For Quick Alerts
  ALLOW NOTIFICATIONS  
  For Daily Alerts

  ಸಹೋದರನಂತಿದ್ದ ಚಿರು ಸರ್ಜಾರನ್ನು ಸ್ಮರಿಸಿದ ಕಿಚ್ಚ ಸುದೀಪ್

  |

  ದಿವಂಗತ ನಟ ಚಿರಂಜೀವಿ ಸರ್ಜಾ ಅವರಿಗೆ ಇಂದು ಹುಟ್ಟುಹಬ್ಬ. ಚಿರು ಇದ್ದಿದ್ರೆ ಸರ್ಜಾ ಕುಟುಂಬದಲ್ಲಿ ಹಾಗೂ ಅಭಿಮಾನಿ ವಲಯದಲ್ಲಿ ಬಹಳ ದೊಡ್ಡ ಮಟ್ಟದ ಸಂಭ್ರಮ ನಡೆಯುತ್ತಿತ್ತು. ವಿಧಿಯ ಆಟ ಚಿರು ಈಗಿಲ್ಲ. ಆದ್ರೆ, ಅವರ ಜೊತೆಗಿನ ನೆನಪು ಹಾಗೂ ಅವರ ಬಿಟ್ಟು ಹೋದ ನೆನಪುಗಳು ಎಲ್ಲರನ್ನು ಕಾಡಿದೆ. ಅದರಲ್ಲೂ ತುಂಬಾ ಆತ್ಮೀಯವಾಗಿದ್ದ ವ್ಯಕ್ತಿಗಳು ಚಿರು ಸರ್ಜಾ ಅವರನ್ನು ಈ ಸಂದರ್ಭದಲ್ಲಿ ಹೆಚ್ಚು ಮಿಸ್ ಮಾಡಿಕೊಳ್ಳುತ್ತಿದ್ದಾರೆ.

  ಸಹೋದರನಂತಿದ್ದ ಚಿರು ಸರ್ಜಾ ಅವರನ್ನು ಕಿಚ್ಚ ಸುದೀಪ್ ಸ್ಮರಿಸಿಕೊಂಡಿದ್ದಾರೆ. ಚಿರಂಜೀವಿ ಸರ್ಜಾ ಅವರಿಗೆ ಬೆನ್ನೆಲುಬಾಗಿ ನಿಂತಿದ್ದವರಲ್ಲಿ ನಟ ಸುದೀಪ್ ಸಹ ಒಬ್ಬರು. ತನ್ನ ಸಿನಿಮಾದಲ್ಲಿ ಅವಕಾಶ ಕೊಟ್ಟರು. ಚಿರುಗಾಗಿ ಸಿನಿಮಾ ಮಾಡಿದ್ರು. ಮುಂದೆ ಓದಿ...

  ಚಿರಂಜೀವಿ ಸರ್ಜಾ ಇಲ್ಲದ ಸಮಯದಲ್ಲಿ ಕಾಡುವ 'ದಿ ಬೆಸ್ಟ್' ಹಾಡುಗಳು

  ಲವ್ ಯೂ ಸಹೋದರ

  ಲವ್ ಯೂ ಸಹೋದರ

  ಚಿರಂಜೀವಿ ಸರ್ಜಾ ಹುಟ್ಟುಹಬ್ಬದ ಹಿನ್ನೆಲೆ ಟ್ವಿಟ್ಟರ್ ಮೂಲಕ ಶುಭಕೋರಿರುವ ಸುದೀಪ್ ''ಅವರನ್ನು ಪ್ರೀತಿಸುತ್ತಿದ್ದ ಮತ್ತು ಅವರ ಬಗ್ಗೆ ತಿಳಿದಿದ್ದ ಎಲ್ಲರೂ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಸದಾ ನಗುತ್ತಿದ್ದ ವ್ಯಕ್ತಿ ಹಾಗೂ ವಿಷಯಗಳನ್ನು ಬಹಳ ಚೆನ್ನಾಗಿ ಸ್ವೀಕರಿಸುತ್ತಿದ್ದ. ಸ್ವರ್ಗದಲ್ಲಿ ಸ್ಥಾನ ಪಡೆದುಕೊಂಡಿದ್ದು, ಶಾಂತಿಯಿಂದ ನೆಲೆಸಿದ್ದಾನೆ ಎಂದು ನಂಬಿದ್ದೇನೆ. ಲವ್ ಯೂ ಸಹೋದರ'' ಎಂದು ಸುದೀಪ್ ಸ್ಮರಿಸಿಕೊಂಡಿದ್ದಾರೆ.

