುದೀಪ್ ಅವರ ಜೆಡಿಎಸ್ ಪರವಾಗಿಯೂ ಪ್ರಚಾರ ಮಾಡ್ತಾರೆ ಎಂಬ ಸುದ್ದಿಯಿದೆ. ಈ ಹಿಂದೆ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರನ್ನ ಸುದೀಪ್ ಎರಡು ಬಾರಿ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ.

English summary
Kannada actor Kichcha Sudeep will campaigning for the chief minister Siddaramaiah in karnataka assembly election 2018.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X