»   » ಕಿಚ್ಚನ ಅಭಿಮಾನಿಗಳಿಗೆ ಇಲ್ಲಿದೆ ಒಂದು ಕಹಿ ಸುದ್ದಿ

ಕಿಚ್ಚನ ಅಭಿಮಾನಿಗಳಿಗೆ ಇಲ್ಲಿದೆ ಒಂದು ಕಹಿ ಸುದ್ದಿ

Posted By:
Subscribe to Filmibeat Kannada

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಅಭಿಮಾನಿಗಳಿಗೆ ಇಲ್ಲೊಂದು ಕಹಿ ಸುದ್ದಿಯ ಜೊತೆಗೆ ಸಿಹಿ ಸುದ್ದಿ ಇದೆ.

ಹೌದು ಸ್ಯಾಂಡಲ್ ವುಡ್ ನ ಹ್ಯಾಂಡ್ಸಮ್ ನಟ ಕಿಚ್ಚ ಸುದೀಪ್ ಅವರ ಉದ್ದವಾದ ಸಿಲ್ಕಿ ಕೂದಲನ್ನು ಇಷ್ಟಪಡುತ್ತಿದ್ದ ಅಭಿಮಾನಿಗಳಿಗೆ ಇದು ಕಹಿ ಸುದ್ದಿಯಾದ್ರೆ, ನೀಟಾಗಿ ಕೂದಲು ಕತ್ತರಿಸಿ, ಟ್ರಿಮ್ ಮಾಡಿಕೊಂಡಿದ್ದ ಕಿಚ್ಚನ ಹಳೇ ಇಮೇಜ್ ಇಷ್ಟಪಡುವವರಿಗೆ ಇದು ಸಿಹಿ ಸುದ್ದಿ.

Sudeep Needs A Trim For Gajakesari Krishna's Hebbuli

ಕಿಚ್ಚ ಸುದೀಪ್ ಅವರು 'ಗಜಕೇಸರಿ' ನಿರ್ದೇಶಕ ಎಸ್ ಕೃಷ್ಣ ಅವರು ಆಕ್ಷನ್-ಕಟ್ ಹೇಳಿರುವ 'ಹೆಬ್ಬುಲಿ' ಚಿತ್ರಕ್ಕಾಗಿ ಬಹಳ ಕಷ್ಟಪಟ್ಟು ಮೈಂಟೆನ್ ಮಾಡಿದ್ದ ತಮ್ಮ ಸುಂದರ ಸಿಲ್ಕಿ ಕೂದಲಿಗೆ ಕತ್ತರಿ ಹಾಕುತ್ತಿದ್ದಾರೆ.['ವಾರದ ಕಿಚ್ಚಿನ ಕಥೆ'ಯಲ್ಲಿ ಕಿಚ್ಚ ಸುದೀಪ್ ನೀಡಿದ ಚಮಕ್!]

ಎಸ್ ಕೃಷ್ಣ ಅವರ 'ಹೆಬ್ಬುಲಿ' ಚಿತ್ರದಲ್ಲಿ ಕಿಚ್ಚ ಸುದೀಪ್ ಅವರು ಖಡಕ್ ಆರ್ಮಿ ಆಫೀಸರ್ ಪಾತ್ರ ಮಾಡುತ್ತಿರುವುದರಿಂದ ಈ ಚಿತ್ರಕ್ಕಾಗಿ ವಿಶೇಷವಾಗಿ ಈ ವೇಷ ಹಾಕುತ್ತಿದ್ದಾರೆ.

ಕಿಚ್ಚ ಅವರು ತಮ್ಮ ಸಿಲ್ಕಿ ಕೂದಲನ್ನು ಒಂದು ಬಾರಿ ವಿಭಿನ್ನವಾಗಿ ಕೈಯಲ್ಲೇ ಬಾಚಿಕೊಂಡು ಹಿಂದಕ್ಕೆ ತಳ್ಳುತ್ತಿದ್ದ ಆ ಸ್ಟೈಲ್ ಗೆ ಫಿದಾ ಆಗದ ಅಭಿಮಾನಿಗಳೇ ಇಲ್ಲ. ಮಾತ್ರವಲ್ಲದೇ ಈ ಸ್ಟೈಲ್ ನಲ್ಲಿ ಅವರ ಖಡಕ್ ಲುಕ್ ಅಭಿಮಾನಿಗಳನ್ನು ತಮ್ಮ ಕಡೆ ಆಕರ್ಷಿಸಿತ್ತು.[ಕುಚಿಕು ಗೆಳೆಯನ ಟೈಟಲ್ ಲಾಂಚ್ ಗೆ ದರ್ಶನ್ ಯಾಕೆ ಬರಲಿಲ್ಲ]

Sudeep Needs A Trim For Gajakesari Krishna's Hebbuli

ತೆಲುಗಿನ ರಿಮೇಕ್ ಸಿನಿಮಾ 'ರನ್ನ' ಬ್ಲಾಕ್ ಬಸ್ಟರ್ ಹಿಟ್ ಆದ ಮೇಲೆ ಸುದೀಪ್ ಅವರು ಸದ್ಯಕ್ಕೆ ಕೆ.ಎಸ್ ರವಿಕುಮಾರ್ ಅವರ ಬಿಗ್ ಬಜೆಟ್ ನ 'ಮುಂಡಿಂಜ ಇವನ ಪುಡಿ' ಸಿನಿಮಾದಲ್ಲಿ ಮತ್ತು ಕಿರುತೆರೆ ಶೋ ಬಿಗ್ ಬಾಸ್ ನಲ್ಲಿ ಬ್ಯುಸಿಯಾಗಿದ್ದಾರೆ.

ಒಟ್ನಲ್ಲಿ ಇನ್ನುಮುಂದೆ ಸುದೀಪ್ ಅವರು ತಮ್ಮ ನ್ಯೂ ಲುಕ್ ನಲ್ಲಿ ಯಾವ ರೀತಿ ಕಾಣಿಸಬಹುದು ಅನ್ನೋದನ್ನು ನೋಡಲು ಸ್ವಲ್ಪ ದಿನ ಅಭಿಮಾನಿಗಳು ಕಾಯಲೇಬೇಕು.

English summary
Here is a sad and but happy news for Sudeep's fans! The handsome actor to trim his hair short to get a new makeover for his upcoming movie Hebbuli.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada