Don't Miss!
- Lifestyle
Today Rashi Bhavishya: ಮಂಗಳವಾರದ ದಿನ ಭವಿಷ್ಯ: ಕರ್ಕ, ತುಲಾ, ಕುಂಭ ರಾಶಿಯವರು ಆರೋಗ್ಯದ ಬಗ್ಗೆ ಜಾಗರೂಕರಾ
- News
ಸಿದ್ದರಾಮೋತ್ಸವದಿಂದ ಬಿಜೆಪಿಯಲ್ಲ ಕಾಂಗ್ರೆಸ್ನಲ್ಲೇ ನಡುಕ!
- Sports
Asia Cup 2022: ಏಷ್ಯಾಕಪ್ಗೆ ಪ್ರಕಟವಾದ ತಂಡದಲ್ಲಿ ಬೌಲಿಂಗ್ ಅಸ್ತ್ರ ಬುಮ್ರಾ ಇಲ್ಲದಿರಲು ಇದೇ ಕಾರಣ
- Automobiles
ಹೊಸ ತಂತ್ರಜ್ಞಾನ ಪ್ರೇರಿತ ಹೋಂಡಾ ಸಿಬಿ300ಎಫ್ ಸ್ಟ್ರೀಟ್ಫೈಟರ್ ಬೈಕ್ ಬಿಡುಗಡೆ
- Finance
ಕೇರಳ ಲಾಟರಿ: 'ವಿನ್ ವಿನ್ W-680' ಟಿಕೆಟ್ ವಿಜೇತರ ಪಟ್ಟಿ ಇಲ್ಲಿದೆ
- Technology
ಸೋನಿ ಸಂಸ್ಥೆಯಿಂದ ಹೊಸ ಸ್ಮಾರ್ಟ್ಟಿವಿ ಲಾಂಚ್! ಫೀಚರ್ಸ್ ಹೇಗಿದೆ ಗೊತ್ತಾ?
- Travel
ಭಾರತದಲ್ಲಿರುವ ಕೆಲವು ಸ್ಥಳಗಳು ಅಸ್ತಮಾ ರೋಗಿಗಳಿಗೆ ಸಲ್ಪ ಮಟ್ಟದಲ್ಲಿ ಅಪಾಯಕಾರಿಯಾಗಬಹುದು!
- Education
CSB Recruitment 2022 : 66 ಸೈಂಟಿಸ್ಟ್-ಬಿ ಹುದ್ದೆಗಳಿಗೆ ಅರ್ಜಿ ಆಹ್ವಾನ
ಕಿಚ್ಚ ಸುದೀಪ್ ರಮ್ಮಿ ವಿವಾದ: ನಂದಕಿಶೋರ್‌ಗೆ ಯುವಕ ತಿರುಗೇಟು!
ಕಿಚ್ಚ ಸುದೀಪ್‌ಗೆ ವಿರುದ್ಧ ಅವಹೇಳನಕಾರಿ ವಿಡಿಯೋಗೆ ನಂದ ಕಿಶೋರ್ ಆಕ್ರೋಶ ವ್ಯಕ್ತಪಡಿಸಿದ್ದರು. ಕೆಲವು ದಿನಗಳ ಹಿಂದೆ ಚರಣ್ ಎಂಬುವ ವ್ಯಕ್ತಿ ಕಿಚ್ಚ ಸುದೀಪ್ ರಮ್ಮಿ ಜಾಹೀರಾತಿನ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನಿರ್ದೇಶಕ ನಂದ ಕಿಶೋರ್ ಅಖಾಡಕ್ಕಿಳಿದಿದ್ದರು.
