twitter
    For Quick Alerts
    ALLOW NOTIFICATIONS  
    For Daily Alerts

    ವಿದ್ಯಾರ್ಥಿಯ ಕಾಲೇಜು ಶುಲ್ಕ ಕಟ್ಟಿದ ಸುದೀಪ್ ಚಾರಿಟೇಬಲ್ ಟ್ರಸ್ಟ್

    |

    ಪುನೀತ್ ರಾಜ್‌ಕುಮಾರ್ ಅಗಲಿಕೆಯ ಬಳಿಕ ಅವರು ಮಾಡಿದ್ದ ಸಾಮಾಜಿಕ ಕಾರ್ಯಗಳು ಒಂದೊಂದಾಗಿ ಹೊರಗೆ ಬರುತ್ತಿವೆ. ನಮ್ಮ ಕನ್ನಡದ ನಟನೊಬ್ಬ ಇಂಥ ಒಂದು ನಿಸ್ವಾರ್ಥ ಸೇವೆ ಮಾಡಿದ್ದನೆಂದು ಹೆಮ್ಮೆಯಾಗುತ್ತಿದೆ.

    ಹಾಗೆ ನೋಡಿದರೆ ಕನ್ನಡದ ಪ್ರತಿಯೊಬ್ಬ ಸ್ಟಾರ್ ನಟರೂ ತಮ್ಮದೇ ರೀತಿಯಲ್ಲಿ, ಶಕ್ತ್ಯಾನುಸಾರ ಜನ ಸೇವೆ ಮಾಡುತ್ತಲೇ ಬಂದಿದ್ದಾರೆ. ಅದರಲ್ಲಿಯೂ ಕೊರೊನಾ ಸಮಯದಲ್ಲಿ ಸಣ್ಣ-ಪುಟ್ಟ ಸೆಲೆಬ್ರಿಟಿಗಳು ಸಹ ಬೀದಿಗಿಳಿದು ನೆರವಿಗೆ ನಿಂತಿದ್ದು ನೋಡಿದರೆ ಗೊತ್ತಾಗುತ್ತದೆ, ನಮ್ಮ ಸೆಲೆಬ್ರಿಟಿಗಳಿಗೆ ತಮ್ಮ ಅಭಿಮಾನಿಗಳ ಮೇಲೆ ಅದೆಷ್ಟು ಕಾಳಜಿ ಇದೆಯೆಂದು.

    ಕನ್ನಡ ಸಿನಿರಂಗದಲ್ಲಿ ಸಮಾಜ ಸೇವೆಯ ವಿಷಯ ಬಂದಾಗ ಸುದೀಪ್ ಹೆಸರು ಚರ್ಚೆಯಾಗದೇ ಇರಲು ಸಾಧ್ಯವೇ ಇಲ್ಲ. ಕೊರೊನಾಕ್ಕೂ ಮುಂಚೆ ಬಹು ಸಮಯದಿಂದ ತಮ್ಮ ಚಾರಿಟೇಬಲ್ ಸೊಸೈಟಿ ವತಿಯಿಂದ ಅಶಕ್ತರಿಗೆ, ಅವಶ್ಯಕತೆ ಇರುವವರಿಗೆ ನೆರವಾಗುತ್ತಲೇ ಬಂದಿದ್ದಾರೆ. ಕೊರೊನಾ ಸಮಯದಲ್ಲಿ ಸುದೀಪ್ ಅವರ ಕಿಚ್ಚ ಚಾರಿಟೇಬಲ್ ಸೊಸೈಟಿ ಶ್ಲಾಘನೀಯ ಕಾರ್ಯ ಮಾಡಿದರು. ಈಗಲೂ ಅವರು ತಮ್ಮ ಸೇವಾ ಕಾರ್ಯವನ್ನು ಮುಂದುವರೆಸಿದ್ದಾರೆ.

