For Quick Alerts
  ALLOW NOTIFICATIONS  
  For Daily Alerts

  'ಪೈಲ್ವಾನ್' ವಿವಾದಕ್ಕೆ ಶುರುವಿನಲ್ಲೇ ತೆರೆ ಎಳೆದ ಕಿಚ್ಚ ಸುದೀಪ್

  By Pavithra
  |
  ದುನಿಯಾ ಮಗನ ಪೈಲ್ವಾನ್ ಡೈಲಾಗ್‌ಗೆ ಕಿಚ್ಚ್ ಹೇಳಿದ್ದೇನು..!! | FIlmibeat Kannada

  ಸದ್ಯ ಸ್ಟಾಂಡಲ್ ವುಡ್ ಅಂಗಳದಲ್ಲಿ ಸುದ್ದಿಯಲ್ಲಿರುವ ಸಿನಿಮಾ 'ಪೈಲ್ವಾನ್'. ಮೊದಲನೇ ಹಂತದ ಚಿತ್ರೀಕರಣವನ್ನು ಮುಗಿಸಿ ಸುದೀಪ್ ಬೇರೆ ಚಿತ್ರದಲ್ಲಿ ಬ್ಯುಸಿ ಆಗಿದ್ದಾರೆ. ಅಭಿಮಾನಿಗಳಿಗೆ ಚಿತ್ರದ ಬಗ್ಗೆ ಮಾಹಿತಿ ಇರಲಿ ಎನ್ನುವ ನಿಟ್ಟಿನಲ್ಲಿ ಸುದೀಪ್ 'ಪೈಲ್ವಾನ್' ಸಿನಿಮಾಗೆ ಸಂಬಂಧಿಸಿದಂತ ಎಲ್ಲಾ ಮಾಹಿತಿಯನ್ನು ಟ್ವಿಟ್ಟರ್ ಮೂಲಕ ತಲುಪಿಸುತ್ತಲೇ ಇರುತ್ತಾರೆ.

  'ಪೈಲ್ವಾನ್' ಚಿತ್ರ ಗಾಂಧಿನಗರದಲ್ಲಿ ಸಖತ್ ಸೌಂಡ್ ಮಾಡುತ್ತಿರುವ ಬೆನ್ನಲ್ಲೇ ದುನಿಯಾ ವಿಜಯ್ ಹಾಗೂ ಪುತ್ರ ಸಾಮ್ರಾಟ್ ಅಭಿನಯದ 'ಕುಸ್ತಿ' ಚಿತ್ರದ ಟೀಸರ್ ಬಿಡುಗಡೆ ಆಗಿದೆ. ಟೀಸರ್ ಅಂತ್ಯದಲ್ಲಿ ನಿನ್ನಂತ ಪೈಲ್ವಾನ್ ಗಳಿಗೆ ನಮ್ಮ ಅಪ್ಪ ಉಸ್ತಾದ್ ಕಣೋ ಎನ್ನುವ ಡೈಲಾಗ್ ಇದೆ.

  ಸುದೀಪ್, ಜಗ್ಗೇಶ್, ಮೇಘನಾ, ವಸಿಷ್ಠ ಒಬ್ಬೊಬ್ಬರು ಒಂದೊಂದು ಸುದ್ದಿ ಕೊಟ್ರುಸುದೀಪ್, ಜಗ್ಗೇಶ್, ಮೇಘನಾ, ವಸಿಷ್ಠ ಒಬ್ಬೊಬ್ಬರು ಒಂದೊಂದು ಸುದ್ದಿ ಕೊಟ್ರು

  ಸದ್ಯ ಆ ಡೈಲಾಗ್ ಹೊಸ ವಿವಾದವನ್ನು ಹುಟ್ಟು ಹಾಕಿದ್ದು ಕೆಲ ಅಭಿಮಾನಿಗಳು ಇದು 'ಪೈಲ್ವಾನ್' ಚಿತ್ರಕ್ಕೆ ಕೊಟ್ಟಿರುವ ಕೌಂಟರ್ ಡೈಲಾಗ್ ಎಂದು ಸುದ್ದಿ ಹಬ್ಬಿಸುತ್ತಿದ್ದಾರೆ. ಈ ವಿವಾದ ದೊಡ್ಡದಾಗುವ ಮುನ್ನವೇ ಕಿಚ್ಚ ವಿವಾದಕ್ಕೆ ತೆರೆ ಎಳೆದಿದ್ದಾರೆ. ಏನಿದು ವಿವಾದ? ಸುದೀಪ್ ಈ ಬಗ್ಗೆ ಹೇಳಿದ್ದೇನು? ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ..

