»   » ಸ್ಯಾಂಡಲ್ ವುಡ್ ನ 'ಆಲ್ ಟೈಮ್ ರೆಕಾರ್ಡ್' ಉಡೀಸ್ ಮಾಡಿದ 'ಹೆಬ್ಬುಲಿ'

ಸ್ಯಾಂಡಲ್ ವುಡ್ ನ 'ಆಲ್ ಟೈಮ್ ರೆಕಾರ್ಡ್' ಉಡೀಸ್ ಮಾಡಿದ 'ಹೆಬ್ಬುಲಿ'

Posted By:
Subscribe to Filmibeat Kannada

ಕಿಚ್ಚ ಸುದೀಪ್ ಅಭಿನಯದ 'ಹೆಬ್ಬುಲಿ' ಸ್ಯಾಂಡಲ್ ವುಡ್ ಇತಿಹಾಸದಲ್ಲಿ ಯಾರು ಮಾಡಿರದ ದಾಖಲೆಯನ್ನ ಮಾಡಿದೆ. ಮೊದಲ ದಿನದಿಂದಲೂ ಬಾಕ್ಸ್ ಆಫೀಸ್ ನಲ್ಲಿ ಅಬ್ಬರಿಸಿದ್ದ 'ಹೆಬ್ಬುಲಿ' ಈಗ 18 ದಿನಗಳಲ್ಲಿ ಹಳೆಯ ಎಲ್ಲ ದಾಖಲೆಗಳನ್ನ ಪುಡಿ ಪುಡಿ ಮಾಡಿದೆ.[ಕಿಚ್ಚನ 'ಹೆಬ್ಬುಲಿ' ಘರ್ಜನೆಗೆ ಬಾಕ್ಸ್ ಆಫೀಸ್ ಛಿದ್ರ ಛಿದ್ರ.!]

ಈ ಮೂಲಕ ಹಿಂದಿನ ಎಲ್ಲ ಚಿತ್ರಗಳ ದಾಖಲೆಯನ್ನ ಹಿಂದಿಕ್ಕಿರುವ 'ಹೆಬ್ಬುಲಿ' ಅತಿ ವೇಗವಾಗಿ ಈ ಸಾಧನೆ ಮಾಡಿರುವ ಮೊದಲ ಕನ್ನಡ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಯಶಸ್ಸಿಗೆ ಕಾರಣವಾದ ಎಲ್ಲರಿಗೂ ಸ್ವತಃ ಕಿಚ್ಚ ಸುದೀಪ್ ಸಂತಸ ವ್ಯಕ್ತಪಡಿಸಿದ್ದಾರೆ. ಮುಂದೆ ಓದಿ.....


ಕನ್ನಡ ಇತಿಹಾಸದಲ್ಲೇ ಹೊಸ ದಾಖಲೆ!

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ 'ಹೆಬ್ಬುಲಿ' ಸಿನಿಮಾ, ಕನ್ನಡ ಇತಿಹಾಸದಲ್ಲಿ ಯಾರು ಮಾಡಿರದ ದಾಖಲೆಯನ್ನ ಮಾಡಿದೆ. ಕಲೆಕ್ಷನ್ ನಲ್ಲಿ ಕನ್ನಡ ಸಿನಿಮಾಗಳ ಈ ಹಿಂದಿನ ಎಲ್ಲ ರೆಕಾರ್ಡ್ ಗಳನ್ನ ಬ್ರೇಕ್ ಮಾಡಿ ಹೊಸ ಇತಿಹಾಸ ಸೃಷ್ಟಿಸಿದೆ.[ಕನ್ನಡದಲ್ಲಿ ಮೊದಲು 100 ಕೋಟಿ ಗಳಿಸುವ ಸಿನಿಮಾ ಯಾವುದು?]


50 ಕೋಟಿ ಗಳಿಸಿದ 'ಹೆಬ್ಬುಲಿ'!

'ಹೆಬ್ಬುಲಿ' ಬಾಕ್ಸ್ ಆಫೀಸ್ ನಲ್ಲಿ 50 ಕೋಟಿ ಗಳಿಸುವ ಮೂಲಕ ಎಲ್ಲ ದಾಖಲೆಗಳನ್ನ ಬ್ರೇಕ್ ಮಾಡಿದೆ. ಮೊದಲ ವಾರದಲ್ಲೇ ಸುಮಾರು 30 ಕೋಟಿ ಬಾಚಿದ್ದ ಹೆಬ್ಬುಲಿ, ಈಗ 18 ದಿನಗಳಲ್ಲಿ 50 ಕೋಟಿ ಗಡಿದಾಟಿದೆಯಂತೆ. ಈ ಮೂಲಕ ಅತಿವೇಗವಾಗಿ 50 ಗಳಿಸಿದ ಕನ್ನಡದ ಮೊಟ್ಟ ಮೊದಲ ಸಿನಿಮಾ ಇದಾಗಿದೆ.[ಕಿಚ್ಚನ 'ಹೆಬ್ಬುಲಿ' ಮೊದಲ ದಿನ ಗಳಿಸಿದ್ದೆಷ್ಟು?]


50 ಕೋಟಿ ಕ್ಲಬ್ ನಲ್ಲಿ ಕಿಚ್ಚನ 2ನೇ ಚಿತ್ರ

ಸುದೀಪ್ ಅಭಿನಯದ ಚಿತ್ರವೂ 50 ಕೋಟಿ ಗಳಿಸಿರುವುದು ಇದೇ ಮೊದಲಲ್ಲ. ಈ ಹಿಂದೆ ಕೆ.ಎಸ್ ರವಿಕುಮಾರ್ ನಿರ್ದೇಶನ ಮಾಡಿದ್ದ 'ಕೋಟಿಗೊಬ್ಬ-2' ಚಿತ್ರವೂ 50 ಕೋಟಿ ಗಳಿಸುವ ಮೂಲಕ ದಾಖಲೆಯಾಗಿತ್ತು. ಆದ್ರೆ, 'ಹೆಬ್ಬುಲಿ' ಆ ದಾಖಲೆಯನ್ನ ಕೇವಲ 18 ದಿನಗಳಲ್ಲಿ ಬ್ರೇಕ್ ಮಾಡಿದೆ.


ಸುದೀಪ್ ಸಂತಸ!

'ಹೆಬ್ಬುಲಿ' ಸಿನಿಮಾ 50 ಕೋಟಿ ಗಳಿಸಿದ ಖುಷಿಯನ್ನ ಸುದೀಪ್ ಟ್ವಿಟ್ಟರ್ ನಲ್ಲಿ ಸ್ವತಃ ಹಂಚಿಕೊಂಡಿದ್ದಾರೆ.'' ತುಂಬಾ ಖುಷಿಯಾಗುತ್ತಿದೆ. ಎಲ್ಲರಿಗೂ ಥ್ಯಾಂಕ್ ಯೂ'' ಎಂದು ಟ್ವೀಟ್ ಮಾಡಿದ್ದಾರೆ.


ಫೆಬ್ರವರಿ 23 ರಂದು ಬಿಡುಗಡೆಯಾಗಿತ್ತು

ಅಂದ್ಹಾಗೆ, ಸುದೀಪ್ ಅಭಿನಯದ ಹೆಬ್ಬುಲಿ ಫೆಬ್ರವರಿ 23 ರಂದು ರಿಲೀಸ್ ಆಗಿತ್ತು. ಕೃಷ್ಣ ಈ ಚಿತ್ರವನ್ನ ನಿರ್ದೇಶನ ಮಾಡಿದ್ದರು. ಕ್ರೇಜಿಸ್ಟಾರ್ ರವಿಚಂದ್ರನ್, ಅಮಲಾ ಪೌಲ್, ರವಿಶಂಕರ್ ಸೇರಿದಂತೆ ಹಲವರು ಅಭಿನಯಿಸಿದ್ದರು. ಅರ್ಜುನ್ ಜನ್ಯ ಸಂಗೀತವಿದ್ದ ಈ ಚಿತ್ರವನ್ನ ಉಮಾಪತಿ ಮತ್ತು ರಘುನಾಥ್ ನಿರ್ಮಾಣ ಮಾಡಿದ್ದರು.


ಕನ್ನಡದಲ್ಲಿ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರಗಳು

ದಾಖಲೆಗಳ ಪ್ರಕಾರ ಇದುವರೆಗೂ ಸ್ಯಾಂಡಲ್ ವುಡ್ ಬಾಕ್ಸ್ ಆಫೀಸ್ ನಲ್ಲಿ 'ಮುಂಗಾರು ಮಳೆ', 'ರಂಗಿತ ರಂಗ', 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ', 'ಕಿರಿಕ್ ಪಾರ್ಟಿ', 'ಮಾಸ್ಟರ್ ಪೀಸ್', ಮತ್ತು 'ಕೋಟಿಗೊಬ್ಬ-2 'ಚಿತ್ರಗಳು ಅತಿ ಹೆಚ್ಚು ಕಲೆಕ್ಷನ್ ಮಾಡಿವೆ ಎನ್ನಲಾಗಿದೆ. ಈಗ 'ಹೆಬ್ಬುಲಿ' ಈ ಎಲ್ಲ ದಾಖಲೆಗಳನ್ನ ಬ್ರೇಕ್ ಮಾಡಿದೆಯಂತೆ.


English summary
According to Sorce Kichcha Sudeep-starrer ‘Hebbuli’ has grossed Rs 50 crore on Sunday since its release, last week.The Movie Released on February 23rd.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada