For Quick Alerts
  ALLOW NOTIFICATIONS  
  For Daily Alerts

  ಸುದೀಪ್-ರಮ್ಯಾಗೆ ಉತ್ಯುತ್ತಮ ನಟ,ನಟಿ ಪ್ರಶಸ್ತಿ

  |

  ಗೋಲ್ಡನ್ ಗರ್ಲಾ ನಟಿ ರಮ್ಯಾ ಮಡಿಲನ್ನು ಇನ್ನೊಂದು ಪ್ರಶಸ್ತಿ ಸೇರಿಕೊಂಡಿದೆ. ಅದು 'ಬೆಂಗಳೂರು ಟೈಮ್ಸ್ ಅತ್ಯುತ್ತಮ ನಟಿ' ಪ್ರಶಸ್ತಿ. ನಟ ಸುದೀಪ್ ಕೂಡ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಪ್ರಶಸ್ತಿಗಳನ್ನು ನೀಡಿದ್ದು ಟೈಮ್ಸ್ ಆಫ್ ಇಂಡಿಯಾ ಓದುಗರು ಹಾಗೂ ಕನ್ನಡ ಪ್ರೇಕ್ಷಕರು ಎನ್ನಬಹುದು. ಏಕೆಂದರೆ ಆಯ್ಕೆ ನಡೆದಿದ್ದು ಆನ್ ಲೈನ್ ಮೂಲಕ ಮಾತ್ರ.

  ಓದುಗರು ತಾವು ನೋಡಿದ ಚಿತ್ರಗಳಲ್ಲಿ ಯಾವುದು 'ದಿ ಬೆಸ್ಟ್', ಯಾರು ದಿ ಅತ್ಯತ್ತಮ ನಟ, ಯಾರು ಅತ್ಯುತ್ತಮನಟಿ ಎಂಬುದನ್ನು ಆನ್‌ ಲೈನಿನಲ್ಲೇ ವೋಟಿಂಗ್ ಮಾಡಿ ಆಯ್ಕೆ ಮಾಡುವ ಅವಕಾಶವನ್ನು 'ಟೈಮ್ಸ್ ಆಫ್ ಇಂಡಿಯಾ' ಪತ್ರಿಕೆಯ ಬೆಂಗಳೂರು ಆವೃತ್ತಿ 'ಬೆಂಗಳೂರು ಟೈಮ್ಸ್' ನೀಡಿತ್ತು. ಅದರಂತೆ ನಡೆದಿದೆ ಪ್ರಶಸ್ತಿಗೆ ಆಯ್ಕೆ.

  ಪ್ರಶಸ್ತಿಗಳಲ್ಲಿ ಹೆಚ್ಚು ಪಾಲನ್ನು ಪಡೆದ ಚಿತ್ರ ನಾಗಶೇಖರ್ ನಿರ್ದೇಶನದ 'ಸಂಜು ವೆಡ್ಸ್ ಗೀತಾ'. ಶ್ರೀನಗರ ಕಿಟ್ಟಿ ಹಾಗೂ ರಮ್ಯಾ ಜೋಡಿಯ ಈ ಚಿತ್ರ ಅತ್ಯುತ್ತಮ ಚಿತ್ರವಾಗಿ ಹೊರಹೊಮ್ಮಿದೆ. ಇದೇ ಚಿತ್ರಕ್ಕೆ ರಮ್ಯಾಗೆ ಅತ್ತುತ್ತಮ ನಟಿ ಪ್ರಶಸ್ತಿಯೂ ಸಂದಿದೆ. ಆದರೆ ಅತ್ಯುತ್ತಮ ನಟ ಪ್ರಶಸ್ತಿ 'ಕೆಂಪೇಗೌಡ' ಸುದೀಪ್ ಪಾಲಾಗಿದೆ.

  ಸಂಜು ವೆಡ್ಸ್ ಗೀತಾ ಚಿತ್ರಕ್ಕೆ ಹೆಚ್ಚು ಪ್ರಶಸ್ತಿ ಸಂದಿದೆಯಾದರೂ ವಿಷ್ಣುವರ್ಧನ, ಕೆಂಪೇಗೌಡ, ಲೈಫು ಇಷ್ಟೇನೆ, ಒಲವೇ ಮಂದಾರ, ಸಾರಥಿ ಮುಂತಾದ ಚಿತ್ರಗಳಿಗೂ ಸಾಕಷ್ಟು ಪ್ರಶಸ್ತಿಗಳು ಬಂದಿವೆ. ಲಕ್ಷಾಂತರ ಮಂದಿ ವೋಟಿಂಗ್ ಮಾಡಿ ತಮ್ಮ ಮೆಚ್ಚಿನ ಚಿತ್ರ, ನಟ-ನಟಿಯರನ್ನು ಆಯ್ಕೆ ಮಾಡಿ ಹೆಮ್ಮೆಪಟ್ಟಿದ್ದಾರೆ. ರಮ್ಯಾ ಹಾಗೂ ಸುದೀಪ್ ಸ್ವತಃ ಬಂದು ಪ್ರಶಸ್ತಿ ಸ್ವೀಕರಿಸಿ ಧನ್ಯರಾಗಿದ್ದಾರೆ.

  'ಬೆಂಗಳೂರು ಟೈಮ್ಸ್' ಪ್ರಶಸ್ತಿಯ ಸಂಪೂರ್ಣ ಪ್ರಶಸ್ತಿ ಪಟ್ಟಿಯನ್ನು ಈ ಕೆಳಗೆ ಕೊಡಲಾಗಿದೆ, ಓದಿಕೊಳ್ಳಿ...

  ಅತ್ಯುತ್ತಮ ನಟ: ಸುದೀಪ್ (ವಿಷ್ಣುವರ್ಧನ)
  ಅತ್ಯುತ್ತಮ ನಟಿ: ರಮ್ಯಾ (ಸಂಜು ವೆಡ್ಸ್ ಗೀತಾ)
  ಅತ್ಯುತ್ತಮ ಚಿತ್ರ: ಸಂಜು ವೆಡ್ಸ್ ಗೀತಾ
  ಉತ್ತಮ ಯುವತುಡಿತದ ಚಿತ್ರ: ಲೈಫು ಇಷ್ಟೇನೆ
  ಅತ್ಯುತ್ತಮ ನಿರ್ದೇಶಕ: ಪವನ್ ಕುಮಾರ್ (ಲೈಫು ಇಷ್ಟೇನೆ)
  ಉತ್ತಮ ಚಿತ್ರಕಥೆ: ದಿನಕರ ತೂಗುದೀಪ (ಸಾರಥಿ)
  ಅತ್ಯುತ್ತಮ ಸಂಗೀತ ನಿರ್ದೇಶಕ: ಜೆಸ್ಸಿ ಗಿಫ್ಟ್ (ಸಂಜು ವೆಡ್ಸ್ ಗೀತಾ)
  ಅತ್ಯುತ್ತಮ ಗಾಯಕ: ಸೋನು ನಿಗಮ್ (ಸಂಜು ವೆಡ್ಸ್ ಗೀತಾ ಶೀರ್ಷಿಕೆ ಗೀತೆ)
  ಅತ್ಯುತ್ತಮ ಗಾಯಕಿ: ಶ್ರೇಯಾ ಘೋಷಾಲ್ (ಸಂಜು ವೆಡ್ಸ್ ಗೀತಾ)
  ಅತ್ಯುತ್ತಮ ಸಾಹಿತ್ಯ: ಕವಿರಾಜ್ (ಸಂಜು ವೆಡ್ಸ್ ಗೀತಾ ಶೀರ್ಷಿಕೆ ಗೀತೆ)
  ಭರವಸೆಯ ನವನಟ: ಶ್ರೀಕಾಂತ್ (ಒಲವೇ ಮಂದಾರ)
  ಭರವಸೆಯ ನವನಟಿ: ದೀಪಾ ಸನ್ನಿಧಿ (ಸಾರಥಿ ಮತ್ತು ಪರಮಾತ್ಮ)
  ಉತ್ತಮ ಖಳ ನಟ: ರವಿಶಂಕರ್ (ಕೆಂಪೇಗೌಡ)
  ಉತ್ತಮ ಖಳ ನಟಿ: ಸಂಜನಾ (ಮತ್ತೆ ಬನ್ನಿ ಪ್ರೀತ್ಸೋಣ)
  ಉತ್ತಮ ಹಾಸ್ಯನಟ: ರಂಗಾಯಣ ರಘು (ಹುಡುಗರು)

  English summary
  Actor Sudeep and Actress Ramya bags 'The Best Actor and Actress Award' of Bangalore Times. Ramya for 'Sanju Weds Geetha' and Sudeep for 'Kempegowda' movies got this award. Sanju Weds Geetha also got The best Movie Award. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X