»   » ಯುಗಾದಿ ಹಬ್ಬಕ್ಕೆ ಕಿಚ್ಚನ ಅಭಿಮಾನಿಗಳಿಗೆ ಡಬಲ್ ಧಮಾಕ

ಯುಗಾದಿ ಹಬ್ಬಕ್ಕೆ ಕಿಚ್ಚನ ಅಭಿಮಾನಿಗಳಿಗೆ ಡಬಲ್ ಧಮಾಕ

Posted By:
Subscribe to Filmibeat Kannada
ಕಿಚ್ಚನ ಅಭಿಮಾನಿಗಳಿಗೆ ಯುಗಾದಿ ಹಬ್ಬಕ್ಕೆ ಡಬಲ್ ಧಮಾಕ | Filmibeat Kannada

ಹಿಂದೂಗಳಿಗೆ ಹೊಸ ವರ್ಷ ಹಾಗೂ ವರ್ಷದ ಮೊದಲ ಹಬ್ಬ ಯುಗಾದಿ. ಪ್ರತಿಯೊಬ್ಬರು ಸಂಭ್ರಮದಿಂದ ಆಚರಣೆ ಮಾಡುವ ಯುಗಾದಿ ಹಬ್ಬ ಸಿನಿಮಾರಂಗದಲ್ಲಿಯೂ ಕಳೆ ಕಟ್ಟಲಿದೆ. ಈಗಾಗಲೇ ದೊಡ್ಡ ದೊಡ್ಡ ಸಿನಿಮಾಗಳು ಬಿಡುಗಡೆ ಆಗಿ ಹೋಗಿದೆ. ಆದ್ದರಿಂದ ಯಾವುದೇ ಚಿತ್ರಗಳು ಬಿಡಗಡೆ ಆಗದಿದ್ದರೂ ಸಿನಿಮಾಗಳ ಟೀಸರ್, ಚಿತ್ರ ಮಹೂರ್ತ ಇವೆಲ್ಲವೂ ಹಬ್ಬದ ಸಂದರ್ಭದಲ್ಲಿ ನಡೆಯುವ ಸಾಧ್ಯತೆಗಳು ಹೆಚ್ಚಾಗಿದೆ.

ಈ ಯುಗಾದಿ ಹಬ್ಬ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಹರುಷ ತರಲಿದೆ. ಸಾಕಷ್ಟು ದಿನಗಳಿಂದ ಕಾತುರರಾಗಿದ್ದ ಕಿಚ್ಚನ ಅಭಿಮಾನಿಗಳಿಗೆ ಹೊಸ ವರ್ಷದಂದು ವಿಶೇಷ ಉಡುಗೊರೆ ಸಿಗಲಿದೆ. ಒಬ್ಬಟ್ಟಿನ ಸಿಹಿಯ ಜೊತೆಯಲ್ಲಿ ತಮ್ಮ ನೆಚ್ಚಿನ ನಟ ಅಭಿನಯಿಸುತ್ತಿರುವ ಸಿನಿಮಾದ ಬಗ್ಗೆ ವಿಶೇಷ ಮಾಹಿತಿ ಸಿಗಲಿದೆ.

ಹೊಸಬರ ಪ್ರಯತ್ನಕ್ಕೆ ಬೆನ್ನು ತಟ್ಟಿದ ಮಾಣಿಕ್ಯ ಸುದೀಪ್

ಕಿಚ್ಚನ ಅಭಿಮಾನಿಗಳಿಗೆ ಒಂದಲ್ಲ ಎರಡು ಸಿಹಿಸುದ್ದಿಗಳು ಹಬ್ಬದ ಸ್ಪೆಷಲ್ ಆಗಿ ಸಿಗಲಿದೆ. ಹಾಗಾದರೆ ಏನದು ಸಿಹಿಸುದ್ದಿ? ಎರಡು ವಿಚಾರಗಳು ಒಂದೆ ದಿನ ನಡೆಯುತ್ತಿರುವ ವಿಶೇಷತೆ ಏನು? ಈ ಎಲ್ಲಾ ವಿಚಾರಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ..

ಕಿಚ್ಚನ ಅಭಿಮಾನಿಗಳಿಗೆ ಸಂತಸದ ಸುದ್ದಿ

ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಯುಗಾದಿ ಹಬ್ಬಕ್ಕೆ ಸಂತಸದ ಸುದ್ದಿ ಸಿಗಲಿದೆ. ಸಾಕಷ್ಟು ದಿನಗಳಿಂದ ಕಾದಿದ್ದ ಪೈಲ್ವಾನ್ ಸಿನಿಮಾದ ಮಹೂರ್ತ ಯುಗಾದಿ ಹಬ್ಬದಂದು ನಡೆಯಲಿದೆ.

ಚಿತ್ರೀಕರಣಕ್ಕೆ ಭರದ ಸಿದ್ದತೆ

ಯುಗಾದಿ ಹಬ್ಬದಂದು ಕಿಚ್ಚ ಸುದೀಪ್ ಅಭಿನಯದ ಹೆಬ್ಬುಲಿ ಕೃಷ್ಣ ನಿರ್ದೇಶನದ ಪೈಲ್ವಾನ್ ಚಿತ್ರದ ಮಹೂರ್ತ ನಡೆಯಲಿದೆ. ಸಿನಿಮಾಗಾಗಿ ಬಾಕ್ಸಿಂಗ್ ಟ್ರೈನಿಂಗ್ ತೆಗೆದುಕೊಂಡಿರುವ ಸುದೀಪ್ ಏರ್ಪಿಲ್ ನಲ್ಲಿ ಚಿತ್ರೀಕರಣ ಶುರು ಮಾಡಲಿದ್ದಾರೆ.

ದಿ ವಿಲನ್ ಟೀಸರ್

ಸುದೀಪ್ ಹಾಗೂ ಶಿವರಾಜ್ ಕುಮಾರ್ ಅಭಿನಯದ ದಿ ವಿಲನ್ ಸಿನಿಮಾದ ಟೀಸರ್ ಕೂಡ ಯುಗಾದಿ ಹಬ್ಬಕ್ಕೆ ಬಿಡುಗಡೆ ಮಾಡುವ ಸಾಧ್ಯತೆಗಳು ಹೆಚ್ಚಾಗಿದೆ. ಹಬ್ಬದ ವಿಶೇಷವಾಗಿ ಟೀಸರ್ ರಿಲೀಸ್ ಮಾಡಲು ಚಿತ್ರತಂಡ ತಯಾರಿ ಮಾಡಿಕೊಂಡಿದೆ ಎನ್ನುತಿವೆ ಮೂಲಗಳು.

ಅಂತಿಮ ಹಂತದ ಚಿತ್ರೀಕರಣ

ದಿ ವಿಲನ್ ಸಿನಿಮಾದ ಚಿತ್ರೀಕರಣ ಕೊನೆಯ ಹಂತಕ್ಕೆ ತಲುಪಿದ್ದು ಇತ್ತೀಚಿಗಷ್ಟೇ ಸಿನಿಮಾದ ಸ್ಪೆಷಲ್ ಸಾಂಗ್ ನಲ್ಲಿ ಸ್ಯಾಂಡಲ್ ವುಡ್ ನ ಖ್ಯಾತ ನಾಯಕಿಯರು ಹೆಜ್ಜೆ ಹಾಕಿದ್ದಾರೆ.

ಪರಭಾಷೆ ಪ್ರೇಕ್ಷಕರಿಗಾಗಿ 'ಟಗರು' ತಂಡದಿಂದ ಮಾಸ್ಟರ್ ಪ್ಲಾನ್.!

English summary
Kannada actor Sudeep starrer Pailwan movie mahuratha will be held on the ugadi festival. In addition The Villain movie teaser is likely to be released.ಕನ್ನಡ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X