ಬಡ ಬಾಲಕಿಯ ಕಷ್ಟಕ್ಕೆ ಸ್ಪಂದಿಸಿದ ಸುದೀಪ್: ಶಿಕ್ಷಣಕ್ಕೆ ನೆರವು

ನಟ ಕಿಚ್ಚ ಸುದೀಪ್ ತಮ್ಮ ನಟನೆಯ ಜೊತೆ-ಜೊತೆಗೆ ಸಾಮಾಜಿಕ ಕಾರ್ಯಗಳಿಂದಲೂ ಖ್ಯಾತರು. ಕಷ್ಟದಲ್ಲಿರುವವರಿಗೆ ಸಹಾಯ ಮಾಡುತ್ತಲೇ ಇರುತ್ತಾರೆ. ಇದೀಗ ಬಡ ಹೆಣ್ಣು ಮಗುವೊಂದಕ್ಕೆ ಓದಿಗೆ ಸಹಾಯ ಒದಗಿಸಿದ್ದಾರೆ ಕಿಚ್ಚ ಸುದೀಪ್.

Recommended Video

Dhruva Sarja has Shared the last photo with his brother Chiranjeevi Sarja | Filmibeat Kannada

ಬೆಂಗೂರಿನ ನಾಗದೇವನಹಳ್ಳಿಯ ನಿವಾಸಿ ಆರನೇ ತರಗತಿ ಓದುತ್ತಿರುವ ಕನಿಶಾ ಗೆ ಶಾಲೆಯ ಫೀಸು ತುಂಬಲು ಕಷ್ಟವಾಗಿತ್ತು.

ಅಪ್ಪನಿಲ್ಲದೆ ತಾಯಿಯ ಆರೈಕೆಯಿಂದ ಬೆಳೆಯುತ್ತಿರುವ ಕನಿಶಾ ಸಂದೀಪಿನ ಶಾಲೆಯಲ್ಲಿ ಕಲಿಯುತ್ತಿದ್ದರು. ಆದರೆ ಲಾಕ್‌ಡೌನ್‌ನಿಂದಾಗಿ ತಾಯಿಗೆ ಸೂಕ್ತ ಸಮಯದಲ್ಲಿ ಹಣ ದೊರಕದೆ ಶಾಲೆಯ ಫೀಸು ಕಟ್ಟುವುದು ಕಷ್ಟವಾಗಿತ್ತು.

Sudeep Helped A Poor Girl For Her Education

ಆಗ ಕನಿಶಾ ತಾಯಿ ಕಿಚ್ಚ ಸುದೀಪ್ ಚಾರಿಟೇಬಲ್ ಟ್ರಸ್ಟ್ ಮೊರೆ ಹೋದರು. ಕೂಡಲೇ ಸ್ಪಂದಿಸಿದ ಸುದೀಪ್ ಮತ್ತು ಟ್ರಸ್ಟ್ ಮಗುವಿನ ಫೀಸು ತುಂಬಲು ಹಣ ನೀಡಿತು.

ಸಂದೀಪಿನ ಶಾಲೆಯು ಇಂದು ನೀಡಿರುವ ಪತ್ರ ಹೇಳಿಕೆ ಪ್ರಕಾರ ಚೆಕ್‌ ಮೂಲಕ ಕನಿಶಾ ಅವರ 29,950 ರೂ ಫೀಸನ್ನು ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿ ನೀಡಿದೆ. ಈ ಫೀಸು 2020-21 ಶೈಕ್ಷಣಿಕ ಸಾಲಿಗೆಂದು ನೀಡಲಾಗಿದೆಯಂತೆ.

More from Filmibeat

English summary
Actor Kichcha Sudeep helped a poor girl Kanisha for her education. He and is charitable trust pay her school fee.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X