»   » 'ಬಚ್ಚನ್' ಚಿತ್ರದ ಗ್ರಾಫಿಕ್ಸ್ ಗೆ ಒಂದು ಕೋಟಿ ಖರ್ಚು

'ಬಚ್ಚನ್' ಚಿತ್ರದ ಗ್ರಾಫಿಕ್ಸ್ ಗೆ ಒಂದು ಕೋಟಿ ಖರ್ಚು

Posted By:
Subscribe to Filmibeat Kannada

ಈ ವರ್ಷದ ಬಹುನಿರೀಕ್ಷಿತ ಚಿತ್ರಗಳಲ್ಲಿ ಬಚ್ಚನ್ ಚಿತ್ರವೂ ಒಂದು. ಈಟಿವಿ ಕನ್ನಡ ವಾಹಿನಿಯ 'ಬಿಗ್ ಬಾಸ್' ರಿಯಾಲಿಟಿ ಶೋಗೆ ಸುದೀಪ್ ಅಡಿಯಿಟ್ಟ ಬಳಿಕ ಅವರ ಜನಪ್ರಿಯತೆ ಮತ್ತಷ್ಟು ಹೆಚ್ಚಾಗಿದೆ. ಈ ಜನಪ್ರಿಯತೆ ಅವರ 'ಬಚ್ಚನ್' ಚಿತ್ರದ ಮೇಲೂ ನೇರ ಪರಿಣಾಮ ಬೀರುವ ಸಾಧ್ಯತೆಗಳಿವೆ.

ಇದೇ ಏಪ್ರಿಲ್ 11ರ ಗುರುವಾರದಂದು ಚಿತ್ರ ಬಿಡುಗಡೆಯಾಗುತ್ತಿದೆ. ಸುದೀಪ್ ಅಭಿಮಾನಿಗಳು ಯುಗಾದಿ ಹಬ್ಬದ ಸಂಭ್ರಮವನ್ನು ಮತ್ತಷ್ಟು ಎಂಜಾಯ್ ಮಾಡಬಹುದಾಗಿದೆ. ಬಹುಕೋಟಿ ಬಜೆಟ್ ಚಿತ್ರ ಇದಾಗಿದ್ದು ಗ್ರಾಫಿಕ್ಸ್ ಕೆಲಸಕ್ಕಾಗಿಯೇ ಸುಮಾರು ಒಂದು ಕೋಟಿ ರುಪಾಯಿ ಖರ್ಚು ಮಾಡಲಾಗಿದೆ ಎನ್ನುತ್ತವೆ ಮೂಲಗಳು.


ಹೈದರಾಬಾದಿನ ಸ್ಟುಡಿಯೋ ಒಂದರಲ್ಲಿ ಕಂಪ್ಯೂಟರ್ ಗ್ರಾಫಿಕ್ಸ್ ಮಾಡಲಾಗಿದೆ. ಚಿತ್ರದ ಪ್ರತಿ ಸನ್ನಿವೇಶಕ್ಕೂ ಕಂಪ್ಯೂಟರ್ ಗ್ರಾಫಿಕ್ಸ್ ಹಾಗೂ ಅನಿಮೇಷನ್ ಬಳಸಿಕೊಳ್ಳಲಾಗಿರುವುದು ಬಚ್ಚನ್ ಚಿತ್ರದ ವಿಶೇಷಗಳಲ್ಲಿ ಒಂದು. ಗ್ರಾಫಿಕ್ಸ್ ಗಾಗಿ ಅತಿಹೆಚ್ಚು ಖರ್ಚು ಮಾಡಲಾಗಿರುವ ಚಿತ್ರ ಎಂಬ ಹೆಗ್ಗಳಿಕೆಗೂ ಬಚ್ಚನ್ ಚಿತ್ರ ಪಾತ್ರವಾಗಲಿದೆಯಂತೆ.

ಬುಲೆಟ್ ಫೈರಿಂಗ್, ಡಾಂ ಡೂಂ ಎನ್ನುವ ಫೈಟಿಂಗ್ ಸನ್ನಿವೇಶಗಳು, ಕಾರು ಆಕ್ಸಿಡೆಂಟ್ ಸನ್ನಿವೇಶಗಳಿಗೆ ಹೆಚ್ಚಾಗಿ ಗ್ರಾಫಿಕ್ಸ್ ಬಳಸಿಕೊಳ್ಳಲಾಗಿದೆ. ಶ್ರೀ ವೆಂಕಟೇಶ್ವರ ಕೃಪಾ ಎಂಟರ್ ಟೈನರ್ಸ್ ಲಾಂಛನದಲ್ಲಿ ಉದಯ್.ಕೆ.ಮೆಹ್ತ ಅವರು ನಿರ್ಮಿಸಿರುವ ಚಿತ್ರಕ್ಕೆ ಶಶಾಂಕ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ.

ಸುದೀಪ್ ಗೆ ಜೊತೆಯಾಗಿ ಪಾರೂಲ್ ಯಾದವ್, ತುಲಿಪ್ ಜೋಷಿ, ಭಾವನಾ ಮೆನನ್, ಆಶಿಶ್ ವಿದ್ಯಾರ್ಥಿ, ರವಿಶಂಕರ್ ಮತ್ತು ತೆಲುಗಿನ ಖ್ಯಾತನಟ ಜಗಪತಿ ಬಾಬು ಮುಂತಾದವರ ತಾರಾಬಳಗವಿರುವ ಈ ಚಿತ್ರಕ್ಕೆ ಶೇಖರ್ ಚಂದ್ರು ರವರ ಛಾಯಾಗ್ರಹಣವಿದೆ.

ವಿ.ಹರಿಕೃಷ್ಣ ಸಂಗೀತ ನೀಡಿದ್ದಾರೆ. ಶ್ರೀ ಸಂಕಲನ, ರವಿವರ್ಮ ಸಾಹಸ ನಿರ್ದೇಶನ ಹಾಗೂ ಹರ್ಷ, ಚಿನ್ನಿ ಪ್ರಕಾಶ್ ಮತ್ತು ಇಮ್ರಾನ್ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಸಾಕಷ್ಟು ನಿರೀಕ್ಷೆ ಮೂಡಿಸಿರುವ ಈ ಚಿತ್ರದ ಆಡಿಯೋ ಈಗಾಗಲೆ ಅಭಿಮಾನಿಗಳ ಮನಗೆದ್ದಿದೆ. (ಒನ್ಇಂಡಿಯಾ ಕನ್ನಡ)

English summary
Kichcha Sudeep's much expected Kannada film Bachchan slated for release on 11th April 2013. Sources says Rs.1 crore spent on graphics work alone. The film also featuring Bhavana, Tulip Joshi and Parul Yadav in the lead roles.
Please Wait while comments are loading...