Just In
Don't Miss!
- News
ಯಲ್ಲಾಪುರ ಭೂಕುಸಿತ: ಯುವತಿಯ ಮದುವೆ ಕನಸು "ಮಣ್ಣು'ಪಾಲು
- Education
UAS Dharwad Recruitment 2021: ಸೀನಿಯರ್ ರಿಸರ್ಚ್ ಫೆಲೋ ಹುದ್ದೆಗೆ ಮಾ.10ಕ್ಕೆ ನೇರ ಸಂದರ್ಶನ
- Automobiles
ಹೊಸ ರೂಪದೊಂದಿಗೆ ರಸ್ತೆಗಿಳಿಯಲಿವೆ ತೆರೆಮರೆಗೆ ಸರಿದ ಜಟಕಾ ಬಂಡಿ
- Sports
ಐಎಸ್ಎಲ್: ಫೈನಲ್ಗಾಗಿ ನಾರ್ಥ್ ಈಸ್ಟ್, ಬಾಗನ್ ನಡುವೆ ಫೈನಲ್ ಫೈಟ್
- Lifestyle
ಮಾ.11ಕ್ಕೆ ಕುಂಭ ರಾಶಿಗೆ ಬುಧನ ಪ್ರವೇಶ: ನಿಮ್ಮ ಬದುಕಿನಲ್ಲಿ ಆಗಲಿದೆ ಈ ಬದಲಾವಣೆ
- Finance
ಅಡಿಕೆ, ಕಾಫೀ, ಮೆಣಸು ಹಾಗೂ ರಬ್ಬರ್ನ ಮಾ. 08ರ ಮಾರುಕಟ್ಟೆ ದರ ಇಲ್ಲಿದೆ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ಹಾಸ್ಟೆಲ್ ಹುಡುಗರ' ಪ್ರಮೋಷನ್‌ಗೆ ಕಿಚ್ಚ ಸುದೀಪ್ ಫಿದಾ
ಪ್ರತಿಯೊಂದು ಸಿನಿಮಾಗೂ ಪ್ರಚಾರ ಬಹಳ ಮುಖ್ಯ. ಸಿನಿಮಾ ಮಾಡಿದ್ಮೇಲೆ ಅದನ್ನು ಜನರಿಗೆ ತಲುಪಿಸಿಲ್ಲ ಅಂದ್ರೆ ಆ ಸಿನಿಮಾ ಸತ್ತಂತೆ. ಇಲ್ಲೊಂದು ಚಿತ್ರ ಪ್ರಮೋಷನ್‌ನಲ್ಲೇ ಭಾರಿ ಸದ್ದು ಮಾಡ್ತಿದೆ.
'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಚಿತ್ರತಂಡದ ಪ್ರಚಾರದ ವಿಧಾನಕ್ಕೆ ಸ್ಯಾಂಡಲ್‌ವುಡ್ ಸ್ಟಾರ್ಸ್ ಫಿದಾ ಆಗಿದ್ದಾರೆ. ಈ ಹಿಂದೆ ಪುನೀತ್ ರಾಜ್ ಕುಮಾರ್ ಅವರಿಂದ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಮಾಡಲಾಗಿತ್ತು. ಇದೀಗ, ಕಿಚ್ಚ ಸುದೀಪ್ ಚಿತ್ರದ ಟೀಸರ್ ರಿಲೀಸ್ ಮಾಡಿದ್ದಾರೆ.
ಮತ್ತೊಮ್ಮೆ ಬುರ್ಜ್ ಖಲೀಫಾಗೆ ಎಂಟ್ರಿ ಕೊಡಲಿರುವ ಕಿಚ್ಚ ಸುದೀಪ್?
ಪ್ರಪಂಚದ ಅತ್ಯಂತ ಎತ್ತರದ ಕಟ್ಟಡ ಬುರ್ಜ್ ಖಲೀಫಾ ಮೇಲೆ ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾದ ಟೈಟಲ್ ಲೋಗೋ ಅನಾವರಣಗೊಂಡಿತ್ತು. ಆ ನಂತರ ಬುರ್ಜ್ ಖಲೀಫಾ ಮೇಲೆ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಟೀಸರ್ ರಿಲೀಸ್ ಮಾಡುತ್ತೇವೆ, ಅದನ್ನು ಸುದೀಪ್ ಅವರೇ ರಿಲೀಸ್ ಮಾಡಲಿದ್ದಾರೆ ಎಂದು ಪ್ರಕಟಿಸಿದ್ದರು.
ಹೇಳಿದಂತೆ ಬುರ್ಜ್ ಖಲೀಫಾಗಿಂತ ಮೇಲೆ ಅಂದ್ರೆ ಭೂಮಿ ಬಿಟ್ಟು ಬೇರೆಯದ್ದೇ ಗ್ರಹಕ್ಕೆ ಹೋಗಿರುವಂತೆ ಕ್ರಿಯೇಟ್ ಮಾಡಿದ್ದಾರೆ. ಈ ಟೀಸರ್ ಕಂಡು ಕಿಚ್ಚ ಸುದೀಪ್ ಬಹಳ ಖುಷಿ ವ್ಯಕ್ತಪಡಿಸಿದರು. ಪ್ರಚಾರದಲ್ಲಿ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಚಿತ್ರತಂಡದ ಐಡಿಯಾಗಳ ಸಂತಸಗೊಂಡಿದ್ದಾರೆ.
ಅಂದ್ಹಾಗೆ, 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾಗೆ ನಿತಿನ್ ಕೃಷ್ಣಮೂರ್ತಿ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಗುಲ್‌ಮೊಹರ್ ಫಿಲ್ಮ್ಸ್ ಮತ್ತು ವರುಣ್ ಸ್ಟುಡಿಯೋಸ್ ಬ್ಯಾನರ್‌ನಲ್ಲಿ ತಯಾರಾಗಿದೆ.
ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದೆ. ರಿಲೀಸ್ ಬಗ್ಗೆ ಖಚಿತವಾದ ದಿನಾಂಕ ಘೋಷಿಸಿಲ್ಲವಾದರೂ, ಮೇ ತಿಂಗಳಲ್ಲಿ ಬರುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.