»   » ಬೀದರ್ ನಲ್ಲಿ ನಟ ಕಿಚ್ಚ ಸುದೀಪ್ ರೋಡ್ ಶೋ

ಬೀದರ್ ನಲ್ಲಿ ನಟ ಕಿಚ್ಚ ಸುದೀಪ್ ರೋಡ್ ಶೋ

Posted By:
Subscribe to Filmibeat Kannada
Sudeep road show in Bidar
ನಟ ಕಿಚ್ಚ ಸುದೀಪ್ ಅವರು ಯಾವುದೇ ರಾಜಕೀಯ ಪಕ್ಷಕ್ಕೆ ಸೇರದಿದ್ದರೂ ಚುನಾವಣಾ ಪ್ರಚಾರದಲ್ಲಿ ಮತ್ರ ಬಿಜಿಯಾಗಿದ್ದಾರೆ. ಇತ್ತೀಚೆಗೆ ಅವರು ಪದ್ಮನಾಭನಗರದ ಬಿಜೆಪಿ ಅಭ್ಯರ್ಥಿ ಆರ್.ಅಶೋಕ್ ಪರ ಭರ್ಜರಿ ಪ್ರಚಾರ ಮಾಡಿದ್ದಾರೆ. ಈಗ ಅಶೋಕ್ ಖೇಣಿ ಪರ ಬೀದಿಗಿಳಿದಿದ್ದಾರೆ.

ಕರ್ನಾಟಕ ಮಕ್ಕಳ ಪಕ್ಷದ ಸೂತ್ರಧಾರ ಅಶೋಕ್ ಖೇಣಿ ಪರ ಬೀದರ್ ನಲ್ಲಿ ಸುದೀಪ್ ರೋಡ್ ಶೋ ಮಾಡಿ ಮತಯಾಚಿಸಿದರು. ತಾವು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿಲ್ಲ. ಒಬ್ಬ ಒಳ್ಳೆಯ ವ್ಯಕ್ತಿಗೆ ಪ್ರಚಾರಕೊಡುತ್ತಿದ್ದೇನೆ ಅಷ್ಟೇ ಎಂದು ಸುದೀಪ್ ಈ ಸಂದರ್ಭದಲ್ಲಿ ಹೇಳಿದರು.

ಬೀದರ್ ತಾಲೂಕಿನ ಅಮಲಾಪುರ, ಮರ್ಜಾಪುರ, ಯಾಕತಪುರ, ಮನ್ನಳ್ಳಿ, ಹೊಕ್ರಾಣಾ, ಚಿಂತಲಗೇರಾ, ರಾಜಗೀರಾ, ಪಾತರಹಳ್ಳಿ, ಬೇಮಳಖೇಡ, ಕಾರಕಮಪಳ್ಳಿ, ಸಿಂಧೋಲ ಮುಂತಾದ ಕಡೆ ರೋಡ್ ಶೋ ನಡೆಸಿ ಖೇಣಿ ಪರ ಮತಯಾಚಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸುದೀಪ್ ನನಗೆ ಪಕ್ಷಕ್ಕಿಂತ ವ್ಯಕ್ತಿ ಮುಖ್ಯ. ಖೇಣಿ ಅವರು ನೈಸ್ ಕಂಪನಿ ಮೂಲಕ ಅನೇಕ ಜನೋಪಯೋಗಿ ಕೆಲಸಕಾರ್ಯಗಳನ್ನು ಮಾಡಿದ್ದಾರೆ. ರಂಜೋಳ ಖೇಣಿ ಗ್ರಾಮದವರಾದ ಅವರು ಜಿಲ್ಲೆಯ ಕೀರ್ತಿಪತಾಕೆಯನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಹಾರಿಸಿದ್ದಾರೆ.

ಜಿಲ್ಲೆಯ 105 ಹಳ್ಳಿಗಳ ಅಭಿವೃದ್ಧಿಗೆ ಅವರು ದೃಢಸಂಕಲ್ಪ ಮಾಡಿದ್ದು, ತಮ್ಮ ಕ್ಷೇತ್ರವನ್ನು ರಾಜ್ಯದಲ್ಲಿಯೇ ಮಾದರಿಯನ್ನಾಗಿ ಮಾಡಲು ಪಣತೊಟ್ಟಿದ್ದಾರೆ. ಖೇಣಿ ಅವರಿಗೆ ಮತ ನೀಡಿ ಎಂದು ಅವರು ಪ್ರಚಾರದ ವೇಳೆ ತಿಳಿಸಿದರು. (ಏಜೆನ್ಸೀಸ್)

English summary
Karnataka Makkala Paksha party president Ashok Kheny, who is campaigning in Bidar (his hometown), has got Kicha Sudeep to campaign for him for the elections.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada