»   » ಥಾಯ್ ಭಾಷೆಗೆ ನಟ ಕಿಚ್ಚ ಸುದೀಪ್ ಚಿತ್ರ ಡಬ್!

ಥಾಯ್ ಭಾಷೆಗೆ ನಟ ಕಿಚ್ಚ ಸುದೀಪ್ ಚಿತ್ರ ಡಬ್!

Posted By:
Subscribe to Filmibeat Kannada

ಡಬ್ಬಿಂಗ್ ಬೇಕೆ ಬೇಡವೆ ಎಂಬ ಬಗ್ಗೆ ರಾಜ್ಯದಲ್ಲಿ ಬಿಸಿಬಿಸಿ ಚರ್ಚೆ ನಡೆಯುತ್ತಿದೆ. ಆದರೆ ಇದೇ ಸಂದರ್ಭದಲ್ಲಿ ಕಿಚ್ಚ ಸುದೀಪ್ ಅಭಿನಯದ ಭಾರಿ ಬಜೆಟ್ ತೆಲುಗು ಚಿತ್ರ 'ಈಗ' ಥಾಯ್ ಭಾಷೆಗೆ ಡಬ್ ಆಗುತ್ತಿದೆ.

ರಾಯಚೂರು ಮೂಲದ ಎಸ್.ಎಸ್.ರಾಜಮೌಳಿ ನಿರ್ದೇಶನದ ಈ ಚಿತ್ರ ತೆಲುಗು, ತಮಿಳು ಭಾಷೆಗಳಲ್ಲಿ ಭರ್ಜರಿ ಹಿಟ್ ದಾಖಲಿಸಿರುವುದು ಗೊತ್ತೇ ಇದೆ. 'ಈಗ' ವಿದೇಶಗಳಿಗೂ ಹಾರಲು ಸಿದ್ಧವಾಗಿದೆ.

ಥೈಲ್ಯಾಂಡ್ ಸಿನಿಪ್ರಿಯರು ಈ ಚಿತ್ರವನ್ನು ನೋಡಬೇಕೆಂದು ಬಹಳ ಇಷ್ಟಪಟ್ಟಿದ್ದಾರಂತೆ. ಹಾಗಾಗಿ ಈ ಚಿತ್ರವನ್ನು ಅವರದೇ ಭಾಷೆಗೆ ಡಬ್ ಮಾಡಲಾಗುತ್ತಿದೆ. ಈ ಮೂಲಕ ಅಲ್ಲಿನ ಚಿತ್ರರಸಿಕರನ್ನು ಸುದೀಪ್ 'ಈಗ' ರಂಜಿಸಲಿದೆ.

ಒಟ್ಟಿನಲ್ಲಿ ತೆಲುಗು, ತಮಿಳು, ಹಿಂದಿ ಚಿತ್ರಗಳಲ್ಲಿ ಅಭಿನಯಿಸಿದ ಸುದೀಪ್ ಈಗ ಥಾಯ್ ಭಾಷೆಗೂ ಪರಿಚಿತರಾಗಲಿರುವುದು ವಿಶೇಷ. ಇನ್ನು ಥೈಲ್ಯಾಂಡ್ ವಿಚಾರಕ್ಕೆ ಬರುವುದಾದರೆ ಭಾರತೀಯ ಸಂಸ್ಕೃತಿಗೆ ತೀರಾ ಹತ್ತಿರವಾದ ದೇಶ.

ಚಿತ್ರದಲ್ಲಿನ ಗ್ರಾಫಿಕ್ಸ್, ತಾಂತ್ರಿಕ ಮಾಯಾಜಾಲದಂತಹ ಅಂಶಗಳ ಜೊತೆಗೆ ಆತ್ಮ ಮತ್ತೊಂದು ದೇಹವನ್ನು ಪ್ರವೇಶಿಸುವಂತಹ ವಿಚಾರಗಳು ಥೈಲ್ಯಾಂಡ್ ವಾಸಿಗಳಿಗೆ ಇಷ್ಟವಾಗಬಹುದು. ಅವರೂ ತಮ್ಮ ಚಿತ್ರವನ್ನು ಸ್ವಾಗತಿಸುತ್ತಾರೆ ಎಂಬ ಉದ್ದೇಶದಿಂದ ಡಬ್ ಮಾಡಲಾಗುತ್ತಿದೆ ಎನ್ನುತ್ತಾರೆ ಚಿತ್ರದ ನಿರ್ಮಾಪಕರು.

ಥೈಲ್ಯಾಂಡ್ ನಲ್ಲಿ ಹಿಂದಿ ಚಿತ್ರಗಳಿಗೆ ಭಾರಿ ಬೇಡಿಕೆ ಇದೆಯಂತೆ. ಅಲ್ಲಿನ ನಿರ್ಮಾಪಕರು ಡಬ್ಬಿಂಗ್ ರೈಟ್ಸ್ ಗಾಗಿ ಬೇಡಿಕೆ ಇಡುತ್ತಿದ್ದಾರಂತೆ. ಈಗ ಸುದೀಪ್ ಚಿತ್ರಕ್ಕೂ ಅಂತಹದ್ದೇ ಬೇಡಿಕೆ ಬಂದು ಥಾಯ್ ಭಾಷೆಗೆ ಡಬ್ ಆಗುತ್ತಿದೆ.

ತಾನು ಪ್ರೀತಿಸುತ್ತಿರುವ ಹುಡುಗಿಯೊಂದಿಗೆ ಹ್ಯಾಪಿಯಾಗಿ ಟೈಂ ಪಾಸ್ ಮಾಡುತ್ತಿದ್ದ ಪ್ರೇಮಿಯೊಬ್ಬ ವಿಲನ್ (ಸುದೀಪ್) ಕೈಯಲ್ಲಿ ಸಾವಪ್ಪುತ್ತಾನೆ. ಆದರೆ ನೊಣದ ರೂಪದಲ್ಲಿ ಮರುಜನ್ಮ ಪಡೆಯುವ ಆತನಿಗೆ ಹಿಂದಿನ ಜನ್ಮದ ನೆನಪುಗಳು ಕಾಡುತ್ತವೆ.

ತನ್ನನ್ನು ಕೊಂದ ವಿಲನ್ ಮೇಲೆ ಸೇಡು ತೀರಿಸಿಕೊಳ್ಳಲು ಪ್ರಯತ್ನಿಸುತ್ತಾನೆ. ಅದೂ ತನಗಿಂತಲೂ ಐದು ಲಕ್ಷ ಪಟ್ಟು ಶಕ್ತಿವಂತನಾದ ಮಾನವನ ಮೇಲೆ. ಪರಮ ಕ್ರೂರಿಯಾದ ಆತನ ಮೇಲೆ ನೊಣ ಹೇಗೆ ಗೆಲ್ಲುತ್ತದೆ...ಗೆಲುವಿಗಾಗಿ ಏನು ಮಾಡಿತು ಎಂಬುದೇ ಈಗ ಚಿತ್ರದ ಕಥಾಹಂದರ. (ಏಜೆನ್ಸೀಸ್)

English summary
Kannada actor Sudeep lead Telugu film to be dubbed into Thai language. The film's director SS Rajamouli decided to release his super Hit project Eega in Thai too said the sources.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada