For Quick Alerts
ALLOW NOTIFICATIONS  
For Daily Alerts

  ಸುದೀಪ್ 'ಮಾಣಿಕ್ಯ' ಮೇಕಿಂಗ್ ವಿಡಿಯೋ ಹೈಲೈಟ್ಸ್

  By Rajendra
  |

  'ಬಚ್ಚನ್' ಚಿತ್ರದ ಬಳಿಕ ಕಿಚ್ಚ ಸುದೀಪ್ ಕೈಗೆತ್ತಿಕೊಂಡಿರುವ ಮತ್ತೊಂದು ಚಿತ್ರ 'ಮಾಣಿಕ್ಯ'. ಈಗಷ್ಟೇ ಈ ಚಿತ್ರದ ಮೇಕಿಂಗ್ ವಿಡಿಯೋ ಮೊದಲ ಭಾಗ ಬಿಡುಗಡೆ ಮಾಡಲಾಗಿದೆ. ಇದೇ ಮೊದಲ ಬಾರಿಗೆ ನಲ್ಲ ಮಲ್ಲರ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಚಿತ್ರವಿದು.

  ಈಗಾಗಲೆ ನಾಲ್ಕು ವಿಭಿನ್ನ ಮೇಕಿಂಗ್ ವಿಡಿಯೋಗಳನ್ನು ಮಾಡಿಕೊಳ್ಳಲಾಗಿದೆ. ಅದರ ಭಾಗವಾಗಿ ಮೊದಲ ಮೇಕಿಂಗ್ ವಿಡಿಯೋ ಈಗ ಬಿಡುಗಡೆ ಮಾಡಿದ್ದಾರೆ. ಮೊದಲ ಮೇಕಿಂಗ್ ವಿಡಿಯೋ 'ಮಾಣಿಕ್ಯ' ಚಿತ್ರದ ತಂತ್ರಜ್ಞರ ಬಗೆಗಿನ ಮಾಹಿತಿಯನ್ನು ಒಳಗೊಂಡಿದೆ.

  ಉಳಿದ ಮೂರು ವಿಡಿಯೋಗಳನ್ನು ಮುಂಬರುವ ದಿನಗಳಲ್ಲಿ ಬಿಡುಗಡೆ ಮಾಡಲಾಗುತ್ತದೆ. ಮುಂದಿನ ಭಾಗಗದಲ್ಲಿ ಚಿತ್ರದ ಪಾತ್ರವರ್ಗದ ವಿವರಗಳನ್ನು ನಿರೀಕ್ಷಿಸಬಹುದು. ಚಿತ್ರದಲ್ಲಿ ಬಹಳಷ್ಟು ಕಲಾವಿದರು, ತಂತ್ರಜ್ಞರು ಇರುವುದರಿಂದ ಇಷ್ಟೆಲ್ಲಾ ಮೇಕಿಂಗ್ ವಿಡಿಯೋಗಳ ಅವಶ್ಯಕತೆ ಇದೆ ಎನ್ನುತ್ತವೆ ಮೂಲಗಳು.['ಮಾಣಿಕ್ಯ' ವಿಡಿಯೋ]

  ಇನ್ನು ಈ ಮೇಕಿಂಗ್ ವಿಡಿಯೋದ ಹಿನ್ನೆಲೆ ಸಂಗೀತ ಗಮಸೆಳೆಯುತ್ತದೆ. ಹಾಗೆಯೇ ತಂತ್ರಜ್ಞರ ಬಗೆಗಿನ ಮಾಹಿತಿ, ದೃಶ್ಯಗಳು ಆಕರ್ಷಿಸುತ್ತವೆ. ಎಸ್ಎಸ್ ರಾಜಮೌಳಿ ಅವರ 'ಬಾಹುಬಲಿ' ಚಿತ್ರದ ಮೇಕಿಂಗ್ ಸ್ಫೂರ್ತಿ 'ಮಾಣಿಕ್ಯ' ಮೇಕಿಂಗ್ ನಲ್ಲೂ ಕಾಣುತ್ತದೆ.

  ತೆಲುಗಿನ ಯಶಸ್ವಿ ಚಿತ್ರ 'ಮಿರ್ಚಿ' ರೀಮೇಕ್

  ಇನ್ನು 'ಮಾಣಿಕ್ಯ' ಚಿತ್ರದ ವಿಚಾರಕ್ಕೆ ಬರುವುದಾದರೆ ಇದು ತೆಲುಗಿನ ಯಶಸ್ವಿ ಚಿತ್ರ 'ಮಿರ್ಚಿ' ರೀಮೇಕ್. ನಲ್ಲ ಸುದೀಪ್ ಹಾಗೂ ಮಲ್ಲ ರವಿಚಂದ್ರನ್ ಅಭಿನಯಿಸುತ್ತಿರುವ ಚಿತ್ರವಿದು. ಮೂಲ ಚಿತ್ರದಲ್ಲಿ ಪ್ರಭಾಸ್, ಸತ್ಯರಾಜ್, ಅನುಷ್ಕಾ ಶೆಟ್ಟಿ, ರಿಚಾ ಗಂಗೋಪಾಧ್ಯಾಯ ಮುಂತಾದವರು ಅಭಿನಯಿಸಿದ್ದರು.

  ಸುದೀಪ್ ಅವರದೇ ಚಿತ್ರಕಥೆ

  ಸುಮಾರು ರು.30 ಕೋಟಿ ಬಜೆಟ್ ನಲ್ಲಿ ನಿರ್ಮಿಸಿದ್ದ 'ಮಿರ್ಚಿ' ಚಿತ್ರ ಬಾಕ್ಸ್ ಆಫೀಸಲ್ಲಿ ರು.103 ಕೋಟಿ ಗಳಿಸಿ ದಾಖಲೆ ನಿರ್ಮಿಸಿದೆ. ಈ ಚಿತ್ರದ ಆಕ್ಷನ್ ಕಟ್ ಜೊತೆಗೆ ಕಥೆ, ಚಿತ್ರಕಥೆಯನ್ನೂ ಸುದೀಪ್ ಅವರೇ ಹೆಣೆದಿರುವುದು ವಿಶೇಷ.

  ಅರ್ಜುನ್ ಜನ್ಯ ಸಂಗೀತ ನಿರ್ದೇಶಕ

  ಅರ್ಜುನ್ ಜನ್ಯ ಸಂಗೀತವಿರುವ ಚಿತ್ರದ ಪಾತ್ರವರ್ಗದಲ್ಲಿ ರಮ್ಯಕೃಷ್ಣ ಸಹ ಇದ್ದಾರೆ. ಸುದೀಪ್ ಅವರಿಗೆ ತಂದೆಯಾಗಿ ರವಿಚಂದ್ರನ್ ಅಭಿನಯಿಸುತ್ತಿದ್ದಾರೆ ಎಂಬುದು ಸದ್ಯದ ಮಾಹಿತಿ. ಇದೇ ಮೊದಲ ಬಾರಿಗೆ ನಲ್ಲ ಮಲ್ಲರ ಕಾಂಬಿನೇಷನ್ ನಲ್ಲಿ ಬರುತ್ತಿರುವ ಚಿತ್ರ.

  ಬಂಗಲೆ ಸೆಟ್ ಗಾಗಿ ರು.30 ಲಕ್ಷ ಖರ್ಚು

  ಹೈದರಾಬಾದಿನಲ್ಲಿ ನಡೆದ ಚಿತ್ರೀಕರಣ ವೇಳೆ ಸುದೀಪ್ ಗಾಯಗೊಂಡಿದ್ದರು. ಆದರೂ ಆ ನೋವನ್ನು ಲೆಕ್ಕಿಸದೆ ಅವರು ಚಿತ್ರದಲ್ಲಿ ತೊಡಗಿಕೊಂಡಿದ್ದರು. ಈ ಚಿತ್ರದ ಬಂಗಲೆ ಸೆಟ್ ಗಾಗಿ ಸುಮಾರು ರು.30 ಲಕ್ಷ ಖರ್ಚು ಮಾಡಲಾಗಿದೆ.

  ಎರಡು ಕೂಡು ಕುಟುಂಬಗಳ ಕಥೆ

  ಕಂಠೀರವ ಸ್ಟುಡಿಯೋ ಹಾಗೂ ಇತಿಹಾಸ ಪ್ರಸಿದ್ಧ ಬೀದರ್ ನಲ್ಲಿ ಚಿತ್ರೀಕರಿಸಿಕೊಳ್ಳಲಾಗಿದೆ. ಈ ಚಿತ್ರದಲ್ಲಿ ರವಿಚಂದ್ರನ್ ಮತ್ತು ರವಿಶಂಕರ್ ಎರಡು ಕೂಡು ಕುಟುಂಬಗಳ ಯಜಮಾನರಾಗಿ ಕಾಣಿಸಲಿದ್ದಾರೆ.

  'ಮಾಣಿಕ್ಯ' ಚಿತ್ರ ಚಿತ್ರ ಪ್ರೇಮಿಗಳ ಹೃದಯ ಗೆಲ್ಲಲಿ

  ಹತ್ತುದಿನಗಳ ಕಾಲ ಬೀದರ್ ನಲ್ಲಿ ಶೂಟಿಂಗ್ ಮಾಡಲಾಗಿದೆ. ಕಥೆಗೆ ಪೂರಕವಾಗಿ ಈ ಸನ್ನಿವೇಶಗಳು ಚಿತ್ರದಲ್ಲಿರುತ್ತವೆ. ಬಹಳ ದಿನಗಳ ಬಳಿಕ ಸುದೀಪ್ ಆಕ್ಷನ್ ಕಟ್ ಕಡೆಗೆ ಗಮನಹರಿಸಿರುವುದು ವಿಶೇಷ. 'ಮಾಣಿಕ್ಯ' ಚಿತ್ರ ಚಿತ್ರ ಪ್ರೇಮಿಗಳ ಹೃದಯ ಗೆಲ್ಲಲಿ.

  ಸುದೀಪ್ ಮಾಣಿಕ್ಯ ಮೇಕಿಂಗ್

  ಸುದೀಪ್ 'ಮಾಣಿಕ್ಯ' ಮೇಕಿಂಗ್ ವಿಡಿಯೋ ಹೈಲೈಟ್ಸ್

  English summary
  An insight on the making of the movie Maniya directed by Kichcha Sudeep. Introducing in the first part of the making are all the chief technicians on the set of Manikya. The movie is a remake of Telugu movie Mirchi. It is a romantic action movie in which, for the first time Sudeep and Ravichandran coming together.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more