»   » ಸುದೀಪ್ 'ಈಗ' ಹಿಂದಿ ಚಿತ್ರ ಅಕ್ಟೋಬರ್ 12ಕ್ಕೆ ತೆರೆಗೆ

ಸುದೀಪ್ 'ಈಗ' ಹಿಂದಿ ಚಿತ್ರ ಅಕ್ಟೋಬರ್ 12ಕ್ಕೆ ತೆರೆಗೆ

Posted By:
Subscribe to Filmibeat Kannada

ಕಿಚ್ಚ ಸುದೀಪ್ ಅಭಿನಯದ 'ಈಗ' ಚಿತ್ರ ಈಗಾಗಲೆ ಮೂರು ಭಾಷೆಗಳಲ್ಲಿ ಬಿಡುಗಡೆಯಾಗಿ ದಕ್ಷಿಣ ಭಾರತದ ಬಾಕ್ಸ್ ಆಫೀಸಲ್ಲಿ ಭಾರಿ ಕಲೆಕ್ಷನ್ ಮಾಡಿದೆ. ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಿರುವ ಈ ಚಿತ್ರ ಈಗ ಹಿಂದಿಯಲ್ಲೂ ತೆರೆಕಾಣುತ್ತಿದೆ.

ಹಿಂದಿ ಭಾಷೆಯ ಚಿತ್ರಕ್ಕೆ 'ಮಕ್ಕಿ' (ನೊಣ) ಎಂದು ಹೆಸರಿಡಲಾಗಿದೆ. ಈ ಚಿತ್ರ ಅಕ್ಟೋಬರ್ 12ಕ್ಕೆ ತೆರೆಕಾಣುತ್ತಿದೆ. ಬಾಲಿವುಡ್ ಚಿತ್ರಜಗತ್ತಿಗೆ ಸುದೀಪ್ ಈಗಾಗಲೆ 'ಫೂಂಕ್' ಹಾಗೂ 'ರಕ್ತಚರಿತ್ರ' ಚಿತ್ರಗಳಿಂದ ಪರಿಚಿತವಾಗಿದ್ದಾರೆ. ಈಗ ಮತ್ತೊಮ್ಮೆ ಅವರ ಚಿತ್ರ ಬಾಲುವುಡ್ ನಲ್ಲಿ ಸದ್ದು ಮಾಡಲು ಸಿದ್ಧವಾಗಿದೆ.

ಗ್ರಾಫಿಕ್ಸ್ ಪ್ರಧಾನವಾದ ಈ ಚಿತ್ರವನ್ನು ಬಾಲಿವುಡ್ ಮಂದಿ ಹೇಗೆ ಸ್ವೀಕರಿಸುತ್ತಾರೆ ಎಂಬುದು ಕುತೂಹಲಕಾರಿ ಅಂಶ. ದಸರಾ ರಜಾದಿನಗಳಲ್ಲಿ ಬಿಡುಗಡೆಯಾಗುತ್ತಿರುವ ಈ ಚಿತ್ರ ಉತ್ತರ ಭಾರತದಲ್ಲೂ ಸದ್ದು ಮಾಡುತ್ತದೆ ಎಂಬ ನಿರೀಕ್ಷೆ ಇದೆ.

'ಈಗ' ಚಿತ್ರವನ್ನು ಹಿಂದಿಗೆ ರೀಮೇಕ್ ಮಾಡಲಾಗುತ್ತದೆ ಎಂಬ ಸುದ್ದಿ ಇತ್ತು. ಈಗ ಚಿತ್ರದಲ್ಲಿ ಅಭಿನಯಿಸಿದ್ದ ನಾನಿ ಪಾತ್ರವನ್ನು ಅಭಿಷೇಕ್ ಬಚ್ಚನ್ ಪೋಷಿಸಲಿದ್ದಾರೆ ಎನ್ನಲಾಗಿತ್ತು. ಹಾಗೆಯೇ ಸುದೀಪ್ ಪಾತ್ರವನ್ನು ಯಥಾವತ್ತಾಗಿ ಉಳಿಸಿಕೊಳ್ಳಲಾಗುತ್ತದೆ ಎಂಬ ಮಾತುಗಳು ಕೇಳಿಬಂದಿದ್ದವು.

ಆದರೆ ಈ ಸುದ್ದಿಯನ್ನು ಚಿತ್ರದ ನಿರ್ದೇಶಕ ಎಸ್ಎಸ್ ರಾಜಮೌಳಿ ನಿರಾಕರಿಸಿದ್ದರು. 'ಈಗ' ಚಿತ್ರವನ್ನು ರೀಮೇಕ್ ಮಾಡುತ್ತಿಲ್ಲ, ಬದಲಾಗಿ ಹಿಂದಿ ಭಾಷೆಗೆ ಡಬ್ ಮಾಡುತ್ತಿದ್ದೇವೆ ಎಂದಿದ್ದರು. 'ಈಗ' ಚಿತ್ರವನ್ನು ಮರು ಚಿತ್ರೀಕರಿಸದೆ ಯಥಾವತ್ತಾಗಿ ಡಬ್ಬಿಂಗ್ ಮಾಡಿದ್ದೇವೆ ಎಂದು ಅವರು ವಿವರ ನೀಡಿದ್ದಾರೆ.

ಇನ್ನು ಚಿತ್ರದ ಬಿಡುಗಡೆ ಬಗ್ಗೆ ಟ್ವೀಟಿಸಿರುವ ಸುದೀಪ್, "ಈಗ ಚಿತ್ರದ ಹಿಂದಿ ಆವೃತ್ತಿ ಅಕ್ಟೋಬರ್ 12ರಂದು ಬಿಡುಗಡೆಯಾಗುತ್ತಿದೆ. ಸ್ವತಃ ರಾಜಮೌಳಿ ಅವರು ಈ ವಿಷಯವನ್ನು ತಮಗೆ ತಿಳಿಸಿದರು. ನನ್ನ ಮಟ್ಟಿಗೆ ಇದು ಗ್ರೇಟ್ ನ್ಯೂಸ್. ಬಿಡುಗಡೆಯನ್ನು ಎದುರುನೋಡುತ್ತಿದ್ದೇನೆ" ಎಂದಿದ್ದಾರೆ.

ಆದರೆ ಹಿಂದಿ ಆವೃತ್ತಿ 3Dಯಲ್ಲಿ ಬಿಡುಗಡೆಯಾಗುತ್ತದೋ ಅಥವಾ ಕೇವಲ 2Dಗಷ್ಟೇ ಸೀಮಿತವೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಎಂ ಎಂ ಕೀರವಾಣಿ ಸಂಗೀತ ಸಂಯೋಜನೆಯ ಈ ಚಿತ್ರವನ್ನು ಸಾಯಿ ಕೊರ್ರಪತಿ ನಿರ್ಮಿಸಿದ್ದಾರೆ. ಜುಲೈ 6ರಂದು ಬಿಡುಗಡೆಯಾದ ಈ ಚಿತ್ರ ಊಹೆಗೂ ಮೀರಿ ಕಲೆಕ್ಷನ್ ಮಾಡಿದೆ. (ಏಜೆನ್ಸೀಸ್)

English summary
SS Rajamouli's action extravaganza Eega, which was released in Telugu, Tamil and Malayalam, has rocked the viewers in South India. Now, the Hindi version of the film, which has been titled Makhi, set to thrill audience in North India. Yes! The makers of the movie have planned to release its dubbed versions in Hindi on October 12 for the Dussera Holidays.
Please Wait while comments are loading...