For Quick Alerts
  ALLOW NOTIFICATIONS  
  For Daily Alerts

  'ಅರಿಷಡ್ವರ್ಗ' ಟೀಸರ್ ಬಿಡುಗಡೆಗೊಳಿಸಿದ ನಟ ಸುದೀಪ್

  |

  ಕಾಮ, ಕೋಪ, ಪ್ರೀತಿ, ದುರಾಸೆ, ಶಕ್ತಿ, ಅಸೂಯೆ, ತಪ್ಪು ಗ್ರಹಿಕೆ ಮತ್ತು ವೈಯಕ್ತಿಕ ನ್ಯೂನತೆಗಳ ಪ್ರತಿರೂಪವೇ ಅರಿಷಡ್ವರ್ಗ ಸಿನಿಮಾ. ಅರವಿಂದ್ ಕಾಮತ್ ನಿರ್ದೇಶನ ಮಾಡಿರುವ ಅರಿಷಡ್ವರ್ಗ ಚಿತ್ರದ ಟೀಸರ್ ಬಿಡುಗಡೆಯಾಗಿದೆ.

  ಕಿಚ್ಚ ಸುದೀಪ್ ಅವರು ಅರಿಷಡ್ವರ್ಗ ಟೀಸರ್ ಲಾಂಚ್ ಮಾಡಿದ್ದು, ಚಿತ್ರತಂಡಕ್ಕೆ ಶುಭಕೋರಿದ್ದಾರೆ. ''ಅರಿಷಡ್ವರ್ಗ ಟೀಸರ್ ಬಿಡುಗಡೆ ಮಾಡಿದ್ದು ನನಗೆ ಸಂತಸ ತಂದಿದೆ. ನಿಮ್ಮ ಚಿತ್ರಕ್ಕೆ ಒಳ್ಳೆಯದಾಗಲಿ'' ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.

  'ಫ್ಯಾಂಟಮ್' ಸಿನಿಮಾ; ಸವಾಲಿನ ದೃಶ್ಯ ಚಿತ್ರೀಕರಣಕ್ಕೆ ಸಜ್ಜಾದ ಸುದೀಪ್

  2019ರ ಲಂಡನ್ ವರ್ಲ್ಡ್ ಪ್ರೀಮಿಯರ್ ಮತ್ತು ಸಿಂಗಾಪಪುರದಲ್ಲಿ ನಡೆದ ಸೌತ್ ಏಷ್ಯನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡಿರುವ ಅರಿಷಡ್ವರ್ಗ ಅಧಿಕೃತವಾಗಿ ಬಿಡುಗಡೆಯಾಗಲು ಸಜ್ಜಾಗಿದೆ.

  ಅಂದ್ಹಾಗೆ, ಅರಿಷಡ್ವರ್ಗ ಸಿನಿಮಾ ಮಿಸ್ಟರಿ ಥ್ರಿಲ್ಲರ್ ಆಗಿದ್ದು, ಒಂದು ಕೊಲೆಯ ಸುತ್ತ ನಡೆಯುವ ಕಥೆಯಾಗಿದೆ. ಕೊಲೆ ಮಾಡಿದ್ದು ಯಾರು, ಯಾವ ಕಾರಣಕ್ಕಾಗಿ ಕೊಲೆ ಆಯ್ತು ಎಂದು ತನಿಖೆ ಮಾಡುವ ಪೊಲೀಸರಿಗೆ ಹಲವು ಆಯಾಮಗಳು ಎದುರಾಗುತ್ತದೆ.

  ನಟಿ ಸಂಪಯುಕ್ತಾ ಹೊರನಾಡು, ನಂದ ಗೋಪಾಲ್, ಅವಿನಾಶ್, ಮಹೇಶ್ ಬಂಗ್, ಅಂಜು ಅಲ್ವಾ ನಾಯಕ್, ಅರವಿಂದ್ ಕುಪ್ಲಿಕರ್ ಪಾಲಕೃಷ್ಣ ದೇಶಪಾಂಡೆ, ಶ್ರೀಪತಿ ಮಂಜನ ಬೈಲು ಸೇರಿದಂತೆ ಹಲವರು ನಟಿಸಿದ್ದಾರೆ.

  ಚಿಂಟುಗೋಸ್ಕರ ನಾನು ತುಂಬಾ ಸ್ಟ್ರಾಂಗ್ ಆಗಿ ಇದ್ದೀನಿ | Meghana Raj | Filmibeat Kannada

  ನಿರ್ದೇಶನದ ಜೊತೆಗೆ ಅರವಿಂದ್ ಕಾಮತ್ ಅವರೇ ನಿರ್ಮಾನ ಸಹ ಮಾಡಿದ್ದು, ಬಾಲಾಜಿ ಮನೋಹರ್ ಛಾಯಾಗ್ರಹಣ ಹಾಗೂ ಉದಿತ್ ಹರಿತಾನ್ ಸಂಗೀ ನೀಡಿದ್ದಾರೆ.

  English summary
  Kannada actor Kiccha Sudeep Released Kannada movie Arishadvarga teaser.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X