  ಚಿರುಗಾಗಿ ವರದ ನಾಯಕ ಮಾಡಿದ್ದರು

  ಚಿರುಗಾಗಿ ವರದ ನಾಯಕ ಮಾಡಿದ್ದರು

  ಸುದೀಪ್ ನಟಿಸಿದ್ದ 'ಕೆಂಪೇಗೌಡ' ಚಿತ್ರದಲ್ಲಿ ಸಣ್ಣದೊಂದು ಪಾತ್ರ ಮಾಡಿದ್ದರು ಚಿರು ಸರ್ಜಾ. ನಂತರ ಚಿರು ಸರ್ಜಾ ನಾಯಕನಾಗಿದ್ದ 'ವರದನಾಯಕ' ಚಿತ್ರದಲ್ಲಿ ಸುದೀಪ್ ಪ್ರಮುಖ ಪಾತ್ರ ಮಾಡಿದ್ದರು.

  ಸಹೋದರನಂತರ ಕಂಡರು

  ಸಹೋದರನಂತರ ಕಂಡರು

  ವೈಯಕ್ತಿಕವಾಗಿ ಸುದೀಪ್ ಮತ್ತು ಚಿರಂಜೀವಿ ಸರ್ಜಾ ಇಬ್ಬರು ಸಹೋದರರಂತಿದ್ದರು. ಸಿನಿಮಾ ಬಿಟ್ಟು ಸುದೀಪ್ ಅವರ ಜೊತೆಯಲ್ಲಿ ಬರ್ತಡೇ, ಸೆಲೆಬ್ರೆಷನ್, ಹಾಗೂ ಇನ್ನಿತರ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದರು.

  ಅಂಬರೀಷ್ ಮನೆ ಪಕ್ಕ ಫ್ಲಾಟ್ ತಗೋಬೇಕು ಅಂತ ತುಂಬಾ ಆಸೆ ಪಟ್ಟಿದ್ದ ಚಿರು : PrashanthSambargi | Chiranjeevi Sarja
  ಸಿಸಿಎಲ್‌ನಲ್ಲಿ ಆಡಿದರು

  ಸಿಸಿಎಲ್‌ನಲ್ಲಿ ಆಡಿದರು

  ಸಿಸಿಎಲ್ ಟೂರ್ನಿಯಲ್ಲಿ ಕಿಚ್ಚ ಸುದೀಪ್ ಸಾರಥ್ಯದ ಕರ್ನಾಟಕ ಬುಲ್ಡೋಜರ್ಸ್ ತಂಡದಲ್ಲಿ ಚಿರಂಜೀವಿ ಸರ್ಜಾ ಸಹ ಆಟಗಾರನಾಗಿ ಆಡಿದ್ದಾರೆ. ಕ್ರಿಕೆಟ್ ಮೇಲೆ ಹೆಚ್ಚು ಆಸಕ್ತಿ ಹೊಂದಿದ್ದ ಚಿರು ಸಿಸಿಎಲ್‌ನ ಹಲವು ಸೀಸನ್‌ನಲ್ಲಿ ಪಾಲ್ಗೊಂಡಿದ್ದರು.

  English summary
  Happy Birthday Chiranjeevi Sarja: Sudeep remember the late actor on his birthday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X