  ಕುಸ್ತಿ-ಪೈಲ್ವಾನ್ ವಿವಾದ

  ಕುಸ್ತಿ-ಪೈಲ್ವಾನ್ ವಿವಾದ

  ಸದ್ಯ ಗಾಂಧಿನಗರದಲ್ಲಿ ಸುದ್ದಿ ಮಾಡುತ್ತಿರುವ 'ಪೈಲ್ವಾನ್' ಹಾಗೂ 'ಕುಸ್ತಿ' ಸಿನಿಮಾ ಮಧ್ಯೆ ಹೊಸದೊಂದು ವಿವಾದ ಸೃಷ್ಟಿ ಆಗಿದೆ. 'ಕುಸ್ತಿ' ಚಿತ್ರದ ಟೀಸರ್ ನಲ್ಲಿರುವ ಡೈಲಾಗ್ ಸುದೀಪ್ ಅವರಿಗೆ ಕೌಂಟರ್ ಕೊಟ್ಟಿರುವುದು ಎನ್ನುವುದು ಕೆಲ ಅಭಿಮಾನಿಗಳ ವಾದ.

  ವಿವಾದಕ್ಕೆ ಶುರುವಿನಲ್ಲೇ ತೆರೆ ಎಳೆದ ಕಿಚ್ಚ

  ವಿವಾದಕ್ಕೆ ಶುರುವಿನಲ್ಲೇ ತೆರೆ ಎಳೆದ ಕಿಚ್ಚ

  ಇನ್ನೇನು ಈ ವಿವಾದ ಹೆಚ್ಚಾಗುತ್ತೆ ಫ್ಯಾನ್ಸ್ ವಾರ್ ಆರಂಭವಾಗುತ್ತೆ ಎನ್ನುವುದನ್ನು ತಿಳಿದ ತಾವೇ ಖುದ್ದಾಗಿ ಈ ವಿವಾದಕ್ಕೆ ತೆರೆ ಹೇಳಿದ್ದಾರೆ. ಎರಡು ಸಿನಿಮಾಗಳ ಬಗ್ಗೆ ಟ್ವಿಟ್ಟರ್ ನಲ್ಲಿ ಸ್ಪಷ್ಟನೆ ಕೊಟ್ಟಿದ್ದಾರೆ.

  ವಿವಾದ ಬಗೆಹರಿಸಿದ ಕಿಚ್ಚ

  ವಿವಾದ ಬಗೆಹರಿಸಿದ ಕಿಚ್ಚ

  "ಪೈಲ್ವಾನ್ ಅನ್ನು ಪೈಲ್ವಾನ್ ಅಂತಾನೆ ಕರೆಯುತ್ತಾರೆ. ನಮ್ಮ ಸಿನಿಮಾಗೆ ಅದನ್ನು ಲಿಂಕ್ ಮಾಡುವುದು ಹೇಗೆ. ನಿಮ್ಮ ಅಭಿಪ್ರಾಯಗಳನ್ನು ನಾನು ಗೌರವಿಸುತ್ತೇನೆ. ನನ್ನ ಪ್ರಕಾರ ಇದು ಮುಂದುವರೆದರೆ ಚೆನ್ನಾಗಿರುವುದಿಲ್ಲ. ಜೊತೆಗೆ ದುನಿಯಾ ವಿಜಿ ಅವರ 'ಕುಸ್ತಿ' ಸಿನಿಮಾ ಟೀಸರ್ ಅನ್ನು ಗೌರವಿಸುತ್ತೇನೆ. ಹಾಗೇ ಚಿತ್ರಕ್ಕೆ ಒಳ್ಳೆದಾಗಲಿ ಎಂದು ತಿಳಿಸುತ್ತೇನೆ". ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.

  ಕಿಚ್ಚನ ಟ್ವೀಟ್ ಮೆಚ್ಚಿ ನಿರ್ದೇಶಕ ಕೃಷ್ಣ

  ಕಿಚ್ಚನ ಟ್ವೀಟ್ ಮೆಚ್ಚಿ ನಿರ್ದೇಶಕ ಕೃಷ್ಣ

  ಸಿನಿಮಾ ಹಾಗೂ ವಿವಾದದ ಬಗ್ಗೆ ಟ್ವೀಟ್ ಮಾಡಿದನ್ನು ನೋಡಿದ ನಿರ್ದೇಶಕ ಕೃಷ್ಣ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದ್ದಾರೆ. "ಹ್ಯಾಟ್ಸ್ ಆಫ್ ಸರ್. ನನಗೆ ನಿಮ್ಮ ಮೇಲಿನ ಪ್ರೀತಿ ಗೌರವ ಮತ್ತಷ್ಟು ಹೆಚ್ಚಾಯ್ತು ಇಂದು. ಇದೇ ಕಾರಣದಿಂದ ನೀವು ಎಲ್ಲರಿಂದ ಗೌರವವನ್ನು ಪಡೆದುಕೊಳ್ಳುತ್ತೀರಾ..ಎಲ್ಲರ ಮಧ್ಯೆ ನೀವು ವಿಭಿನ್ನವಾಗಿ ನಿಲ್ಲುತ್ತೀರಾ. ನಿಮ್ಮಿಂದ ಕಲಿಯಬೇಕಿರುವುದು ತುಂಬಾ ಇದೆ" ಎಂದಿದ್ದಾರೆ.

  English summary
  Kannada actor Sudeep has tweeted about the Pailwan controversy . and also Sudeep tweeted about Duniya Vijay's 'Kusthi' movie teaser

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X