»   » ಜೂನ್ ತಿಂಗಳಲ್ಲೇ ಕಿಚ್ಚ ಸುದೀಪ್ ಹೊಸ ಚಿತ್ರ

ಜೂನ್ ತಿಂಗಳಲ್ಲೇ ಕಿಚ್ಚ ಸುದೀಪ್ ಹೊಸ ಚಿತ್ರ

Posted By:
Subscribe to Filmibeat Kannada
ಅಭಿನಯ ಚಕ್ರವರ್ತಿ ಸುದೀಪ್ ಅವರ ಹೊಸ ಚಿತ್ರ ಜೂನ್ ತಿಂಗಳಲ್ಲೇ ಸೆಟ್ಟೇರುತ್ತಿದೆ. ಈ ಚಿತ್ರದಲ್ಲಿ ನಟಿಸುವ ಜೊತೆಗೆ ಆಕ್ಷನ್ ಕಟ್ ಸಹ ಹೇಳುತ್ತಿದ್ದಾರೆ ಸುದೀಪ್. ಆದರೆ ಇದು ಯೋಗರಾಜ್ ಭಟ್ ಜೊತೆಗಿನ ಚಿತ್ರವಂತೂ ಅಲ್ಲ ಎನ್ನಲಾಗಿದೆ.

ಇದೊಂದು ಹೊಸ ಪ್ರಾಜೆಕ್ಟ್ ಆಗಿದ್ದು ಸುದೀಪ್ ಅವರೇ ಸ್ವತಃ ಕಥೆಯನ್ನು ಆಯ್ಕೆ ಮಾಡಿದ್ದಾರಂತೆ. ಚಿತ್ರಕ್ಕೆ ಬಂಡವಾಳ ಹೂಡುತ್ತಿರುವವರು ಎಂಎನ್ ಕುಮಾರ್. ಇದೊಂದು ಹಳೆಯ ಕಮಿಟ್ ಮೆಂಟ್. ಈಗ ಅದಕ್ಕೆ ರೆಕ್ಕೆಪುಕ್ಕ ಬಂದಿದೆ.

ಕುಮಾರ್ ನಿರ್ಮಾಣದಲ್ಲಿ ಚಿತ್ರ ಮಾಡುವುದಾಗಿ ಸುದೀಪ್ ಜೊತೆ ಮಾತುಕತೆಯಾಗಿತ್ತಂತೆ. ಆದರೆ ಕಾರಣಾಂತರಗಳಿಂದ ಅದು ಸಾಧ್ಯವಾಗಿರಲಿಲ್ಲ. ಈಗ ಶುಭ ಮುಹೂರ್ತ ಕೂಡಿಬಂದಿದೆ. ಇನ್ನೇನು 'ಬಿಗ್ ಬಾಸ್' ಕಾರ್ಯಕ್ರಮ ಮುಗಿಯುತ್ತದೆ. ಅದಾದ ಬಳಿಕ ಈ ಹೊಸ ಚಿತ್ರ ಸೆಟ್ಟೇರುತ್ತಿದೆ.

ತಾಂತ್ರಿಕ ಬಳಗ ಹಾಗೂ ಇತರೆ ಕಲಾವಿದರ ಆಯ್ಕೆ ಇನ್ನಷ್ಟೇ ನಡೆಯಬೇಕಿದೆ. ಶೀರ್ಷಿಕೆಯೂ ಇನ್ನೂ ಅಂತಿಮವಾಗಿಲ್ಲ. ಸದ್ಯಕ್ಕೆ ಸುದೀಪ್ ಅತ್ತ ಕಿರುತೆರೆ ಇತ್ತ ಕನ್ನಡ, ಇನ್ನೊಂದು ಕಡೆ ತೆಲುಗು ಚಿತ್ರರಂಗದಲ್ಲಿ ಬಿಜಿಯಾಗಿದ್ದಾರೆ.

ಇನ್ನು ಸುದೀಪ್ ಅಭಿನಯದ 'ಬಚ್ಚನ್' ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಭಾರಿ ಸದ್ದು ಮಾಡುವುದರ ಜೊತೆಗೆ ಐವತ್ತು ದಿನಗಳನ್ನು ಪೂರೈಸಿದೆ. ಉದಯ್ ಕೆ ಮೆಹ್ತಾ ನಿರ್ಮಾಣದ ಚಿತ್ರ ಈ ವರ್ಷದ ಹಿಟ್ ಚಿತ್ರಗಳ ಸಾಲಿಗೆ ಸೇರಿದ್ದು 20 ಚಿತ್ರಮಂದಿರಗಳಲ್ಲಿ ಅರ್ಧ ಸೆಂಚುರಿ ಬಾರಿಸಿದೆ. ಬಚ್ಚನ್ ಚಿತ್ರದ ವಿಮರ್ಶೆ ಓದಿ. (ಏಜೆನ್ಸೀಸ್)

English summary
Kichcha Sudeep's new film all set to going on the floors this month. MN Kumar producing the movie. The title of the film and about the other cast and technical crew are yet to be finalized.
Please Wait while comments are loading...