For Quick Alerts
  ALLOW NOTIFICATIONS  
  For Daily Alerts

  'ರನ್ನ' ರಿಲೀಸ್ ಡೇಟ್ ಕನ್ಫರ್ಮ್ ಮಾಡಿದ್ರು ಸುದೀಪ್

  By Rajendra
  |

  ಕಿಚ್ಚ ಸುದೀಪ್ ಅಭಿನಯ ಈ ವರ್ಷದ ಬಹುನಿರೀಕ್ಷಿತ ಚಿತ್ರ 'ರನ್ನ'. ಇದು ತೆಲುಗಿನ 'ಅತ್ತಾರಿಂಟಿಕಿ ದಾರೇದಿ' ಚಿತ್ರದ ರೀಮೇಕ್ ಆದರೂ ಸುದೀಪ್ ಈ ಚಿತ್ರವನ್ನು ಕನ್ನಡಕ್ಕೆ ಯಾವ ರೀತಿ ತಂದಿದ್ದಾರೆ ಎಂಬ ಕುತೂಹಲವಂತೂ ಇದ್ದೇ ಇದೆ.

  ಈ ಚಿತ್ರ ಯಾವಾಗ ಬಿಡುಗಡೆ ಯಾಗಲಿದೆ ಎಂಬ ಕುತೂಹಲಕ್ಕೆ ಸುದೀಪ್ ತೆರೆ ಎಳೆದಿದ್ದಾರೆ. ಏಪ್ರಿಲ್ 2ಕ್ಕೆ ತೆರೆಗೆ ತರುತ್ತಿರುವುದಾಗಿ ಟ್ವೀಟ್ ಮಾಡಿ ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದಾರೆ. ಈ ಹಿಂದೆ ಮಾರ್ಚ್ 27ಕ್ಕೆ ಚಿತ್ರವನ್ನು ತೆರೆಗೆ ತರಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. [ಸುದೀಪ್ 'ರನ್ನ' ಚಿತ್ರಕ್ಕೆ ಲಕ್ಕಿ ಸ್ಟಾರ್ ರಮ್ಯಾ ಬರ್ತಾರಾ?]

  ರೀಮೇಕ್ ಚಿತ್ರಗಳಲ್ಲಿ 'ವಿಕ್ಟರಿ' ಭಾರಿಸುತ್ತಿರುವ ನಂದಕಿಶೋರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ರಚಿತಾ ರಾಮ್, ಹರಿಪ್ರಿಯಾ ಹಾಗೂ "ಗೊಂಬೆ ಗೊಂಬೆ ಗೊಂಬೆ ನಿನ್ನ ಮುದ್ದಾಡಬೇಕು ನರಗೊಂಬೆ..." ಎಂದು ಕ್ರೇಜಿಸ್ಟಾರ್ ಜೊತೆ ಕುಣಿದಿದ್ದ ಮಧು ಅತ್ತೆ ಪಾತ್ರದಲ್ಲಿ ಅಭಿನಯಿಸಿದ್ದಾರೆ.

  ಸರಿಸುಮಾರು ರು.20 ಕೋಟಿ ಬಜೆಟ್ ನಲ್ಲಿ ಚಿತ್ರವನ್ನು ನಿರ್ಮಿಸಿದ್ದಾರೆ ಎಂ ಚಂದ್ರಶೇಖರ್. ಚಿತ್ರದ ಮುಖ್ಯಪಾತ್ರಗಳಲ್ಲಿ ದೇವರಾಜ್ ಹಾಗೂ ಪ್ರಕಾಶ್ ರೈ ಸಹ ಇದ್ದು ವಿ ಹರಿಕೃಷ್ಣ ಅವರ ಸಂಗೀತ ಚಿತ್ರಕ್ಕಿದೆ. ಸುಧಾಕರ್ ಎಸ್ ರಾಜು ಅವರ ಛಾಯಾಗ್ರಹಣ ಕೆ.ಎಂ. ಪ್ರಕಾಶ್ ಅವರ ಸಂಕಲನ ಚಿತ್ರಕ್ಕಿದೆ.

  ಈ ಹಿಂದೆ 'ರನ್ನ' ಚಿತ್ರಕ್ಕೆ ನಾನಾ ಹೆಸರುಗಳು ಕೇಳಿಬಂದಿದ್ದವು. ಅತ್ತೆ ಮನೆ ದಾರಿ ರಾಯಭಾರಿ, ಭಗೀರಥ ಹಾಗೂ ಭಾರ್ಗವ ಎಂಬ ಶೀರ್ಷಿಕೆಗಳು ಕೇಳಿಬಂದಿದ್ದವು. ಸದ್ಯಕ್ಕೆ 'ರನ್ನ' ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸ ಭರದಿಂದ ಸಾಗುತ್ತಿದೆ. ಏಪ್ರಿಲ್ 2ಕ್ಕೆ 'ರನ್ನ' ಪ್ರೇಕ್ಷಕರ ಮುಂದೆ ಬರುತ್ತಿದ್ದಾನೆ. (ಫಿಲ್ಮಿಬೀಟ್ ಕನ್ನಡ)

  English summary
  Kichcha Sudeep's Ranna movie all set to release on 2nd April. Kannada action film directed by Nanda Kishore. The principal cast includes Kiccha Sudeep, Rachita Ram, Haripriya and Madhoo.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X