For Quick Alerts
  ALLOW NOTIFICATIONS  
  For Daily Alerts

  SRK 124: ಒಂದು ಖುಷಿ ಇನ್ನೊಂದು ಬೇಸರದ ವಿಷಯ ಹಂಚಿಕೊಂಡ ಸುದೀಪ್

  |

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟನೆಯ 124ನೇ ಸಿನಿಮಾ ಅಧಿಕೃತವಾಗಿ ಸೆಟ್ಟೇರಿದೆ. ಶಿವಣ್ಣನ ಹೊಸ ಸಿನಿಮಾದ ಮುಹೂರ್ತ ಇಂದು ಬೆಂಗಳೂರಿನಲ್ಲಿ ನೆರವೇರಿದ್ದು, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದರು. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ಕಿಚ್ಚ ಸುದೀಪ್ ಇಬ್ಬರು ಈ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬರಬೇಕಿತ್ತು. ಆದರೆ, ಪುನೀತ್ ಅವರ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ.

  ಶಿವಣ್ಣನ 124 ನೇ ಸಿನಿಮಾ ಚಾಲನೆ ಕೊಟ್ಟ ಕಿಚ್ಚ ಸುದೀಪ್

  ಶಿವಣ್ಣನ 124ನೇ ಚಿತ್ರಕ್ಕೆ 'ನೀ ಸಿಗೋವರೆಗೂ' ಎಂದು ಹೆಸರಿಟ್ಟಿದ್ದು, ಚಿತ್ರತಂಡಕ್ಕೆ ಒಳ್ಳೆಯದಾಗಲಿ ಎಂದು ಸುದೀಪ್ ಶುಭಹಾರೈಸಿದರು. ಈ ವೇಳೆ ಮಾತನಾಡಿದ ಸುದೀಪ್, ''ಆರಂಭದ ದಿನಗಳಲ್ಲಿ ನಮ್ಮ ಸಿನಿಮಾಗಳಿಗೆ ಶಿವಣ್ಣ ಅವರು ಕ್ಲಾಪ್ ಮಾಡೋಕೆ ಬರ್ತಿದ್ದಾರೆ ಅಂದ್ರೆ ನಮಗೆ ಬಹಳ ದೊಡ್ಡ ವಿಚಾರ ಆಗಿತ್ತು. ಈಗ ಅವರೊಟ್ಟಿಗೆ ಕುಳಿತುಕೊಂಡಾಗ ಇದು ಎಷ್ಟು ಅದ್ಭುತವಾದ ಜರ್ನಿ ಎಂದೆನಿಸುತ್ತಿದೆ. ಶಿವಣ್ಣ 124ನೇ ಮಾಡ್ತಿರೋದು, ನಮಗೆ ಇಂಡಸ್ಟ್ರಿಯಲ್ಲಿ 25 ವರ್ಷ ಆಗಿದ್ದು, ಈ ಜರ್ನಿಯಲ್ಲಿ ಬಹಳಷ್ಟು ಜನರು ಬೆಂಬಲವಾಗಿ, ಜೊತೆಯಾಗಿ ನಿಂತಿದ್ದರು. ಅದರಲ್ಲಿ ಶಿವಣ್ಣ ಅವರ ಪಾತ್ರವೂ ಇದೆ'' ಎಂದು ಥ್ಯಾಂಕ್ ಯೂ ಹೇಳಿದರು.

  ಶಿವಣ್ಣನ 124ನೇ ಸಿನಿಮಾ 'ನೀ ಸಿಗೋವರೆಗೂ': ಕಿಚ್ಚನ ಕ್ಲ್ಯಾಪ್ಶಿವಣ್ಣನ 124ನೇ ಸಿನಿಮಾ 'ನೀ ಸಿಗೋವರೆಗೂ': ಕಿಚ್ಚನ ಕ್ಲ್ಯಾಪ್

  ಹಾಗೆ ಮಾತು ಮುಂದುವರಿಸಿದ ಸುದೀಪ್, 124ನೇ ಚಿತ್ರದ ಮುಹೂರ್ತಕ್ಕೆ ಬಂದಿರುವ ಈ ಘಳಿಗೆಯಲ್ಲಿ ಒಂದು ಖುಷಿ ವಿಚಾರನೂ ಇದೆ, ಇನ್ನೊಂದು ಬೇಸರದ ವಿಚಾರವೂ ಇದೆ ಎಂದು ತಮ್ಮ ಅಭಿಪ್ರಾಯ ಹೇಳಿಕೊಂಡರು. ಮುಂದೆ ಓದಿ...

  124ನೇ ಸಿನಿಮಾ ಸಾಮಾನ್ಯ ವಿಚಾರವಲ್ಲ

  124ನೇ ಸಿನಿಮಾ ಸಾಮಾನ್ಯ ವಿಚಾರವಲ್ಲ

  ''ಚಿತ್ರರಂಗದಲ್ಲಿ ಕೆಲವು ವರ್ಷಗಳು ಕಳೆಯುತ್ತಿದ್ದಂತೆ ಸಾಮಾನ್ಯವಾಗಿ ನಟನಿಗೆ ಸಿನಿಮಾಗಳು ಮಾಡುವ ಅವಕಾಶ ಕಡಿಮೆಯಾಗುತ್ತದೆ. ಆದರೆ ಒಬ್ಬ ವ್ಯಕ್ತಿಯಲ್ಲಿ ಡೆಡಿಕೇಶನ್, ಸಿನಿಮಾ ಮೇಲಿನ ಪ್ರೀತಿ, ಶಿಸ್ತು ಇದ್ದಾಗ ಮಾತ್ರ ಇಂತಹ ಸಾಧನೆಗಳು ಸಾಧ್ಯ ಎನ್ನುವುದಕ್ಕೆ ಶಿವಣ್ಣ ಸಾಕ್ಷಿ. 124 ಸಿನಿಮಾ ಮಾಡುವುದು ಸಾಮಾನ್ಯ ವಿಚಾರವಲ್ಲ. 124 ಎನ್ನುವುದು ಕೇವಲ ಸಂಖ್ಯೆ ಮಾತ್ರವಲ್ಲ, ಅದು ಅವರ ಸಿನಿಮಾ ಡೆಡಿಕೇಶನ್ ತೋರಿಸುತ್ತದೆ'' ಎಂದು ಸುದೀಪ್ ಸಂತಸ ವ್ಯಕ್ತಪಡಿಸಿದರು.

  ಇದು ನನಗೆ ಖುಷಿಯ ವಿಚಾರ

  ಇದು ನನಗೆ ಖುಷಿಯ ವಿಚಾರ

  'ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ 124ನೇ ಚಿತ್ರದಲ್ಲಿ ನಾನು ಭಾಗಿಯಾಗಿರುವುದು ನನಗೆ ಖುಷಿ ತಂದಿದೆ' ಎಂದು ಸುದೀಪ್ ಹೇಳಿದರು. 'ಬಹುಶಃ ನಾನು 124ನೇ ಸಿನಿಮಾ ಮಾಡುವುದಾದರೆ ತಂದೆ ಪಾತ್ರ ಮಾಡ್ತಿರಬಹುದು' ಎಂದು ಹಾಸ್ಯಚಟಾಕಿ ಹಾರಿಸಿದರು.

  ಬೇಸರದ ಸಂಗತಿ ಏನಪ್ಪಾ ಅಂದ್ರೆ

  ಬೇಸರದ ಸಂಗತಿ ಏನಪ್ಪಾ ಅಂದ್ರೆ

  ಶಿವಣ್ಣ ಅವರು ಇಂಡಸ್ಟ್ರಿಯಲ್ಲಿ 35 ವರ್ಷದ ಆಗಿದೆ, 124ನೇ ಸಿನಿಮಾ ಮಾಡ್ತಿದ್ದಾರೆ. ಈಗಲೂ ಅವರ ಜೊತೆ ಲವ್ ಸ್ಟೋರಿ ಸಿನಿಮಾಗಳನ್ನು ಮಾಡ್ತಾರೆ. ನಮ್ಮ ಜೊತೆ ಲವ್ ಸ್ಟೋರಿ ಮಾಡೋದು ಮರೆತು ಹೋಗಿದ್ದಾರೆ. ನಮಗೂ ಇಂತಹ ನಿರ್ದೇಶಕರು ಲವ್ ಸ್ಟೋರಿ ಸ್ಕ್ರಿಪ್ಟ್ ಮಾಡಬಹುದು ಅಲ್ಲವೇ? ನನ್ನ ಸಿನಿಮಾಗಳಲ್ಲಿ ರೊಮ್ಯಾಂಟಿಕ್ ಹಾಡು ನೋಡಿಯೇ ವರ್ಷಗಳು ಕಳೆದು ಹೋಗಿದೆ. ಇದು ನನಗೆ ಬೇಸರದ ವಿಷಯ ಎಂದು ಸುದೀಪ್ ನಗು ಬೀರಿದರು.

  'ನೀ ಸಿಗೋವರೆಗೂ' ಚಿತ್ರದ ಬಗ್ಗೆ

  'ನೀ ಸಿಗೋವರೆಗೂ' ಚಿತ್ರದ ಬಗ್ಗೆ

  'ನೀ ಸಿಗೋವರೆಗೂ' ಸಿನಿಮಾದಲ್ಲಿ ಶಿವರಾಜ್ ಕುಮಾರ್ ಎರಡು ವಿಭಿನ್ನ ಶೇಡ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ತೆಲುಗು ನಟಿ ಮೆಹ್ರೀನ್ ಫಿರ್ಝಾದಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಚರಣ್ ರಾಜ್ ಸಂಗೀತ ನಿರ್ದೇಶಿಸುತ್ತಿದ್ದಾರೆ. ರಾಮ್ ಧುಲಿಪುಡಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, ನಾರಾಲ ಶ್ರೀನಿವಾಸ ರೆಡ್ಡಿ, ಸ್ವಾತಿ ವನಪಲ್ಲಿ, ಶ್ರೀಕಾಂತ್ ಧುಲಿಪುಡಿ, ಕುಡುಪುಡಿ ವಿಜಯಕುಮಾರ್ ಬಂಡವಾಳ ಹಾಕುತ್ತಿದ್ದಾರೆ. ಇನ್ನುಳಿದಂತೆ ಹಿರಿಯ ಕಲಾವಿದ ನಾಸರ್, ಸಂಪತ್, ಸಾಧು ಕೋಕಿಲ, ಗಾಯಕಿ ಮಂಗ್ಲಿ ಸೇರಿದಂತೆ ಹಲವರು ನಟಿಸುತ್ತಿದ್ದಾರೆ. ಬೆಂಗಳೂರು, ಚಿಕ್ಕಮಗಳೂರು, ವಾರಣಾಸಿ, ಕಾಶ್ಮೀರದಲ್ಲಿ ಚಿತ್ರೀಕರಣ ಮಾಡುವ ಯೋಜನೆ ಇದೆ. ಈಗ ಆಗಸ್ಟ್ 19 ರಂದು ಶೂಟಿಂಗ್ ಶುರುವಾಗುತ್ತದೆ. ಆಮೇಲೆ ಅಕ್ಟೋಬರ್‌ನಲ್ಲಿ ಮತ್ತೆ ಚಿತ್ರೀಕರಣ ಮಾಡಲಾಗುತ್ತೆ. ಏಪ್ರಿಲ್ ತಿಂಗಳೊಳಗೆ ಸಿನಿಮಾ ತೆರೆಗೆ ಬರಬಹುದು.

  English summary
  Hatrick hero Shivarajkumar starts his 124th film today officely. kiccha sudeep was attend muhurtha of new film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X