    Sudeep Charitable Trust Help A Student To Pay His College Fee

    ಇತ್ತೀಚೆಗೆ ಸುರಿದ ಸತತ ಮಳೆಯಿಂದಾಗಿ ಹಾಸನದ ಗಿರೀಶ್ ಕುಮಾರ್ ಮತ್ತು ಅವರ ಕುಟುಂಬ ಬೆಳೆ ಕಳೆದುಕೊಂಡು ಸಂಕಷ್ಟದಲ್ಲಿದ್ದರು. ಪರೀಕ್ಷಾ ಶುಲ್ಕ ಕಟ್ಟಲಾಗದ ಗಿರೀಶ್ ಸಹಾಯಕ್ಕಾಗಿ ಹಾಸನದ ಕಿಚ್ಚಾ ಸುದೀಪ್ ಅಭಿಮಾನಿಗಳ ಸಂಘವನ್ನು ಸಂಪರ್ಕ ಮಾಡಿದ್ದರು. ಬಿಎಸ್​​ಸಿ ನರ್ಸಿಂಗ್ ಓದುತ್ತಿರುವ ಗಿರೀಶ್ ಕುಮಾರ್​ಗೆ 21 ಸಾವಿರ ರೂಗಳ ಹಣ ಕಾಲೇಜು ಶುಲ್ಕ ಕಟ್ಟಲು ಅಗತ್ಯವಿತ್ತು. ಕುಟುಂಬದ ಕಷ್ಟವನ್ನು ಆಲಿಸಿದ ಸುದೀಪ್ ಟ್ರಸ್ಟ್ ನೆರವಿಗೆ ಮುಂದಾಯಿತು. ಚೆಕ್ ಮೂಲಕ ಹಣವನ್ನು ನೀಡಿ, ಶುಲ್ಕ ಕಟ್ಟದೇ ಪರೀಕ್ಷೆ ಬರೆಯಲಾಗದ ಆತಂಕದಲ್ಲಿದ್ದ ವಿದ್ಯಾರ್ಥಿಯ ಆತಂಕ ದೂರ ಮಾಡಲಾಯಿತು.

    ಸುದೀಪ್ ಅವರು ತಮ್ಮ ಟ್ರಸ್ಟ್ ಮೂಲಕ ಹಣವನ್ನು ನೀಡಿದ್ದಾರೆ. ಕಷ್ಟದಲ್ಲಿದ್ದ ವಿದ್ಯಾರ್ಥಿ ಮಾತ್ರವೇ ಅಲ್ಲದೆ ಅವರ ಕುಟುಂಬಕ್ಕೂ ಸುದೀಪ್ ತಮ್ಮ ಟ್ರಸ್ಟ್ ಮೂಲಕ ಸಹಾಯ ಮಾಡಿದ್ದಾರೆ.

    ಸುದೀಪ್ ಟ್ರಸ್ಟ್ ಮೂಲಕ ಹೀಗೆ ಸಾಮಾಜಿಕ ಕಾರ್ಯ ಮಾಡುತ್ತಿರುವುದು ಇದು ಹೊಸದೇನಲ್ಲ. ಕೆಲವು ದಿನಗಳ ಹಿಂದಷ್ಟೆ ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿ ವತಿಯಿಂದ ಪುಟ್ಟ ಕಂದಮ್ಮನ ಜೀವ ಉಳಿಸಲು ಅಭಿಯಾನವೊಂದನ್ನು ಮಾಡಲಾಯಿತು. ಅದಕ್ಕೆ ಮುನ್ನ ವಿಶೇಷ ಮಕ್ಕಳಿಗೆ ಅವರ ಶಾಲೆಯ ಸ್ಥಳವನ್ನು ಉಳಿಸಿಕೊಟ್ಟು ವಾಸ್ತವ್ಯ ಹಾಗೂ ಶಿಕ್ಷಣಕ್ಕೆ ನೆರವು ನೀಡಲಾಯಿತು. ಆ ಮಕ್ಕಳೊಂದಿಗೆ ಸುದೀಪ್ ವಿಡಿಯೋ ಕಾಲ್ ಮೂಲಕ ಮಾತನಾಡಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

