For Quick Alerts
  ALLOW NOTIFICATIONS  
  For Daily Alerts

  ಸಿನಿ ಬದುಕಿನಲ್ಲಿ ಸುದೀಪ್ ಶರಣಾಗಿದ್ದು ಈ ಇಬ್ಬರಿಗೆ ಮಾತ್ರ.!

  By Bharath Kumar
  |

  ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಿನಿಮಾ ಇಂಡಸ್ಟ್ರಿಗೆ ಬಂದು 22 ವರ್ಷ ಕಳೆದಿದೆ. ಈ ಸಂತಸವನ್ನ ಕಿಚ್ಚನ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಹೊಸಬರ ಪಾಲಿಗೆ ಗಾಡ್ ಫಾದರ್ ಆಗಿರುವ ಸುದೀಪ್ ನವ ಪ್ರತಿಭೆಗಳನ್ನ ಬೆನ್ನುತಟ್ಟಿ ಪ್ರೋತ್ಸಾಹಿಸುವ ಗುಣ ಹೊಂದಿದ್ದಾರೆ.

  ಹೀಗೆ ಸುದೀಪ್ ಗೆ ಅನೇಕ ಯುವ ನಟ-ನಟಿಯರು ಅಭಿಮಾನಿಗಳಾಗಿದ್ದಾರೆ. ಆದ್ರೆ, ಸುದೀಪ್ ಯಾರಿಗೆ ಅಭಿಮಾನಿ ಎನ್ನುವುದು ಸ್ವಲ್ಪ ಕುತೂಹಲ. ಯಾಕಂದ್ರೆ, ಕೆಲವರಿಗೆ ಅದು ಯಾರು ಎಂದು ಗೊತ್ತಿದೆ. ಇನ್ನು ಸುದೀಪ್ ಸಿನಿ ಬದುಕಿನಲ್ಲಿ ಇಬ್ಬರು ನಟರಿಗೆ ಶರಣಾಗಿದ್ದಾರೆಂದು ಸ್ವತಃ ಹೇಳಿದ್ದಾರೆ. ಇದು ಕಿಚ್ಚನ ಅಭಿಮಾನಿಗಳಿಗೆ ಮತ್ತಷ್ಟು ಕುತೂಹಲ ಹೆಚ್ಚಿಸಿದೆ.

  ಕಿಚ್ಚನ ಸಾಧನೆಗೆ ಶುಭಾಶಯಗಳ ಸುರಿಮಳೆ

  ಹೌದು, ಇತ್ತೀಚೆಗಷ್ಟೇ ಪ್ರಕಾಶ್ ರೈ ಅವರು ಬರೆದಿರುವ 'ಇರುವುದೆಲ್ಲವ ಬಿಟ್ಟು' ಎಂಬ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಕಿಚ್ಚ ಸುದೀಪ್ ಅತಿಥಿಯಾಗಿ ಹೋಗಿದ್ದರು. ಈ ವೇಳೆ ಮಾತನಾಡಿದ ಸುದೀಪ್ ''ನನ್ನ ನಟನಾ ಬದುಕಿನಲ್ಲಿ ನಾನು ಶರಣಾಗಿರುವುದು ಕೇವಲ ಇಬ್ಬರಿಗೆ ಮಾತ್ರ'' ಎಂದು ಆ ಇಬ್ಬರು ಕಲಾವಿದರ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು. ಆ ಇಬ್ಬರು ಯಾರು ಎಂದು ಮುಂದೆ ಓದಿ.....

  ಮೊದಲಿಗೆ ಡಾ ವಿಷ್ಣುವರ್ಧನ್

  ಮೊದಲಿಗೆ ಡಾ ವಿಷ್ಣುವರ್ಧನ್

  ಆ ಇಬ್ಬರಲ್ಲಿ ಮೊದಲ ಹೆಸರು ಸಾಹಸ ಸಿಂಹ ಡಾ ವಿಷ್ಣುವರ್ಧನ್. ಮೊದಲಿನಿಂದಲೂ ವಿಷ್ಣು ಅವರ ಬಗ್ಗೆ ಅಪಾರ ಅಭಿಮಾನ ಹೊಂದಿರುವ ಸುದೀಪ್, ವಿಷ್ಣುದಾದ ಜೊತೆ ಅಭಿನಯದ ಮಾಡಿದ ಅನುಭವನ್ನ ನೆನಸಿಕೊಂಡರು. 'ಮಾತಾಡ್ ಮಾತಾಡ್ ಮಲ್ಲಿಗೆ' ಚಿತ್ರೀಕರಣದ ವೇಳೆ ವಿಷ್ಣುವರ್ಧನ್ ಸರ್ ಅವರಿಗೆ ನಾನು ಶರಣಾದೆ'' ಎಂದು ಸುದೀಪ್ ಹಂಚಿಕೊಂಡರು.

