For Quick Alerts
  ALLOW NOTIFICATIONS  
  For Daily Alerts

  ಸುದೀಪ್ ಚುನಾವಣಾ ಪ್ರಚಾರದ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದವರು ಯಾರು ?

  By Pavithra
  |

  ಕಳೆದ ಎರಡು ದಿನಗಳಿಂದ ಕಿಚ್ಚ ಸುದೀಪ್ ಸಿ ಎಂ ಸಿದ್ದರಾಮಯ್ಯ ಅವರ ಪರವಾಗಿ ಪ್ರಚಾರ ಮಾಡುತ್ತಾರೆ. ಬಾದಾಮಿ ಕ್ಷೇತ್ರಕ್ಕೆ ಭೇಟಿ ನೀಡಿ ಅಲ್ಲಿನ ಜನತೆಯ ಬಳಿ ಸಿದ್ದರಾಮಯ್ಯ ಅವರಿಗೆ ಮತ ಹಾಕುವಂತೆ ಮನವಿ ಮಾಡುತ್ತಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.

  ಆದರೆ ಎಲ್ಲಿಯೂ ಸುದೀಪ್ ನಾನು ಚುನಾವಣಾ ಪ್ರಚಾರದಲ್ಲಿ ಭಾಗಿ ಆಗುತ್ತೇನೆ ಎನ್ನುವುದನ್ನು ತಿಳಿಸಿಲ್ಲ. ಆದರೆ ಕಾಂಗ್ರೆಸ್ ಪಕ್ಷದ ಅಂಗಳದಲ್ಲಿ ಮಾತ್ರ ಸುದೀಪ್ ನಮ್ಮ ಅಭ್ಯರ್ಥಿಗಳ ಪರವಾಗಿ ಮತಯಾಚನೆ ಮಾಡುತ್ತಾರೆ ಎನ್ನುವ ಮಾತಿದೆ. ಬಾದಾಮಿ ಕ್ಷೇತ್ರದಲ್ಲಿ ಸುದೀಪ್ ಸಿ ಎಂ ಪರವಾಗಿ ಪ್ರಚಾರ ಮಾಡುತ್ತಾರೆ ಎನ್ನುವುದನ್ನ ತಿಳಿದ ತಕ್ಷಣ ಅಲ್ಲಿಯ ಜನರು ಇದಕ್ಕೆ ವಿರೋಧ ವ್ಯಕ್ತ ಪಡಿಸಿದ್ದರು.

  ಸಿಎಂ ಸಿದ್ದರಾಮಯ್ಯ ಪರ ಸುದೀಪ್ ಪ್ರಚಾರಕ್ಕೆ ವಿಘ್ನಸಿಎಂ ಸಿದ್ದರಾಮಯ್ಯ ಪರ ಸುದೀಪ್ ಪ್ರಚಾರಕ್ಕೆ ವಿಘ್ನ

  ಇವೆಲ್ಲಾ ಬೆಳವಣಿಗೆಯನ್ನ ತಿಳಿದ ಸುದೀಪ್ ಅಭಿಮಾನಿ ಸಂಘಟನೆಯ ಸದಸ್ಯರು ಈ ಬಗ್ಗೆ ಅಧಿಕೃತ ಮಾಹಿತಿಯನ್ನ ಹೊರ ಹಾಕಿದ್ದಾರೆ. ಕಿಚ್ಚ ಸುದೀಪ್ ಬಾದಾಮಿ ಕ್ಷೇತ್ರದಲ್ಲಿ ಪ್ರಚಾರ ಕಾರ್ಯಕ್ರಮದಲ್ಲಿ ಭಾಗಿ ಆಗುವುದಿಲ್ಲ ಎಂದಿದ್ದಾರೆ. ಹಾಗಾದರೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತಾರಾ? ಈ ಪ್ರಶ್ನೆಗೆ ಇನ್ನು ಉತ್ತರ ಸಿಕ್ಕಿಲ್ಲ.

  ಆದರೆ ಬಾದಾಮಿಯಲ್ಲಿ ಮಾತ್ರ ಪ್ರಚಾರ ಮಾಡುವುದಿಲ್ಲ ಎನ್ನುವುದು ಕನ್ಫರ್ಮ್ ಆಗಿದೆ. ಸುದೀಪ್ ಯಾವುದೇ ಪಕ್ಷದ ಪರವಾಗಿ ಮತಯಾಚನೆ ಮಾಡುವುದಿಲ್ಲ. ತಮಗೆ ಆತ್ಮೀಯ ಹಾಗೂ ಉತ್ತಮ ಎನ್ನಿಸುವವರ ಜೊತೆಯಲ್ಲಿ ಹೋಗಿ ಜನರಿಗೆ ಒಳ್ಳೆ ವ್ಯಕ್ತಿಗೆ ಮತ ನೀಡಿ ಎಂದು ಕೇಳಿಕೊಳ್ಳಲಿದ್ದಾರೆ.

  ಶ್ರೀರಾಮುಲು ಪರ 'ಮಾಸ್ಟರ್ ಪೀಸ್' ಯಶ್ ಮತಯಾಚನೆಶ್ರೀರಾಮುಲು ಪರ 'ಮಾಸ್ಟರ್ ಪೀಸ್' ಯಶ್ ಮತಯಾಚನೆ

  English summary
  Kannada actor Sudeep is not campaigning for Badami in favor of CM Siddaramaiah in Karnataka Assembly elections. Sudeep's fan organization officially stated that the news was false

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X