For Quick Alerts
  ALLOW NOTIFICATIONS  
  For Daily Alerts

  ಶಿವಣ್ಣನಿಗಾಗಿ ಒಂದಾದ ಸುದೀಪ್-ಪುನೀತ್ ರಾಜ್ ಕುಮಾರ್

  |

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟನೆಯ ಭಜರಂಗಿ 2 ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಸೆಪ್ಟೆಂಬರ್ 10 ರಂದು ಭಜರಂಗಿ ಚಿತ್ರಮಂದಿರಕ್ಕೆ ಬರುವ ತಯಾರಿ ನಡೆಸಿದೆ. ವಿಜಯ್ ಮಿಲ್ಟನ್ ನಿರ್ದೇಶಿಸುತ್ತಿರುವ 123ನೇ ಸಿನಿಮಾದ ಚಿತ್ರೀಕರಣ ಸಾಗ್ತಿದೆ. ಬೈರಾಗಿ ಎಂದು ಈ ಚಿತ್ರಕ್ಕೆ ಹೆಸರಿಟ್ಟಿದ್ದು, ಧನಂಜಯ್ ಸಹ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

  ಶಿವಣ್ಣ, ಅಪ್ಪು , ಕಿಚ್ಚ ನನ್ನು ಒಟ್ಟಿಗೆ ನೋಡೋಕೆ ರೆಡಿಯಾದ್ರು ಫ್ಯಾನ್ಸ್

  ಇದೀಗ, ಶಿವಣ್ಣನ 124ನೇ ಚಿತ್ರಕ್ಕೆ ಚಾಲನೆ ಕೊಡಲಾಗುತ್ತಿದೆ. ಹ್ಯಾಟ್ರಿಕ್ ಹೀರೋ ಮುಂದಿನ ಸಿನಿಮಾದ ಮುಹೂರ್ತ ಕಾರ್ಯಕ್ರಮಕ್ಕೆ ಸಿದ್ಧತೆ ನಡೆದಿದ್ದು, ಕನ್ನಡದ ಸೂಪರ್ ಸ್ಟಾರ್ ನಟರಾದ ಕಿಚ್ಚ ಸುದೀಪ್ ಮತ್ತು ಪುನೀತ್ ರಾಜ್ ಕುಮಾರ್ ಭಾಗಿಯಾಗುವ ಸಾಧ್ಯತೆ ಇದೆ.

  ಕನ್ನಡದ ಸೂಪರ್ ಸ್ಟಾರ್ ನಟನ ಚಿತ್ರಕ್ಕೆ ಮೆಹ್ರೀನ್ ಪಿರ್ಝಾದಾ ನಾಯಕಿ?ಕನ್ನಡದ ಸೂಪರ್ ಸ್ಟಾರ್ ನಟನ ಚಿತ್ರಕ್ಕೆ ಮೆಹ್ರೀನ್ ಪಿರ್ಝಾದಾ ನಾಯಕಿ?

  ಚಿತ್ರದ ಮುಹೂರ್ತ ಸಮಾರಂಭಕ್ಕೆ ಅತಿಥಿಗಳಾಗಿ ಆಗಮಿಸಬೇಕೆಂದು ವಿಶೇಷ ಆಹ್ವಾನ ನೀಡಲಾಗಿದೆ ಎನ್ನುವ ವಿಚಾರ ಹೊರಬಿದ್ದಿದೆ. ಆದರೆ, ದಿನಾಂಕ ಇನ್ನು ಬಹಿರಂಗವಾಗಿಲ್ಲ. ಈ ಚಿತ್ರವನ್ನು ರಾಮ್ ಧುಲಿಪುಡಿ ನಿರ್ದೇಶನ ಮಾಡ್ತಿದ್ದು, ಬಾಲಶ್ರೀರಾಮ್ ಸ್ಟುಡಿಯೋ ನಿರ್ಮಾಣ ಮಾಡಲಿದ್ದಾರೆ.

  ಸದ್ಯಕ್ಕೆ 'ಪ್ರೊಡಕ್ಷನ್ ನಂ 1' ಎಂದು ಹೆಸರಿಟ್ಟಿದ್ದು, ಚಿತ್ರದ ಶೀರ್ಷಿಕೆ ಏನಿರಬಹುದು ಎಂಬ ಕುತೂಹಲ ಕಾಡಿದೆ. ಲವ್ ಸ್ಟೋರಿ ಸುತ್ತ ಕಥೆ ಮಾಡಿದ್ದು, ಶಿವಣ್ಣ ಎರಡು ಶೇಡ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಶಿವರಾಜ್ ಕುಮಾರ್ ಆರ್ಮಿ ಆಫೀಸರ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು ಥ್ರಿಲ್ ಹೆಚ್ಚಿಸಿದೆ.

  ಇನ್ನು ಶಿವಣ್ಣನ 124ನೇ ಪ್ರಾಜೆಕ್ಟ್‌ಗೆ ನಾಯಕಿಯಾಗಿ ಮೆಹ್ರೀನ್ ಪಿರ್ಝಾದಾ ಅಭಿನಯಿಸಲಿದ್ದಾರೆ. ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಮೆಹ್ರೀನ್ ಪಾದಾರ್ಪಣೆ ಮಾಡುತ್ತಿದ್ದಾರೆ ಎನ್ನುವುದು ವಿಶೇಷ. ಈಗಾಗಲೇ ಪ್ರಿ-ಪ್ರೊಡಕ್ಷನ್ ಕೆಲಸ ಮುಗಿದಿದ್ದು, ಆಗಸ್ಟ್‌ ತಿಂಗಳ ಅಂತ್ಯದಲ್ಲಿ ಚಿತ್ರೀಕರಣ ಶುರು ಮಾಡುವ ಯೋಜನೆ ಇದೆ.

  Kichcha Sudeep and Puneeth Rajkumar to attend Shiva Rajkumars 124th Movie Muhurta

  ಮೆಹ್ರೀನ್ ಪಿರ್ಝಾದಾ ಕುರಿತು

  2016ರಲ್ಲಿ ಮೆಹ್ರೀನ್ ತೆಲುಗು ಇಂಡಸ್ಟ್ರಿ ಮೂಲಕ ಚಿತ್ರರಂಗ ಪ್ರವೇಶ ಮಾಡಿದ್ದರು. ತಮಿಳು ಹಾಗೂ ತೆಲುಗಿನಲ್ಲಿ ಹೆಚ್ಚು ಹೆಚ್ಚು ಸಿನಿಮಾಗಳನ್ನು ಮಾಡ್ತಿದ್ದಾರೆ. ಮಹಾನುಭಾವಡು, ರಾಜ ದಿ ಗ್ರೇಟ್, ನೋಟಾ, ಕವಚಂ, ಎಫ್ 2, ಪಟಾಸ್, ಅಶ್ವತ್ಥಾಮ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಸದ್ಯ, ಮೆಹ್ರೀನ್ ಪಿರ್ಝಾದಾ 'ವಿಕ್ಟರಿ' ವೆಂಕಟೇಶ್ ಮತ್ತು ವರುಣ್ ತೇಜ ನಟಿಸುತ್ತಿರುವ 'ಎಫ್ 3' ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದ ಬಳಿಕ ಕರ್ನಾಟಕದ ಕಡೆ ಪ್ರಯಾಣ ಬೆಳೆಸಲಿದ್ದಾರೆ ಎಂದು ವರದಿಯಾಗಿದೆ.

  English summary
  Kannada actor Kichcha Sudeep and Puneeth Rajkumar to attend Shiva Rajkumar's 124th Movie Muhurtha.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X