»   » 'ಅಂಬಿ' ಬಳಗಕ್ಕೆ ಸೇರಿಕೊಳ್ಳುತ್ತಿದ್ದಾರೆ ಸುದೀಪ್ ಮತ್ತು ಶ್ರುತಿ

'ಅಂಬಿ' ಬಳಗಕ್ಕೆ ಸೇರಿಕೊಳ್ಳುತ್ತಿದ್ದಾರೆ ಸುದೀಪ್ ಮತ್ತು ಶ್ರುತಿ

Posted By:
Subscribe to Filmibeat Kannada

ರೆಬಲ್ ಸ್ಟಾರ್ ಅಂಬರೀಶ್ ನಾಯಕನಾಗಿ ಅಭಿನಯಿಸುತ್ತಿರುವ 'ಅಂಬಿ ನಿಂಗೆ ವಯಸಾಯ್ತೋ' ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಜಾಕ್ ಮಂಜು ಮತ್ತು ಕಿಚ್ಚ ಕ್ರಿಯೇಷನ್ಸ್ ಅಡಿಯಲ್ಲಿ ತಯಾರಾಗುತ್ತಿರುವ ಈ ಚಿತ್ರದ ಶೂಟಿಂಗ್ ಗೆ ಸುದೀಪ್ ಸೇರಿಕೊಳ್ಳುತ್ತಿದ್ದಾರೆ.

ಇಷ್ಟು ದಿನ 'ಬಿಗ್ ಬಾಸ್' ಮತ್ತು 'ದಿ ವಿಲನ್' ಚಿತ್ರದ ಚಿತ್ರಿಕರಣದಲ್ಲಿದ್ದ ಸುದೀಪ್ ಈಗ 'ಅಂಬಿ ನಿಂಗ್ ವಯಸಾಯ್ತೋ' ಚಿತ್ರತಂಡದ ಜೊತೆಯಾಗುತ್ತಿದ್ದಾರೆ. ಫೆಬ್ರವರಿ 2ನೇ ವಾರದಿಂದ ಅಂಬಿ ಜೊತೆ ಶೂಟಿಂಗ್ ಮಾಡಲಿದ್ದಾರಂತೆ.

ಸುದೀಪ್ ಮಾತ್ರವಲ್ಲ, ಕಿಚ್ಚನ ಜೊತೆಗೆ ನಟಿ ಶ್ರುತಿ ಹರಿಹರನ್ ಕೂಡ ಎಂಟ್ರಿ ಕೊಡುತ್ತಿದ್ದಾರೆ. ಅಂಬರೀಶ್ ಅವರ ಚಿಕ್ಕವಯಸ್ಸಿನ ಪಾತ್ರವನ್ನ ಸುದೀಪ್ ನಿರ್ವಹಿಸುತ್ತಿದ್ದು, ಚಿತ್ರದಲ್ಲಿ ಶ್ರುತಿ, ಸುದೀಪ್ ಗೆ ಜೋಡಿಯಾಗಿದ್ದಾರೆ.

ಈ ಚಿತ್ರದಲ್ಲಿರುವ 'ಟ್ರೈನರ್' ಯಾರೆಂದು ಗುರುತಿಸಿ?

Sudeep joins to Ambi Ning Vysaitho

ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತವಿದ್ದು ಜೆಬಿನ್ ಜಾಕೋಬ್ ಛಾಯಾಗ್ರಹಣ ಮಾಡಿದ್ದಾರೆ. ಸದ್ಯ, ಚಿತ್ರದ ಎರಡನೇ ಹಂತದ ಚಿತ್ರೀಕರಣ ಸಾಗುತ್ತಿದೆ. ಇದಾದ ಬಳಿಕ ಅಂಬರೀಶ್ ಅವರ ಫಸ್ಟ್ ಲುಕ್ ಟೀಸರ್ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.

Sudeep joins to Ambi Ning Vysaitho

ಅಂದ್ಹಾಗೆ, ಕನ್ನಡದ 'ಅಂಬಿ ನಿಂಗ್ ವಯಸಾಯ್ತೋ' ಚಿತ್ರ ತಮಿಳಿನ 'ಪವರ್ ಪಾಂಡಿ' ಚಿತ್ರದ ರೀಮೇಕ್. ಕನ್ನಡದ ನೆಟಿವಿಟಿಗೆ ತಕ್ಕಂತೆ ಚಿತ್ರಕಥೆ ಮಾಡಿ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ ನಿರ್ದೇಶಕ ಗುರುದತ್ ಗಾಣಿಗ.

English summary
The shooting of Ambi Ning Vayassaytho is currently rolling, and the second schedule of shooting will begin from this week. Sudeep and Sruthi Hariharan joining the sets to take part in the shoot from the second week of February.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada