»   » 'ದಿ ವಿಲನ್' ಚಿತ್ರಕ್ಕಾಗಿ ಸುದೀಪ್ 'ಹಿಂದಿನ' ಅವತಾರ.. ನಿಮ್ಮ ಕಣ್ಣಿಗೆ ಕಂಡಿಲ್ಲದ್ದು.!

'ದಿ ವಿಲನ್' ಚಿತ್ರಕ್ಕಾಗಿ ಸುದೀಪ್ 'ಹಿಂದಿನ' ಅವತಾರ.. ನಿಮ್ಮ ಕಣ್ಣಿಗೆ ಕಂಡಿಲ್ಲದ್ದು.!

Posted By:
Subscribe to Filmibeat Kannada

'ಏಪ್ರಿಲ್ 1' ರಂದು ಎಲ್ಲರೂ ಎಲ್ಲರನ್ನೂ 'ಫೂಲ್' ಮಾಡುವುದರಲ್ಲಿ ಬಿಜಿಯಾಗಿದ್ರೆ, ನಿರ್ದೇಶಕ ಪ್ರೇಮ್ ಮಾತ್ರ ಸ್ಯಾಂಡಲ್ ವುಡ್ ನಲ್ಲಿ ಯರ್ರಾಬಿರ್ರಿ ಹೈಪ್ ಕ್ರಿಯೇಟ್ ಮಾಡಿರುವ 'ದಿ ವಿಲನ್' ಚಿತ್ರದ ಫಸ್ಟ್ ಲುಕ್ ಪೋಸ್ಟರ್ ನ ಬಿಡುಗಡೆ ಮಾಡಿದರು.

ಫಸ್ಟ್ ಲುಕ್ ಪೋಸ್ಟರ್ ನಲ್ಲಿ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಹಾಗೂ ಅಭಿನಯ ಚಕ್ರವರ್ತಿ ಸುದೀಪ್ ರವರ 'ಹೊಚ್ಚ ಹೊಸ ಅವತಾರ'ವನ್ನ ನೀವೆಲ್ಲ ಕಣ್ತುಂಬಿಕೊಂಡಿದ್ದು ಆಗಿದೆ. ಆದ್ರೆ, ಯಾರ ಕಣ್ಣಿಗೂ ಬೀಳದ ಸುದೀಪ್ ರವರ 'ಹಿಂದಿನ' ಅವತಾರವನ್ನ ಇದೀಗ ನಾವು ನಿಮಗೆ ತೋರಿಸ್ತಿದ್ದೀವಿ ನೋಡಿ....

ಪೋಸ್ಟರ್ ನಲ್ಲಿ ಕಂಡಿದ್ದು ಏನು.?

'ಹೆಬ್ಬುಲಿ' ಚಿತ್ರಕ್ಕಿಂತ ಕೊಂಚ ವಿಭಿನ್ನವಾಗಿರುವ ಸುದೀಪ್ ರವರ ಹೇರ್ ಸ್ಟೈಲ್ ನ 'ದಿ ವಿಲನ್' ಫಸ್ಟ್ ಲುಕ್ ಪೋಸ್ಟರ್ ನಲ್ಲಿ ನಾವು ಕಾಣ್ಬಹುದು. ಸ್ಪೈಕ್ ಜೊತೆಗೆ ಕಿವಿ ಮೇಲೆ ಎಕ್ಸ್ ಮಾರ್ಕ್ ಬರುವ ಹಾಗೆ 'ದಿ ವಿಲನ್' ಚಿತ್ರಕ್ಕಾಗಿ ಸುದೀಪ್ ಹೇರ್ ಸ್ಟೈಲ್ ಮಾಡಿಸಿಕೊಂಡಿದ್ದಾರೆ. ಇದಷ್ಟೇ ಹೊಸ ಲುಕ್ ಅಂತ ನೀವು ಅಂದುಕೊಂಡಿದ್ದರೆ, ನಿಮ್ಮ ಊಹೆ ತಪ್ಪು.! ['ದಿ ವಿಲನ್' ಫಸ್ಟ್ ಲುಕ್ ರಿಲೀಸ್: ರಾಮ ಯಾರು? ರಾವಣ ಯಾರು?]

ಸುದೀಪ್ 'ಹಿಂದೆ' ಇದೆ ಹೊಸ ಅವತಾರ

ಸ್ಪೈಕ್, ಎಕ್ಸ್ ಮಾರ್ಕ್ ಜೊತೆಗೆ ತಲೆ ಹಿಂದೆ Rat Tail ಕೂಡ ಬಿಟ್ಟಿದ್ದಾರೆ ಕಿಚ್ಚ ಸುದೀಪ್. ಆ Rat Tail (V ಶೇಪ್ ಕಟ್ಟಿಂಗ್) ಹೇಗೆ ಕಾಣುತ್ತೆ ಅಂತ ಒಮ್ಮೆ ನೀವೇ ನೋಡ್ಬಿಡಿ. ['ದಿ ವಿಲನ್' ಚಿತ್ರೀಕರಣಕ್ಕೆ ಅಣಿಯಾಗಿದ್ದಾರೆ ಅಭಿನಯ ಚಕ್ರವರ್ತಿ ಸುದೀಪ್]

Rat Tailಗೆ ಕಲರ್.!

ತಮ್ಮ Rat Tail (ಇಲಿ ಬಾಲ)ಗೆ ಸುದೀಪ್ ಹೇರ್ ಕಲರ್ರಿಂಗ್ ಕೂಡ ಮಾಡಿಸಿದ್ದಾರೆ.

ಲುಕ್ಸ್ ನಲ್ಲೂ ಎಕ್ಸ್ ಪೆರಿಮೆಂಟ್

ಹೊಸ ಹೇರ್ ಸ್ಟೈಲ್ ಜೊತೆಗೆ ಕಣ್ಣಿಗೆ ನೀಲಿ ಲೆನ್ಸ್, ಕಿವಿಗೊಂದು ಓಲೆ ಕುರುಚಲು ಗಡ್ಡ ಬಿಟ್ಟು ರಫ್ ಅಂಡ್ ಟಫ್ ಲುಕ್ ನಲ್ಲಿ ಕಿಚ್ಚ ಸುದೀಪ್ ಕಾಣಿಸಿಕೊಂಡಿದ್ದಾರೆ.

ಇಂದಿನಿಂದ ಶೂಟಿಂಗ್ ಶುರು.!

'ದಿ ವಿಲನ್' ಚಿತ್ರದ ಚಿತ್ರೀಕರಣ ಇಂದಿನಿಂದ ಶುರು. ಇವತ್ತಿನಿಂದ ಹದಿಮೂರು ದಿನಗಳ ಕಾಲ ಬೆಂಗಳೂರಿನಲ್ಲಿ 'ದಿ ವಿಲನ್' ಶೂಟಿಂಗ್ ನಡೆಯಲಿದೆ.

ಶಿವಣ್ಣ ಜೊತೆ ನಟಿಸಲು ಉತ್ಸುಕ

ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಜೊತೆ ನಟಿಸಲು ಸುದೀಪ್ ಉತ್ಸುಕರಾಗಿದ್ದಾರೆ. ಅದಕ್ಕೆ ಸಾಕ್ಷಿ ಸುದೀಪ್ ಮಾಡಿರುವ ಟ್ವೀಟ್. ''ಪ್ರೇಮ್ ಮತ್ತು ತಂಡದ ಜೊತೆ ಕೆಲಸ ಮಾಡುತ್ತಿರುವುದು ಖುಷಿ ತಂದಿದೆ. ಶಿವಣ್ಣ ಜೊತೆ ತೆರೆ ಹಂಚಿಕೊಳ್ಳಲು ಉತ್ಸುಕನಾಗಿದ್ದೇನೆ'' ಎಂದು ನಟ ಸುದೀಪ್ ಟ್ವೀಟ್ ಮಾಡಿದ್ದಾರೆ.

ಅಪ್ ಡೇಟ್ ಮಾಡುತ್ತೇನೆ.!

''ಸಾಧ್ಯವಾದಾಗೆಲ್ಲ 'ದಿ ವಿಲನ್' ಚಿತ್ರದ ಬಗ್ಗೆ ಅಪ್ ಡೇಟ್ ಮಾಡುತ್ತಿರುತ್ತೇನೆ'' ಅಂತ ಸುದೀಪ್ ಟ್ವೀಟ್ ಕೂಡ ಮಾಡಿದ್ದಾರೆ. 'ದಿ ವಿಲನ್' ಚಿತ್ರದ ಹೆಚ್ಚಿನ ಮಾಹಿತಿಗಾಗಿ 'ಫಿಲ್ಮಿಬೀಟ್ ಕನ್ನಡ' ಪುಟಕ್ಕೆ ಆಗಾಗ ಭೇಟಿ ನೀಡುತ್ತಿರಿ.

English summary
Kiccha Sudeep has taken his twitter account to reveal his new hair style for Kannada Movie 'The Villain'. Look at the picture.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada