»   » 'ದಿ ವಿಲನ್' ಬಗ್ಗೆ ಎದ್ದಿರುವ ಪ್ರಶ್ನೆಯಿಂದ ಬೇಸರಗೊಂಡ ಸುದೀಪ್.!

'ದಿ ವಿಲನ್' ಬಗ್ಗೆ ಎದ್ದಿರುವ ಪ್ರಶ್ನೆಯಿಂದ ಬೇಸರಗೊಂಡ ಸುದೀಪ್.!

Posted By:
Subscribe to Filmibeat Kannada
'ದಿ ವಿಲನ್' ಬಗ್ಗೆ ಎದ್ದಿರುವ ಪ್ರಶ್ನೆಯಿಂದ ಬೇಸರಗೊಂಡ ಸುದೀಪ್ | Filmibeat Kannada

ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಮತ್ತು ಕಿಚ್ಚ ಸುದೀಪ್ ಇದೇ ಮೊದಲ ಭಾರಿಗೆ ಒಟ್ಟಿಗೆ ಅಭಿನಯಿಸುತ್ತಿರುವ ಸಿನಿಮಾ 'ದಿ ವಿಲನ್'. ಈ ಸಿನಿಮಾ ಸೆಟ್ಟೇರಿದಾಗನಿಂದಲೂ ಕನ್ನಡ ಅಭಿಮಾನಿಗಳಲ್ಲಿ ದೊಡ್ಡ ಮಟ್ಟದ ಕುತೂಹಲ ಹುಟ್ಟುಹಾಕಿದೆ.

ಎಲ್ಲ ಅಂದುಕೊಂಡಂತೆ ಆಗಿದ್ದರೇ, ಇಷ್ಟೋತ್ತಿಗಾಲೇ 'ದಿ ವಿಲನ್' ಸಿನಿಮಾ ತೆರೆಮೇಲೆ ಬರಬೇಕಿತ್ತು. ಆದ್ರೆ, ದಿನಗಳು ಕಳೆಯುತ್ತಿದೆ ಹೊರತು ಸಿನಿಮಾ ಇನ್ನು ಬಿಡುಗಡೆಯಾಗುವ ಹಂತಕ್ಕೆ ಬಂದಿಲ್ಲ. ಹೀಗಾಗಿ, ವಿಲನ್ ಚಿತ್ರದ ಬಗ್ಗೆ ಒಬ್ಬೊಬ್ಬರು ಒಂದೊಂದು ರೀತಿ ಮಾತನಾಡಿಕೊಳ್ಳುವಂತಾಗಿದೆ.

'ದಿ ವಿಲನ್' ಚಿತ್ರದ ಒಂದು ಹಾಡಿನಲ್ಲಿ ಇರ್ತಾರೆ 6 ನಾಯಕಿಯರು

ಈ ನಡುವೆ ಗಾಂಧಿನಗರದಲ್ಲಿ 'ದಿ ವಿಲನ್' ಸಿನಿಮಾ ಲೇಟ್ ಆಗ್ತಿದೆ. ಇದಕ್ಕೆ ಕಾರಣ ಅವರು, ಇವರು ಎಂದು ಹೇಳ್ಕೊಂಡು ತಿರುಗಾಡ್ತಿದ್ದಾರೆ. ಈ ಬಗ್ಗೆ ಕಿಚ್ಚ ಸುದೀಪ್ ಬೇಸರ ವ್ಯಕ್ತಪಡಿಸಿದ್ದು, ಟ್ವೀಟರ್ ನಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಮುಂದೆ ಓದಿ....

ವಿಲನ್ ತಡವಾಗಲು ಪ್ರೇಮ್ ಕಾರಣ.!

ದಿ ವಿಲನ್ ಚಿತ್ರವನ್ನ ನಿರ್ದೇಶಕ ಪ್ರೇಮ್ ಕೈಗೆತ್ತಿಕೊಂಡಾಗನಿಂದಲೂ ಒಂದಲ್ಲ ಒಂದು ವಿಶೇಷತೆಗಳನ್ನ ಸೇರಿಸುತ್ತಿದ್ದಾರೆ. ಬಹುದೊಡ್ಡ ತಾರಬಳಗ, ವಿಶೇಷವಾದ ಗೆಟಪ್, ಕಾಸ್ಟ್ಯೂಮ್, ಲೊಕೇಶನ್ ಹೀಗೆ ಪ್ರತಿಯೊಂದರಲ್ಲೂ ತುಂಬ ಪ್ಲಾನ್ ಮಾಡಿ ಚಿತ್ರೀಕರಣ ಮಾಡುತ್ತಿದ್ದಾರೆ. ಹೀಗಿರಬೇಕಾದ್ರೆ, ವಿಲನ್ ಸಿನಿಮಾ ಲೇಟ್ ಆಗಲು ಪ್ರೇಮ್ ಕಾರಣ ಎಂಬ ಮಾತು ಈಗ ಚರ್ಚೆಯಾಗುತ್ತಿದೆ.

ಕೋಟಿ ವೆಚ್ಚದಲ್ಲಿ ಚಿತ್ರೀಕರಣ ಆಗುತ್ತಿದೆ ಕಿಚ್ಚನ ಹಾಡು

ಹೀಗಂತ ಶಿವಣ್ಣ ಹೇಳಿದ್ರಂತೆ.!

'ವಿಲನ್' ಸಿನಿಮಾ ತಡವಾಗ್ತಿರೋದಕ್ಕೆ ನಿರ್ದೇಶಕ ಪ್ರೇಮ್ ಕಾರಣ ಸ್ವತಃ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹೇಳಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿತ್ತು. ಹೌದು, ಶಿವಣ್ಣ ಹೇಳಿದ್ದು ನಿಜಾ.! ಆದ್ರೆ, ಇದನ್ನ ಗಂಭೀರವಾಗಿ ಹೇಳಲಿಲ್ಲ. ಫ್ರೆಂಡ್ಲಿ ಆಗಿ ಮಾತನಾಡುವಾಗ, ಹಾಗೆ ಸುಮ್ಮನೇ ''ವಿಲನ್ ಬಗ್ಗೆ ಪ್ರೇಮ್ ನ ಕೇಳಬೇಕು'' ಎಂದರು. ಆದ್ರೀಗ, ಇದು ಗಂಭೀರವಾಗಿ ಹೇಳಿದ್ದಾರೆ ಎನ್ನುವಷ್ಟು ಬಿಂಬಿತವಾಗಿದೆ.

ಶಿವಣ್ಣ ಮತ್ತು ಸುದೀಪ್ ಇಬ್ಬರ 'ದಿ ವಿಲನ್' ಅಡ್ಡಕ್ಕೆ ಕನ್ನಡದ ಮತ್ತೊಬ್ಬ ನಟನ ಎಂಟ್ರಿ!

ಸುದೀಪ್ ಬೇಸರ

ಇನ್ನು ವಿಲನ್ ಸಿನಿಮಾ ತಡವಾಗುತ್ತಿರುವುದಕ್ಕೆ ನಿರ್ದೇಶಕ ಪ್ರೇಮ್ ಕಾರಣ ಎಂಬ ಸುದ್ದಿಯನ್ನ ನೋಡಿದ ಕಿಚ್ಚ ಸುದೀಪ್ ಬೇಸರ ವ್ಯಕ್ತಪಡಿಸಿದ್ದಾರೆ. ''ಪ್ರೇಮ್ ಯಾವುದೇ ಪ್ಲ್ಯಾನ್ ಮಾಡದೇ ಸಿನಿಮಾ ಮಾಡುವವರಲ್ಲ. ಅವರೊಬ್ಬ ಫ್ಯಾಷನ್ ಫಿಲ್ಮ್ ಮೇಕರ್. ತಡವಾಗುವುದಕ್ಕೆ ಸಂದರ್ಭ ಅಥವಾ ಕೆಲ ವ್ಯಕ್ತಿಗಳು ಕಾರಣವಾಗ್ತಾರೆ. ಆದ್ರೆ, ಪ್ರೇಮ್ ಒಬ್ಬರೇ ಕಾರಣ ಮತ್ತು ಯಾವುದೇ ಫ್ಲ್ಯಾನಿಂಗ್ ಇಲ್ಲದೇ ಸಿನಿಮಾ ಮಾಡ್ತಾರೆ ಎನ್ನುವುದು ಸೂಕ್ತವಲ್ಲ'' ಎಂದು ಟ್ವೀಟ್ ಮಾಡಿದ್ದಾರೆ.

ಇನ್ನು ಚಿತ್ರೀಕರಣ ಬಾಕಿಯಿದೆ

ಮೂಲಗಳ ಪ್ರಕಾರ 'ದಿ ವಿಲನ್' ಚಿತ್ರದ ಶೂಟಿಂಗ್ ಬಹುತೇಕ ಮುಗಿದಿದೆ. ಸದ್ಯ, ಸುದೀಪ್ ಅಭಿನಯದ ಹಾಡೊಂದನ್ನ ಚಿತ್ರೀಕರಿಸುಯತ್ತಿರುವ ವಿಲನ್ ಚಿತ್ರತಂಡ ಸದ್ಯದಲ್ಲೇ ಟೀಸರ್ ಬಿಡುಗಡೆ ಮಾಡುವ ಸಿದ್ದತೆಯಲ್ಲಿದ್ದಾರೆ. ಬಟ್ ಒಂದಂತೂ ನಿಜ, ಸಿನಿಮಾ ತಡವಾಗ್ತಿದೆ. ಆದ್ರೆ, ಅದ್ಧೂರಿಯಾಗಿ ಬರಲಿದೆ ಎನ್ನುವುದು ಮಾತ್ರ ಖುಷಿಯ ವಿಚಾರ.

English summary
Kannada actor kiccha sudeep has taken his twitter account to react about why the villain movie getting delay to release.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada