For Quick Alerts
  ALLOW NOTIFICATIONS  
  For Daily Alerts

  ನಾಯಿಬಾಲ‌ ಯಾವತ್ತಿಗೂ ಡೊಂಕು; ದರ್ಶನ್ ಬೆಂಬಲಕ್ಕೆ ಬಂದ ಸುದೀಪ್‌ಗೆ ಅಭಿಮಾನಿಯ ಸಲಹೆ!

  By ಫಿಲ್ಮಿಬೀಟ್ ಡೆಸ್ಕ್
  |

  ಸದ್ಯ ಹೊಸಪೇಟೆಯಲ್ಲಿ ನಡೆದ ಕ್ರಾಂತಿ ಚಿತ್ರದ ಎರಡನೇ ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೇಲೆ ಕಿಡಿಗೇಡಿಯೊಬ್ಬ ಚಪ್ಪಲಿ ಎಸೆದ ಹೇಯ ಘಟನೆ ದೊಡ್ಡ ವಿವಾದವನ್ನು ಹುಟ್ಟುಹಾಕಿದೆ‌.

  ಇನ್ನು ಈ ಕಾರ್ಯಕ್ರಮ ಆರಂಭವಾಗುವುದಕ್ಕೂ ಮುನ್ನ ಪುನೀತ್ ರಾಜ್‍ಕುಮಾರ್ ಹಾಗೂ ದರ್ಶನ್ ಇಬ್ಬರ ಅಭಿಮಾನಿಗಳ ನಡುವೆಯೂ ಸಹ ಗಲಾಟೆ ನಡೆದಿತ್ತು. ನಿಮ್ಮ ಊರಿಗೆ ಬರುತ್ತಿದ್ದೇವೆ ಏನು‌ ಮಾಡ್ತೀರೊ ಮಾಡಿಕೊಳ್ಳಿ ಎಂದು ದರ್ಶನ್ ಅಭಿಮಾನಿಗಳು ಹಾಕಿದ್ದ ಸವಾಲಿನಿಂದ ರೊಚ್ಚಿಗೆದ್ದಿದ್ದ ಪು‌ನೀತ್ ಫ್ಯಾನ್ಸ್ ಹಾಡು ಬಿಡುಗಡೆ ಕಾರ್ಯಕ್ರಮದ ಸ್ಟೇಜ್ ಹತ್ತಿ ಪುನೀತ್ ಬಾವುಟ ಹಾರಿಸಿದ್ದರು ಹಾಗೂ ಕ್ರಾಂತಿ ಚಿತ್ರದ ಬ್ಯಾನರ್ ಕಿತ್ತೆಸೆದಿದ್ದರು.

  ಹೀಗೆ ಇಬ್ಬರ ಅಭಿಮಾನಿಗಳ ನಡುವೆ ಸಂಘರ್ಷ ನಡೆದಿದ್ದ ಕಾರಣದಿಂದ ದರ್ಶನ್ ಅವರ ಮೇಲೆ ಚಪ್ಪಲಿ ಎಸೆದವನು‌ ಪುನೀತ್ ಅಭಿಮಾನಿಯೇ ಎಂದು ದೊಡ್ಡ ‌ಮಟ್ಟದಲ್ಲಿ ಆರೋಪಿಸಲಾಗಿದೆ. ಇನ್ನು ಪುನೀತ್ ಅಭಿಮಾನಿಗಳು ಈ‌ ಕೆಲಸ ಮಾಡಲು ಸಾಧ್ಯವಿಲ್ಲ, ಇದು ಮೂರನೇ ವ್ಯಕ್ತಿ ಮಾಡಿ ತಂದಿಟ್ಟು ತಮಾಷೆ ನೋಡುತ್ತಿದ್ದಾನೆ ಎಂದು ಅಪ್ಪು ಫ್ಯಾನ್ಸ್ ಪ್ರತಿರೋಧಿಸಿದ್ದಾರೆ. ಈ ಘಟನೆ ಕುರಿತು ಚಂದನವನದ ಹಲವಾರು ಕಲಾವಿದರು ಪ್ರತಿಕ್ರಿಯಿಸಿದ್ದು, ದರ್ಶನ್ ಬೆಂಬಲಕ್ಕೆ ನಿಂತಿದ್ದಾರೆ. ಕಿಚ್ಚ ಸುದೀಪ್ ಕೂಡ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ಇದರಲ್ಲಿ ಮೂರನೇ ವ್ಯಕ್ತಿಯ ಕಿಡಿಗೇಡಿತನದ ಕೆಲಸದಿಂದ ಅಪ್ಪು ಅಭಿಮಾನಿಗಳಿಗೂ ಕೆಟ್ಟ ಹೆಸರು ಹಾಗೂ ದರ್ಶನ್ ಇದಕ್ಕೆ ಅರ್ಹ ವ್ಯಕ್ತಿಯಲ್ಲ ಎಂದಿದ್ದರು. ವೈಮನಸ್ಸಿದ್ದರೂ ಸಹ ದರ್ಶನ್ ಬೆಂಬಲಕ್ಕೆ ನಿಂತ ಸುದೀಪ್ ಬಗ್ಗೆ ಮೆಚ್ಚುಗೆ ವ್ಯಕ್ತವಾದವು. ಆದರೆ ಇದೀಗ ಕೆಲ ಸುದೀಪ್ ಅಭಿಮಾನಿಗಳೇ ಇದನ್ನು ವಿರೋಧಿಸುತ್ತಿದ್ದಾರೆ‌.

  ನಾಯಿಬಾಲ ಡೊಂಕು!

  ನಾಯಿಬಾಲ ಡೊಂಕು!

  ನಾಯಿಬಾಲದ ಚಿತ್ರವೊಂದನ್ನು ಹಂಚಿಕೊಂಡಿರುವ ಕಿಚ್ಚನ ಅಭಿಮಾನಿ ನಾಯಿಬಾಲ ಯಾವತ್ತಿದ್ದರೂ ಡೊಂಕೇ, ಇದನ್ನು ಹೇಳುವ ಅರ್ಹತೆ ನನಗಿಲ್ಲ ಆದರೂ ಹೇಳುತ್ತಿದ್ದೇನೆ, ಎರಡೂ ಕೈ ಸೇರಿದರೆ ಚಪ್ಪಾಳೆ ಆಗುತ್ತೇ ಹೊರತು ಒಂದು ಕೈನಿಂದ ಅಲ್ಲ, ಹಾಗಾಗಿ ನೀವು ನೀವಾಗಿರಿ ಹಾಗೂ ಅಭಿಮಾನಿಗಳ ಬಗ್ಗೆ ಯೋಚಿಸಿ ಸಾಕು, ಕೊನೆಯಲ್ಲಿ ನಿಮ್ಮ ಬೆಂಬಲಕ್ಕೆ ಕನ್ನಡ ಚಿತ್ರರಂಗದಲ್ಲಿ ಯಾರೂ ಬರುವುದಿಲ್ಲ, ಬರುವುದು ನಿಮ್ಮ ಅಭಿಮಾನಿಗಳು‌ ಮಾತ್ರ ಎಂದು ಬರೆದು ಟ್ವೀಟ್ ಮಾಡಿದ್ದಾರೆ.

  ಪ್ರತಿಕ್ರಿಯಿಸಿದ ಕಿಚ್ಚ!

  ಪ್ರತಿಕ್ರಿಯಿಸಿದ ಕಿಚ್ಚ!

  ಅಭಿಮಾನಿ ಮಾಡಿದ ಈ ಸಲಹೆಯ ಟ್ವೀಟ್ ಕುರಿತು ಕಿಚ್ಚ ಸುದೀಪ್ ಪ್ರತಿಕ್ರಿಯಿಸಿದ್ದಾರೆ. "ನಾನು ನನ್ನ ಅಭಿಮಾನಿಗಳ ಬಗ್ಗೆ ಯೋಚಿಸುವ ಅಗತ್ಯವಿಲ್ಲ. ಏಕೆಂದರೆ ನಾನು ಅವರಿಂದ ದೂರ ಉಳಿದಿಲ್ಲ. ನಾನು ಅವರ ಜೊತೆಯಲ್ಲೇ ಬದುಕುತ್ತಿದ್ದೇನೆ, ಅವರಿಗಾಗಿಯೇ ಬದುಕುತ್ತಿದ್ದೇನೆ. ಅವರು ನನ್ನನ್ನು ಜೀವಂತವಾಗಿ ಉಳಿಸಿದ್ದಾರೆ"

  ಈ ಮಟ್ಟದ ಸಲಹೆ ಯಾಕೆ?

  ಈ ಮಟ್ಟದ ಸಲಹೆ ಯಾಕೆ?

  ಆ ಅಭಿಮಾನಿ ಇಂತಹ ಸಲಹೆ ಕೊಡಲು ಬಲವಾದ ಕಾರಣಗಳೂ ಇವೆ‌. ಈ ಹಿಂದೆ ಸುದೀಪ್ ಅವರ ಪೈಲ್ವಾನ್ ಚಿತ್ರಕ್ಕೆ ಪೈರಸಿಯಾಗಿ ಭಾರೀ ಹಿನ್ನಡೆ ಉಂಟಾದಾಗ ಸುದೀಪ್ ಬೆನ್ನಿಗೆ ನಿಂತವರಿಗಿಂತ ನೋಡಿ ನಕ್ಕವರೇ ಹೆಚ್ಚು‌, ಚಿತ್ರ ಸೋಲುಂಡಿತು ಎಂದು ಹೀಯಾಳಿಸಿ ನಕ್ಕವರೇ ಹೆಚ್ಚು, ವಿಕ್ರಾಂತ್ ರೋಣ ಪರಿಸ್ಥಿತಿ ಕೂಡ ಇದೆ, ಚಿತ್ರ ಒಳ್ಳೆಯ ಗಳಿಕೆ ಕಂಡರೂ ಸಹ ಚಿತ್ರ ಚೆನ್ನಾಗಿಲ್ಲ, ಚಿತ್ರ ಫ್ಲಾಪ್ ಎಂದು ಅಪಪ್ರಚಾರ ಮಾಡಿದ್ದರು. ಈ ಎಲ್ಲಾ ಸಂದರ್ಭಗಳಲ್ಲಿಯೂ ಸುದೀಪ್ ಅವರಿಗೆ ಹೆಚ್ಚು ಬೆಂಬಲ ಸಿಗಲಿಲ್ಲ. ಹೀಗಾಗಿಯೇ ಈ ಅಭಿಮಾನಿ ಇಂತಹ ಸಲಹೆ ನೀಡಿದ್ದಾರೆ.

  English summary
  Sudeep fans are not happy about their hero involving in Darshan issue. Take a look
  Wednesday, December 21, 2022, 15:08
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X