»   » ದಕ್ಷಿಣ ಕೊರಿಯಾದಲ್ಲಿ ಸುದೀಪ್ 'ಈಗ' ಶೋ

ದಕ್ಷಿಣ ಕೊರಿಯಾದಲ್ಲಿ ಸುದೀಪ್ 'ಈಗ' ಶೋ

Posted By:
Subscribe to Filmibeat Kannada

ಕಿಚ್ಚ ಸುದೀಪ್ ಅಭಿನಯದ 'ಈಗ' ಚಿತ್ರ ದಕ್ಷಿಣ ಕೊರಿಯಾದಲ್ಲಿ ಪ್ರದರ್ಶನ ಕಾಣಲಿದೆ. ಎಸ್ ಎಸ್ ರಾಜಮೌಳಿ ನಿರ್ದೇಶನದ ಗ್ರಾಫಿಕ್ಸ್ ಪ್ರಧಾನ 'ಈಗ' ಚಿತ್ರ ಅಲ್ಲಿನ ಬುಸಾನ್ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ. ಅಕ್ಟೋಬರ್ 3ರಿಂದ 12ರವರೆಗೆ ಚಲನಚಿತ್ರೋತ್ಸವ ನಡೆಯಲಿದೆ.

ತೆಲುಗಿನಲ್ಲಿ ನಿರ್ಮಾಣವಾದ 'ಈಗ' ಚಿತ್ರ ತಮಿಳು ಹಾಗೂ ಹಿಂದಿ ಭಾಷೆಗೆ ರೀಮೇಕ್ ಆಗಿತ್ತು. ಚಿತ್ರದಲ್ಲಿ ಸುದೀಪ್ ಅಭಿನಯದ ಸೇರಿದಂತೆ ಅದರ ಮೇಕಿಂಗ್, ಸ್ಪೆಷಲ್ ಎಫೆಕ್ಟ್ ಗಳಿಂದ ಎಲ್ಲರ ಮೆಚ್ಚುಗೆಗೂ ಪಾತ್ರವಾಗಿದ್ದು ಗೊತ್ತೇ ಇದೆ.


ಈ ಹಿಂದೆ ಶಾಂಘೈ ಚಲನಚಿತ್ರೋತ್ಸವ, ಕ್ಯಾನೆ ಚಿತ್ರೋತ್ಸವ ಹಾಗೂ ಮಾಡ್ರಿಡ್ ಚಿತ್ರೋತ್ಸವದಲ್ಲೂ ಪ್ರದರ್ಶನ ಕಂಡಿತ್ತು. ಈಗ ಬೂಸಾನ್ ಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ. ಈಗ ಸ್ವತಃ ಚಿತ್ರದ ನಿರ್ದೇಶಕ ಎಸ್ ಎಸ್ ರಾಜಮೌಳಿ ಅವರು ಟ್ವೀಟಿಸಿದ್ದಾರೆ.

ತಮ್ಮ ಚಿತ್ರಕ್ಕೆ ವಿಶ್ವದಾದ್ಯಂತ ಸಿಗುತ್ತಿರುವ ಪ್ರತಿಕ್ರಿಯೆಗೆ ರಾಜಮೌಳಿ ಖುಷಿಯಾಗಿದ್ದು, ಭಾರತೀಯ ಚಿತ್ರಗಳಿಗೆ ಹೊಸ ಮಾರುಕಟ್ಟೆ ಸಿಗುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ ರಾಜಮೌಳಿ. ಇನ್ನು ಕಿಚ್ಚ ಸುದೀಪ್ ಅವರ ವೃತ್ತಿಜೀವನದಲ್ಲೂ ಈಗ ಚಿತ್ರ ಮಹತ್ವದ ತಿರುವು ನೀಡಿದೆ.

ಎರಡು ವರ್ಷಗಳಷ್ಟು ಕಾಲ ಶ್ರಮವಹಿಸಿ ಈಗ ಚಿತ್ರವನ್ನು ರಾಜಮೌಳಿ ತೆರೆಗೆತಂದಿದ್ದಾರೆ. ರಾಜಮೌಳಿ ನಿರ್ದೇಶನ, ಗ್ರಾಫಿಕ್ಸ್ ಮಾಯಾಜಾಲ, ಸುದೀಪ್ ಕ್ರೂರ ಅಭಿನಯ, ಸಮಂತಾ ಗ್ಲಾಮರ್ ಈ ಚಿತ್ರದ ಪ್ರಮುಖ ಆಕರ್ಷಣೆ. ಕರ್ನಾಟದಲ್ಲಿ ಇಂಗ್ಲಿಷ್ ಸಬ್ ಟೈಟಲ್ ನಲ್ಲಿ ಚಿತ್ರ ಬಿಡುಗಡೆಯಾಗಿತ್ತು. ಸುಮಾರು ರು.30 ಕೋಟಿ ಬಜೆಟ್ ನಲ್ಲಿ ನಿರ್ಮಿಸಿದ ಈ ಚಿತ್ರ ರು.125 ಕೋಟಿ ಕಲೆಕ್ಷನ್ಸ್ ಮಾಡಿದೆ. (ಏಜೆನ್ಸೀಸ್)

English summary
Kannada actor Sudeep Telugu film Eega, directed by SS Rajamouli will now be screened in Korea. Eega is being screened at Busan international film festival in south Korea....:)," tweeted a happy Rajamouli.
Please Wait while comments are loading...