»   » ವರ್ಮಾ-ಸುದೀಪ್ 'ಅಪ್ಪ' ಚಿತ್ರಕ್ಕೆ ಟೈಟಲ್ ಚೇಂಜ್!

ವರ್ಮಾ-ಸುದೀಪ್ 'ಅಪ್ಪ' ಚಿತ್ರಕ್ಕೆ ಟೈಟಲ್ ಚೇಂಜ್!

Posted By:
Subscribe to Filmibeat Kannada

ಕಿಚ್ಚ ಸುದೀಪ್ ಅವರಿಗಾಗಿ ಕಾಂಟ್ರವರ್ಶಿಯಲ್ ಡೈರೆಕ್ಟರ್ ರಾಮ್ ಗೋಪಾಲ್ ವರ್ಮಾ ಆಕ್ಷನ್ ಕಟ್ ಹೇಳುತ್ತಿರುವ ಸುದ್ದಿಯನ್ನ ಇದೇ 'ಫಿಲ್ಮಿಬೀಟ್ ಕನ್ನಡ'ದಲ್ಲಿ ನೀವು ಓದಿದ್ರಿ.

ಭೂಗತ ಲೋಕದ ದೊರೆ ಮುತ್ತಪ್ಪ ರೈ ನಿಜ ಜೀವನವನ್ನ ಆಧರಿಸಿರುವ ಈ ಚಿತ್ರಕ್ಕೆ ರಾಮ್ ಗೋಪಾಲ್ ವರ್ಮಾ 'ಅಪ್ಪ' ಅಂತ ಟೈಟಲ್ ಫಿಕ್ಸ್ ಮಾಡಿದ ವಿಚಾರವನ್ನ ನಾವೇ ಮೊದಲು ನಿಮಗೆ ಹೇಳಿದ್ದು.

sudeep-ram gopal varma

ಈಗ ಇದೇ ಚಿತ್ರದ ಟೈಟಲ್ ಬದಲಾವಣೆ ಆಗಿದೆ. ಕಿಚ್ಚ ಸುದೀಪ್ ಹುಟ್ಟುಹಬ್ಬದ ಪ್ರಯುಕ್ತ ರಿಲೀಸ್ ಆಗಿರುವ ಪೋಸ್ಟರ್ ಗಳಲ್ಲಿ 'ಅಪ್ಪ' ಬದಲು 'ರೈ' ಅನ್ನುವ ಶೀರ್ಷಿಕೆ ಅನೌನ್ಸ್ ಆಗಿದೆ. [ಮುತ್ತಪ್ಪ ರೈ ರಿಯಲ್ ಗಾಡ್ ಫಾದರ್: ರಾಮ್ ಗೋಪಾಲ್ ವರ್ಮಾ]

sudeep-ram gopal varma

'ರೈ'...He made the UNDERWORLD into UPPERWORLD ಅಂತ ಟ್ಯಾಗ್ ಲೈನ್ ಕೂಡ ಇಡಲಾಗಿದೆ. ಸುದೀಪ್ ಅವರ ಖಡಕ್ ಲುಕ್ ಜೊತೆ 'ರೈ' ಕ್ಯಾಚಿ ಟೈಟಲ್ ಸಿನಿಮಾದ ಬಗ್ಗೆ ಮತ್ತಷ್ಟು ಕುತೂಹಲ ಹೆಚ್ಚಿಸಿದೆ. [ವರ್ಮಾ ನಿರ್ದೇಶನದಲ್ಲಿ ಮುತ್ತಪ್ಪ ರೈಯಾಗಿ ಕಿಚ್ಚ ಸುದೀಪ್!]

ಈ ಚಿತ್ರಕ್ಕೆ ಸುದೀಪ್ ಆಪ್ತರಾಗಿರುವ ಎಂ.ಎನ್.ಕುಮಾರ್ ಬಂಡವಾಳ ಹಾಕುತ್ತಿದ್ದಾರೆ. ಸದ್ಯಕ್ಕೆ ಕೆ.ಎಸ್.ರವಿಕುಮಾರ್ ಆಕ್ಷನ್ ಕಟ್ ಹೇಳುತ್ತಿರುವ ತಮಿಳು ಮತ್ತು ಕನ್ನಡದಲ್ಲಿ ಏಕಕಾಲಕ್ಕೆ ರೆಡಿಯಾಗುತ್ತಿರುವ ಚಿತ್ರದಲ್ಲಿ ಸುದೀಪ್ ಅಭಿನಯಿಸುತ್ತಿದ್ದಾರೆ. ಅದು ಮುಗಿದ ಬಳಿಕ ಸುದೀಪ್ 'ರೈ' ಆಗಲಿದ್ದಾರೆ.

English summary
Kannada Actor Sudeep starrer Ram Gopal Varma directorial new movie is titled as 'Rai'. This is movie is all about life of Underworld Don 'Mutthappa Rai'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada