ಕೋಟಿಗೊಬ್ಬ-2 ಚಿತ್ರದ ಶೂಟಿಂಗ್ ಗೆ ಮುಹೂರ್ತ ಫಿಕ್ಸ್
ಕಿಚ್ಚ ಸುದೀಪ್, ದಿವಂಗತ ನಟ, ಸಾಹಸಸಿಂಹ ವಿಷ್ಣುವರ್ದನ್ ಅಭಿನಯದ ಕೋಟಿಗೊಬ್ಬ ಚಿತ್ರದ ಮುಂದುವರಿದ ಭಾಗ, ಕೋಟಿಗೊಬ್ಬ-2 ಚಿತ್ರ ಮಾಡುತ್ತಾರೆ ಅಂತ, ಇದೇ ಫಿಲ್ಮಿಬೀಟಲ್ಲಿ ನಾವು ನಿಮಗೆ ಹೇಳಿದ್ವಿ ತಾನೇ.
ಹದಿನಾಲ್ಕು ವರ್ಷಗಳ ಹಿಂದೆ ನಿರ್ಮಾಪಕ ಸೂರಪ್ಪ ಬಾಬು ವಿಷ್ಣುವರ್ಧನ್ ಅಭಿನಯದ 'ಕೋಟಿಗೊಬ್ಬ' ಚಿತ್ರವನ್ನು ನಿರ್ಮಾಣ ಮಾಡಿದ್ದರು. ಇದೀಗ ಮತ್ತೊಮ್ಮೆ ಅವರದೇ ನಿರ್ಮಾಣದಲ್ಲಿ ತಯಾರಾಗುತ್ತಿರುವ ಕೋಟಿಗೊಬ್ಬ-2 ಚಿತ್ರಕ್ಕೆ ಸುದೀಪ್ ಸಿಕ್ಸ್ ಪ್ಯಾಕ್ ಬೇರೆ ಮಾಡ್ತಾರಂತೆ. [ಅಂತೂ, ರನ್ನ ಚಿತ್ರದ ಲಾಭನಷ್ಟದ ಲೆಕ್ಕಾಚಾರ ಇತ್ಯರ್ಥ!]

ಇದೀಗ ಲೇಟೆಸ್ಟ್ ಮಾಹಿತಿ ಪ್ರಕಾರ, ಕಿಚ್ಚ ಸುದೀಪ್, ಹಾಗೂ ನಿರ್ದೇಶಕ ಕೆ.ಎಸ್ ರವಿಕುಮಾರ್ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಕೋಟಿಗೊಬ್ಬ-2 ಚಿತ್ರದ ಶೂಟಿಂಗ್ ಗೆ ಮೂಹೂರ್ತ ಫಿಕ್ಸ್ ಮಾಡಲಾಗಿದೆ.
ಇದೇ ಜುಲೈ 17 ರಿಂದ ಚಿತ್ರದ ಶೂಟಿಂಗ್ ಶುರು ಹಚ್ಚಿಕೊಳ್ಳುವುದಾಗಿ ಚಿತ್ರತಂಡ ನಿರ್ಧರಿಸಿದೆ. ಚಿತ್ರದ ಮೊದಲ ಭಾಗವನ್ನು 40 ದಿನಗಳಲ್ಲಿ ಬೆಂಗಳೂರಿನ ಸುತ್ತಮುತ್ತಲಲ್ಲಿ ಚಿತ್ರೀಕರಿಸಲು, ಕೋಟಿಗೊಬ್ಬ-2 ಚಿತ್ರತಂಡ ಡಿಸೈಡ್ ಮಾಡಿದೆ. [ಈಬಾರಿ ಬಿಗ್ಬಾಸ್ ಮಾಡೋದು ಕೂಡ ತಮಾಷೇನೆ ಅಲ್ಲ!]

ಒಟ್ಟು 100 ದಿನಗಳ ಕಾಲ ಚಿತ್ರದ, ಚಿತ್ರೀಕರಣ ನಡೆಸಲು ಕೋಟಿಗೊಬ್ಬ-2 ಪ್ಲಾನ್ ಹಾಕಿಕೊಂಡಿದೆ. ಚಿತ್ರದ ಮೊದಲ ಭಾಗದಲ್ಲಿ ಸುದೀಪ್ ಹಾಗೂ ಇತರ ಸಹ ನಟ-ನಟಿಯರ ಭಾಗದ ಚಿತ್ರೀಕರಣ ನಡೆಯಲಿರುವುದರಿಂದ, ಚಿತ್ರಕ್ಕೆ ನಾಯಕಿ ಯಾರೂ ಅನ್ನೋದು ಇನ್ನೂ ಡಿಸೈಡ್ ಆಗಿಲ್ಲಾ ಅಂತೆ. ಕೋಟಿಗೊಬ್ಬ-2 ಚಿತ್ರದ ಹೆಚ್ಚಿನ ಸುದ್ದಿಗಾಗಿ ಫಿಲ್ಮಬೀಟ್ ಕನ್ನಡ ನೊಡುತ್ತಿರಿ.


Click it and Unblock the Notifications











