twitter
    For Quick Alerts
    ALLOW NOTIFICATIONS  
    For Daily Alerts

    ಸ್ನೇಹಕ್ಕೆ ಬೆಲೆ ಕೊಟ್ಟು, ನಿರ್ಧಾರ ಬದಲಿಸಿ, 17 ವರ್ಷಗಳ ಬಳಿಕ ಸುದೀಪ್ ಮಾಡಿದ್ದು 'ಈ' ಕೆಲಸ.!

    |

    ಕಿಚ್ಚ ಸುದೀಪ್ ಪ್ರತಿಭಾನ್ವಿತ, ಉತ್ತಮ ನಟ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಭಿನ್ನ-ವಿಭಿನ್ನ ಪಾತ್ರಗಳಿಗೆ ಜೀವ ತುಂಬಿರುವ ಸುದೀಪ್ ಇಲ್ಲಿಯವರೆಗೂ 50ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಆದ್ರೆ, ಅವರಿಗೆ ಸಿಕ್ಕಿರುವುದು ಬೆರಳೆಣಿಕೆಯಷ್ಟು ಪ್ರಶಸ್ತಿಗಳು ಮಾತ್ರ.

    ಪ್ರಶಸ್ತಿಗಳ ಮೇಲೆ ಕಿಚ್ಚ ಸುದೀಪ್ ಗೆ ಬೇಸರ ಇಲ್ಲ. ಆದ್ರೆ, ಪ್ರಶಸ್ತಿಗಳಿಂದಾಗಿ ವಿವಾದಕ್ಕೆ ಸಿಲುಕುವುದು 'ಅಭಿನಯ ಚಕ್ರವರ್ತಿ' ಸುದೀಪ್ ಗೆ ಇಷ್ಟವಿಲ್ಲ. ಹೀಗಾಗಿ, ಹದಿನೇಳು ವರ್ಷಗಳಿಂದ ಯಾವುದೇ ಪ್ರಶಸ್ತಿ ಪ್ರದಾನ ಸಮಾರಂಭಗಳಲ್ಲಿ ಕಿಚ್ಚ ಸುದೀಪ್ ಭಾಗವಹಿಸಿಲ್ಲ. ಕೆಲ ಅವಾರ್ಡ್ ಸೆರೆಮನಿಗಳಲ್ಲಿ ಸುದೀಪ್ ಭಾಗವಹಿಸಿದ್ದರೂ, ಪ್ರಶಸ್ತಿಗಳನ್ನು ಸುದೀಪ್ ಪಡೆದಿಲ್ಲ.

    ಆದ್ರೀಗ, ಸ್ನೇಹಕ್ಕೆ ಬೆಲೆ ಕೊಟ್ಟು ಪ್ರಶಸ್ತಿ ಪ್ರದಾನ ಸಮಾರಂಭವೊಂದರಲ್ಲಿ ಸುದೀಪ್ ಪಾಲ್ಗೊಂಡಿದ್ದಾರೆ. ಪ್ರಶಸ್ತಿಗಳ ಕುರಿತು ತಮ್ಮ ನಿರ್ಧಾರವನ್ನು ಬದಲಿಸಿಕೊಂಡು 'ಕನ್ನಡ ಚಿತ್ರರಂಗದ ಹೆಮ್ಮೆ' ಎಂಬ ಪ್ರಶಸ್ತಿಯನ್ನು ಸುದೀಪ್ ಸ್ವೀಕರಿಸಿದ್ದಾರೆ. ಮುಂದೆ ಓದಿರಿ...

    ಪ್ರಶಸ್ತಿಗಳಿಂದ ಸುದೀಪ್ ದೂರ

    ಪ್ರಶಸ್ತಿಗಳಿಂದ ಸುದೀಪ್ ದೂರ

    ''ಪ್ರಶಸ್ತಿಗೆ ಬೆಲೆ ಕೊಡುವುದಿಲ್ಲ ಅಂತ ನಾನು ಹೇಳಲ್ಲ. 15 ವರ್ಷಗಳಿಂದ ನಾನು ಯಾವ ಪ್ರಶಸ್ತಿ ಪ್ರದಾನ ಸಮಾರಂಭಗಳಿಗೂ ಹೋಗಿಲ್ಲ. ಪ್ರಶಸ್ತಿಗಳಿಂದ ನನಗೇನೋ ನೋವಾಗಿದೆ ಅಂತಲ್ಲ. ದೂರ ಇರುವುದರಿಂದ ಬಹಳ ಖುಷಿ ಸಿಕ್ಕಿದೆ. ಸ್ವಾರ್ಥ ಹೊರಟು ಹೋಗಿದೆ'' ಎಂದು ಹಿಂದೊಮ್ಮೆ ಕಿಚ್ಚ ಸುದೀಪ್ ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದರು.

    ಅರ್ಥಪೂರ್ಣ ಸಂದೇಶದೊಂದಿಗೆ ಹೊಸ ವರ್ಷದ ಶುಭಾಶಯ ತಿಳಿಸಿದ ಕಿಚ್ಚ ಸುದೀಪ್ಅರ್ಥಪೂರ್ಣ ಸಂದೇಶದೊಂದಿಗೆ ಹೊಸ ವರ್ಷದ ಶುಭಾಶಯ ತಿಳಿಸಿದ ಕಿಚ್ಚ ಸುದೀಪ್

    ಕನ್ನಡ ಚಿತ್ರರಂಗದ ಹೆಮ್ಮೆ ಸುದೀಪ್

    ಕನ್ನಡ ಚಿತ್ರರಂಗದ ಹೆಮ್ಮೆ ಸುದೀಪ್

    ''ಕಟ್ಟಕಡೆಯದಾಗಿ ನಾನು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡಿದ್ದು 2003 ರಲ್ಲಿ'' ಎಂದು ಸಂದರ್ಶನವೊಂದರಲ್ಲಿ ಸುದೀಪ್ ಹೇಳಿದ್ದರು. ಆದ್ರೀಗ, ಜೀ ಸಿನಿ ಅವಾರ್ಡ್ಸ್ 2020 ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು 'ಕನ್ನಡ ಚಿತ್ರರಂಗದ ಹೆಮ್ಮೆ' ಎಂಬ ಅವಾರ್ಡ್ ಪಡೆದಿದ್ದಾರೆ ಕಿಚ್ಚ ಸುದೀಪ್.

    'ದಬಾಂಗ್' ಹಿಟ್ ಆದ್ರೆ ಸುದೀಪ್ ವಿಷ್ಯದಲ್ಲಿ ಹೀಗೂ ಆಗಬಹುದು!'ದಬಾಂಗ್' ಹಿಟ್ ಆದ್ರೆ ಸುದೀಪ್ ವಿಷ್ಯದಲ್ಲಿ ಹೀಗೂ ಆಗಬಹುದು!

    ಜೀ ಸಿನಿ ಅವಾರ್ಡ್ಸ್ ತಮಿಳು 2020

    ಜೀ ಸಿನಿ ಅವಾರ್ಡ್ಸ್ ತಮಿಳು 2020

    ಜೀ ತಮಿಳು ವಾಹಿನಿಯ 'ಜೀ ಸಿನಿ ಅವಾರ್ಡ್ಸ್ 2020' ಯಲ್ಲಿ 'ಕನ್ನಡ ಚಿತ್ರರಂಗದ ಹೆಮ್ಮೆ' ಎಂಬ ಪ್ರಶಸ್ತಿಯನ್ನು ಸುದೀಪ್ ಪಡೆದಿದ್ದರೆ, 'ಭಾರತೀಯ ಚಿತ್ರರಂಗದ ಹೆಮ್ಮೆ' ಎಂಬ ಪ್ರಶಸ್ತಿಯನ್ನು ಕಮಲ್ ಹಾಸನ್ ಸ್ವೀಕರಿಸಿದ್ದಾರೆ. 2019ನೇ ಸಾಲಿನ ತಮಿಳು ಚಿತ್ರರಂಗದ ಅತ್ಯುತ್ತಮ ಕಲಾವಿದರು, ತಂತ್ರಜ್ಞರಿಗೆ ಇದೇ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ.

    ಸುದೀಪ್ ತಮ್ಮ ಹೆಸರಿನ ಮುಂದೆ 'ಸ್ಟಾರ್' ಬಿರುದು ಸೇರಿಸಿಲ್ಲ ಯಾಕೆ ಗೊತ್ತಾಸುದೀಪ್ ತಮ್ಮ ಹೆಸರಿನ ಮುಂದೆ 'ಸ್ಟಾರ್' ಬಿರುದು ಸೇರಿಸಿಲ್ಲ ಯಾಕೆ ಗೊತ್ತಾ

    ಟ್ವೀಟ್ ಮಾಡಿದ್ದಾರೆ ಸುದೀಪ್

    ಟ್ವೀಟ್ ಮಾಡಿದ್ದಾರೆ ಸುದೀಪ್

    ''ವರ್ಷಗಳ ಬಳಿಕ ಪ್ರಶಸ್ತಿ ಪಡೆಯಲು ಸಮಾರಂಭದಲ್ಲಿ ಭಾಗವಹಿಸಿದ್ದು ವಿಚಿತ್ರ ಎನಿಸಿತು. ಹಾಗೇ ಖುಷಿಯೂ ಆಯ್ತು. ನನ್ನ ಸ್ನೇಹಿತನಿಗಾಗಿ ನನ್ನ ನಿರ್ಧಾರ ಬದಲಿಸಿದ್ದೇನೆ. ನನ್ನ ಇರುವಿಕೆಯಿಂದ ಕೆಲವರಿಗೆ ಖುಷಿ ಆಗಿದ್ದು, ನನಗೂ ಖುಷಿ ತಂದಿದೆ'' ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ. ಪ್ರಶಸ್ತಿ ಪಡೆದ ಸುದೀಪ್ ಗೆ ರವಿಶಂಕರ್ ಗೌಡ, ನಿರ್ದೇಶಕ ಕೃಷ್ಣ, ಸ್ವಪ್ನ ಕೃಷ್ಣ, ರಘುರಾಮ್ ಸೇರಿದಂತೆ ಸಾವಿರಾರು ಅಭಿಮಾನಿಗಳು ಶುಭ ಕೋರಿದ್ದಾರೆ.

    English summary
    Kiccha Sudeep has altered his decision and has received Pride of Kannada Cinema Award.
    Monday, January 6, 2020, 9:17
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X