  ಅಭಿಮಾನಿಗಳ ಈ ಕೆಲಸದ ಹಿಂದೆ ಇದ್ದಾರೆ ಕಿಚ್ಚ ಸುದೀಪ್

  ಎರಡನೇಯವರು ಪ್ರಕಾಶ್ ರೈ

  ಎರಡನೇಯವರು ಪ್ರಕಾಶ್ ರೈ

  ಸಾಹಸ ಸಿಂಹ ವಿಷ್ಣುವರ್ದನ್ ಅವರನ್ನ ಬಿಟ್ಟರೇ ಆಮೇಲೆ ನಾನು ಶರಣಾಗಿದ್ದು ನಟ ಪ್ರಕಾಶ್ ರೈ ಅವರಿಗೆ ಎಂದು ಸುದೀಪ್ ಹೇಳಿಕೊಂಡರು.

  'ರನ್ನ' ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದ ರೈ-ಸುದೀಪ್

  'ರನ್ನ' ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದ ರೈ-ಸುದೀಪ್

  ಪ್ರಕಾಶ್ ರೈ ಜೊತೆ ನಟಿಸುವ ಅವಕಾಶ ನನಗೆ ಸಿಕ್ಕಿದ್ದು 'ರನ್ನ' ಚಿತ್ರದಲ್ಲಿ. ಅವರು ಮಾತನಾಡುವಾಗ ಎಕೋ ಹೊಡೆಯುತ್ತೆ. ಅವರು ಎದುರಿಗಿದ್ದರೆ ನಟಿಸುವುದು ಕಷ್ಟ. 'ರನ್ನ'ದಲ್ಲಿ ಕೂಡಾ ಅಷ್ಟೆ, ಅವರು ನಟಿಸುವಾಗ ನಾನು ಮಾತನಾಡಲೇ ಇಲ್ಲ. ಅವರು ಮಾತನಾಡುವ ತನಕ ಸುಮ್ಮನಿದ್ದು, ನಂತರ ಅವರ ಕೈಯ್ಯನ್ನು ಮೆಲ್ಲಗೆ ಒತ್ತಿದ್ದೆ. ಹಾಗಾಗಿ ನಾನೂ ಗೆದ್ದೆ ಎಂದು ಸುದೀಪ್ ಹೇಳಿಕೊಂಡರು.

  82 ವರ್ಷದ ಅಜ್ಜಿಯ ಪ್ರೀತಿ ಕಂಡ ಮೂಕವಿಸ್ಮಿತರಾದ ಸುದೀಪ್

  ನಾನು ಸ್ಪೂರ್ತಿಗೊಳ್ಳುತ್ತೇನೆ

  ನಾನು ಸ್ಪೂರ್ತಿಗೊಳ್ಳುತ್ತೇನೆ

  ಪ್ರಕಾಶ ರೈ ಅವರು ಹಾರ್ಡ್ ಡಿಸ್ಕ್ ಇದ್ದ ಹಾಗೆ. ಅವರೊಳಗೆ ತುಂಬಾ ವಿಷಯಗಳಿವೆ. ನಾನು ಅವರನ್ನಿ ಭೇಟಿ ಮಾಡಿದ ಪ್ರತಿ ಸಲವೂ ಸ್ಪೂರ್ತಿಗೊಳ್ಳುತ್ತೇನೆ ಎಂದು ರೈ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  ಒಂದೇ ಹಾದಿಯಲ್ಲಿ ದರ್ಶನ್ ಹಾಗೂ ಸುದೀಪ್ ಹೆಜ್ಜೆ

  English summary
  kannada actor kiccha sudeep spoke about his favorite actors. he Praises dr vishnuvardhan and prakash rai at 'Iruvudellava bittu' book release event.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X