    ಕೊರೊನಾ ಸಮಯದಲ್ಲಂತೂ ಸುದೀಪ್ ಚಾರಿಟೇಬಲ್ ಸೊಸೈಟಿ ಸಾಕಷ್ಟು ಸಕ್ರಿಯವಾಗಿ ಕೆಲಸ ಮಾಡಿತು. ಚಿತ್ರರಂಗದ ಎಲ್ಲ ಹಿರಿಯ ನಟರ ಮನೆಗಳಿಗೆ ಉಚಿತ ದಿನಸಿ, ಉಚಿತ ಔಷಧ, ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಪದಾರ್ಥಗಳು ವಿತರಣೆ ಮಾಡಲಾಯಿತು. ಇದರ ಜೊತೆಗೆ ಆಮ್ಲಜನಕ ಸಿಲಿಂಡರ್ ವಿತರಣೆ ವ್ಯವಸ್ಥೆ, ಕಾನ್ಸಂಟ್ರೇಟರ್‌ಗಳನ್ನು ವಿತರಿಸುವ ಕಾರ್ಯಕ್ರಮವನ್ನೂ ಮಾಡಲಾಯಿತು. ಇದರ ಹೊರತಾಗಿ ಕನ್ನಡ ಶಾಲೆ ಉಳಿಸಿ ಅಭಿಯಾನಕ್ಕೆ ಸರ್ಕಾರದ ಮಟ್ಟದಲ್ಲಿ ನಟ ಸುದೀಪ್ ಕೈ ಜೋಡಿಸಿದ್ದಾರೆ. ಜೊತೆಗೆ ಹೆಣ್ಣು ಮಕ್ಕಳ ಶಿಕ್ಷಣ ಅಭಿಯಾನದಲ್ಲಿಯೂ ನಟ ಸುದೀಪ್ ಭಾಗಿಯಾಗಿದ್ದಾರೆ.

    ಇನ್ನು ಸಿನಿಮಾಗಳ ವಿಷಯಕ್ಕೆ ಮರಳುವುದಾದರೆ ನಟ ಸುದೀಪ್ ನಟನೆಯ 'ಕೋಟಿಗೊಬ್ಬ 3' ಸಿನಿಮಾ ಹಿಟ್ ಎನಿಸಿಕೊಂಡಿದೆ. ಹಲವು ಅಡೆ-ತಡೆಗಳ ನಡುವೆ ಆ ಸಿನಿಮಾ ಬಿಡುಗಡೆ ಆಗಿತ್ತು. ಸುದೀಪ್‌ ಅವರ ಮಹಾತ್ವಾಕಾಂಕ್ಷೆಯ ಸಿನಿಮಾ 'ವಿಕ್ರಾಂತ್ ರೋಣ' ಚಿತ್ರೀಕರಣ, ಪ್ರೀ ಪ್ರೊಡಕ್ಷನ್ ಮುಗಿದು ಬಿಡುಗಡೆಗೆ ತಯಾರಾಗಿದೆ. ಆದರೆ ತುಸು ತಡವಾಗಿಯೇ ಬಿಡುಗಡೆ ಮಾಡಲು ಸುದೀಪ್ ಯೋಜಿಸಿದ್ದಾರೆ. ಈ ನಡುವೆ ಸುದೀಪ್ ಸ್ವತಃ ತಾವೇ ಒಂದು ಸಿನಿಮಾ ನಿರ್ದೇಶಿಸುವ ಯೋಜನೆಯಲ್ಲಿದ್ದಾರೆ. ತಮ್ಮ ನಿರ್ದೇಶನದ ಸಿನಿಮಾಕ್ಕೆ ಕನ್ನಡದಲ್ಲಿ ತಾವೇ ಹೀರೋ ಆಗಿದ್ದರೆ ಹಿಂದಿಯಲ್ಲಿ ಸಲ್ಮಾನ್ ಖಾನ್ ಹೀರೋ ಆಗಿರಲಿದ್ದಾರೆ.

    English summary
    Sudeep Charitable trust helps a student in Hassan to pay his college fee. Sudeep also helps students family.
    Thursday, November 25, 2021, 20:27
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X