»   » 'ಬಿಗ್ ಬಾಸ್' ರನ್ನರ್ ಕೀರ್ತಿಗೆ 10ಲಕ್ಷ ಕೊಟ್ಟ ಕಿಚ್ಚ ಸುದೀಪ್!

'ಬಿಗ್ ಬಾಸ್' ರನ್ನರ್ ಕೀರ್ತಿಗೆ 10ಲಕ್ಷ ಕೊಟ್ಟ ಕಿಚ್ಚ ಸುದೀಪ್!

Posted By:
Subscribe to Filmibeat Kannada

ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ 'ಬಿಗ್ ಬಾಸ್ ಕನ್ನಡ 4' ಯಶಸ್ವಿಯಾಗಿ ಮುಗಿದಿದೆ. ನಿರ್ದೇಶಕ 'ಒಳ್ಳೆ ಹುಡುಗ' ಪ್ರಥಮ್ ಈ ಬಾರಿಯ 'ಬಿಗ್ ಬಾಸ್' ವಿನ್ನರ್ ಆದ್ರೆ, ಕಿರಿಕ್ ಕೀರ್ತಿ ಎರಡನೇ ಸ್ಥಾನ ಪಡೆದು ರನ್ನರ್ ಎನಿಸಿಕೊಂಡರು.['ಬಿಗ್ ಬಾಸ್ ಕನ್ನಡ-4' ಗೆದ್ದ ಪ್ರಥಮ್: ಆರ್ಡರ್ ಈಸ್ ಪಾಸ್ಡ್.!]

Sudeep Gives 10 Lakhs to BiggBoss Runner Keerthi

'ಬಿಗ್ ಬಾಸ್' ಗೆದ್ದ ಪ್ರಥಮ್ ಗೆ ಕಲರ್ಸ್ ಕನ್ನಡ ವಾಹಿನಿ ಕಡೆಯಿಂದ 50 ಲಕ್ಷ ರೂಪಾಯಿ ನಗದು ಬಹುಮಾನ ನೀಡಲಾಯಿತು. ಇನ್ನೂ ರನ್ನರ್ ಅಪ್ ಆದ ಕೀರ್ತಿ ಅವರಿಗೆ ಸರ್ಪ್ರೈಸ್ ಎಂಬಂತೆ ಕಿಚ್ಚ ಸುದೀಪ್ ಕಡೆಯಿಂದ 10 ಲಕ್ಷ ರೂಪಾಯಿ ವಿಶೇಷವಾಗಿ ನೀಡಲಾಯಿತು.[ಒಂದೇ ಒಂದು ರೂಪಾಯಿ ಪ್ರಶಸ್ತಿ ಮೊತ್ತ ಬೇಡ : 'ಲಾರ್ಡ್' ಪ್ರಥಮ್]

Sudeep Gives 10 Lakhs to BiggBoss Runner Keerthi

ಕಿರಿಕ್ ಕೀರ್ತಿ ತಮಗೆ ಸಿಗುವ ಸಂಭಾವನೆಯಲ್ಲಿ 8/1 ಭಾಗವನ್ನ ಸಾಮಾಜಿಕ ಕೆಲಸಗಳಿಗೆ ಬಳಸುವುದಾಗಿ ವೇದಿಕೆಯಲ್ಲಿ ಘೋಷಿಸಿದರು. ಈ ವೇಳೆ ಕೀರ್ತಿ ಅವರ ಆಟದ ವೈಖರಿ ಹಾಗೂ ಅವರ ಸಾಮಾಜಿಕ ಕಾರ್ಯಕ್ರಮಗಳನ್ನ ಮೆಚ್ಚಿದ ನಟ, ನಿರೂಪಕ ಸುದೀಪ್ ಅವರು ತಮ್ಮ ಕಡೆಯಿಂದ 10 ಲಕ್ಷ ರೂ ಘೋಷಿಸಿದರು.

ಸುದೀಪ್ ಅವರ ಮಾತು ಕೇಳಿದ ಕಿರಿಕ್ ಕೀರ್ತಿ, 'ಬಿಗ್ ಬಾಸ್' ಗೆದ್ದಿದ್ದಕ್ಕಿಂತ ಹೆಚ್ಚು ಖುಷಿ ಆಗುತ್ತಿದೆ ಎಂದು ಕಿಚ್ಚನಿಗೆ ಅಭಿನಂದನೆ ಸಲ್ಲಿಸಿದರು.

English summary
Kannada Actor And BiggBoss Kannada 4 Host Kichcha Sudeep Gives 10 Lakh Rupees to BiggBoss 4 Runner Keerthi Kumar

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada