»   » ಶಂಕರ್ ನಾಗ್ ಫ್ಯಾನ್ ಆದ್ರಾ ಸುದೀಪ್ ?

ಶಂಕರ್ ನಾಗ್ ಫ್ಯಾನ್ ಆದ್ರಾ ಸುದೀಪ್ ?

Posted By:
Subscribe to Filmibeat Kannada

ಕಿಚ್ಚ ಸುದೀಪ್ ಶಂಕರ್ ನಾಗ್ ಫ್ಯಾನ್ ಆದ್ರಾ? ಎನ್ನುವ ಸುದ್ದಿ ಗಾಂಧಿನಗರದಲ್ಲಿ ಕೇಳಿಬರುತ್ತಿದೆ. ಈ ಸುದ್ದಿ ಕೇಳಿ ಬರಲು ಕಾರಣವೂ ಇದೆ. ಕಿಚ್ಚ ಅಭಿನಯದ ಪೈಲ್ವಾನ್ ಸಿನಿಮಾದ ಚಿತ್ರೀಕರಣ ಇಂದಿನಿಂದ ಶುರುವಾಗಿದೆ .ಚಿತ್ರದ ವರ್ಕಿಂಗ್ ಸ್ಟೈಲ್ ಅನ್ನು ಸುದೀಪ್ ತಮ್ಮ ಟ್ವಿಟ್ಟರ್ ಮೂಲಕ ಬಿಡುಗಡೆ ಮಾಡಿದ್ದಾರೆ .

ಕಿಚ್ಚ ಐದು ಪೋಟೋಗಳನ್ನ ಕೊಲಾಜ್ ಮಾಡಿ ಅಪ್ಲೋಡ್ ಮಾಡಿದ್ದು, ಆ ಫೋಟೋದಲ್ಲಿ ಶಂಕರ್ ನಾಗ್ ಅಭಿಮಾನಿಗಳ ಬಳಗ ಎಂಬ ಬೋರ್ಡ್ ಇರುವ ಕಾಲೋನಿಯ ಫೋಟೋ ಕೂಡ ಇದೆ .ಅದನ್ನ ನೋಡಿರುವ ಅಭಿಮಾನಿಗಳು ಮತ್ತು ಗಾಂಧಿನಗರದ ಮಂದಿಗೆ ಇಂಥದ್ದೊಂದು ಪ್ರಶ್ನೆ ಹುಟ್ಟಿಕೊಂಡಿದೆ.

Sudeep has uploaded pictures of Pailwan movie

ಈಗಾಗಲೇ ಸುದೀಪ್ ವಿಷ್ಣು ಅಭಿಮಾನಿಯಾಗಿ 'ವಿಷ್ಣುವರ್ಧನ' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು ಆದ್ದರಿಂದ ಈ ಚಿತ್ರದಲ್ಲಿ ಶಂಕರ್ ನಾಗ್ ಅಭಿಮಾನಿಯಾಗಿ ಕಾಣಿಸಿಕೊಳ್ಳುತ್ತಾರಾ ಎಂದು ಕುತೂಹಲ ಮೂಡಿದೆ. ಸದ್ಯ ಶಂಕರ್ ನಾಗ್ ಅವರ ಹೆಸರಿರುವ ಪೋಟೋ ನೋಡಿರುವ ಕಿಚ್ಚನ ಫ್ಯಾನ್ಸ್ ಸಖತ್ ಖುಷಿ ಆಗಿದ್ದಾರೆ.

ಮೊದಲ ದಿನದ ಚಿತ್ರೀಕರಣದಲ್ಲಿ ಸಾಕಷ್ಟು ಕುತೂಹಲ ಮೂಡಿಸಿರುವ ಪೈಲ್ವಾನ್ ಚಿತ್ರತಂಡವೇ ಈ ಪ್ರಶ್ನೆಗೆ ಉತ್ತರಿಸಬೇಕಾಗಿದೆ. ಹೆಬ್ಬುಲಿ ಕೃಷ್ಣ ಪೈಲ್ವಾನ್ ಸಿನಿಮಾವನ್ನ ನಿರ್ದೇಶನ ಮಾಡಿದ್ದು ಚಿತ್ರದಲ್ಲಿ ಸುನೀಲ್ ಶೆಟ್ಟಿ ಇದೇ ಮೊದಲ ಬಾರಿಗೆ ಕಿಚ್ಚನ ಜತೆ ಸ್ಕ್ರೀನ್ ಶೇರ್ ಮಾಡುತ್ತಿದ್ದಾರೆ .

English summary
Kannada Actor Sudeep has uploaded the pictures of Pailwan movie working stills on Twitte. Gajakesari fame krishna directing the Pailwan movie.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X