ನಿನ್ನೆ (ಜುಲೈ 03) ಕಿಚ್ಚ ಸುದೀಪ್ ವಿರುದ್ಧ ತಿರುಗಿಬಿದ್ದಿದ್ದ ವ್ಯಕ್ತಿಯ ವಿರುದ್ಧ ನಂದ ಕಿಶೋರ್ ಕಿಡಿಕಾರಿದ್ದರು. " ಸುದೀಪ್ ಅವರ ಸಾಧನೆ ದೊಡ್ಡದು. ಅಂಥಹವರ ಬಗ್ಗೆ ದಾರಿಯಲ್ಲಿ ಹೀಗುವವರೆಲ್ಲ ಏನೋ ಒಂದು ಮಾತಾಡುತ್ತಾರೆ ಎಂದರೆ ಬಹಳ ತಪ್ಪಾಗುತ್ತೆ. ಕನ್ನಡದ ನಟನಿಗೆ ನಪುಂಸಕ ಎಂದು ಹೇಳುವ ನಿನ್ನ ಭಾಷೆಯಲ್ಲಿಯೇ ಗೊತ್ತಾಗುತ್ತೆ. ನೀನು ಎಂಥಹ ಸಂಸ್ಕಾರದಿಂದ ಬಂದಿದ್ದೀಯಾ ಅಂತ. ನೀನು ನಪೂಂಸಕನಾಗಿಲ್ಲದೆ ಇದ್ದರೆ, ಈಗ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಎಲ್ಲಿದ್ದೀಯಾ? ಎಂದು ಖಡಕ್ ವಾರ್ನಿಂಗ್ ಕೊಟ್ಟಿದ್ದರು.
ನಟ
ಸುದೀಪ್
ಬಗ್ಗೆ
ಅವಹೇಳನಕಾರಿ
ಕಮೆಂಟ್:
ಆಕ್ರೋಶಗೊಂಡ
ನಿರ್ದೇಶಕ
ನಂದ
ಕಿಶೋರ್!
ನಂದ ಕಿಶೋರ್ ವಿಡಿಯೋ ವೈರಲ್ ಆಗುತ್ತಿದ್ದಂತೆ ಚರಣ್ ಎಂಬುವ ವ್ಯಕ್ತ ಫೇಸ್‌ಬುಕ್ ಲೈವ್ ಬಂದಿದ್ದಾರೆ. ನಿರ್ದೇಶಕ ನಂದ ಕಿಶೋರ್, ನಟ ಸುದೀಪ್ ಹಾಗೂ ಅವರ ಮ್ಯಾನೇಜರ್ ಕಮ್ ನಿರ್ಮಾಪಕ ಜಾಕ್ ಮಂಜು ಅವರ ವಿರುದ್ಧ ತಿರುಗಿಬಿದ್ದಿದ್ದಾನೆ. ಅಷ್ಟಕ್ಕೂ ಚರಣ್ ವಿಡಿಯೋದಲ್ಲಿ ಏನಿದೆ? ತಿಳಿಯಲು ಮುಂದೆ ಓದಿ.

ನಂದ ಕಿಶೋರ್‌ಗೆ ತಿರುಗೇಟು
"ಲೇ ನಂದ ಕಿಶೋರ. ಈಗ ಬಂದ್ಯ. ಈಗ ಬರಬೇಕು ಅನಿಸಿತಾ? ಬುಡಕ್ಕೆ ಮಣಸಿನಕಾಯಿ ಹಚ್ಚಿಕೊಂಡಾಗ ಡಾ.ರಾಜ್‌ಕುಮಾರ್ ಹೆಸರನ್ನು ತೆಗೆದುಕೊಂಡು ರಕ್ಷಣೆ ಮಾಡಿ ಅಂತ ಭಿಕ್ಷೆ ಬೇಡುವುದಕ್ಕೆ ಬಂದಿದ್ದೀಯಾ. ಕಲಾಭಿಮಾನಿಗಳೆಲ್ಲಾ ರಕ್ಷಣೆ ಮಾಡಬೇಕು ಎಂದಿದ್ದೀಯಲ್ಲಾ ನಾಚಿಕೆಯಾಗಬೇಕು. ಅದೇ ಕಲಾಭಿಮಾನಿಗಳಿಗೆ ಜೂಜು ಆಡಿಸಿದಾಗ ಎಲ್ಲೆ ಹೋಗಿದ್ರಿ ನೀವೆಲ್ಲ." ಎಂದು ಚರಣ್ ಕಿಡಿಕಾರಿದ್ದಾನೆ.
Exclusive:
'ಬಿಲ್ಲ
ರಂಗ
ಭಾಷಾ'
2
ಪಾರ್ಟ್ಗಳಲ್ಲಿ
ಬರುತ್ತೆ:
'ವಿಕ್ರಾಂತ್
ರೋಣ'
ಕಥೆಯೇನು?

ಫಿಲ್ಮ್ ಚೇಂಬರ್‌ಗೆ ಗೊತ್ತಿಲ್ವಾ?
"ಕನ್ನಡ ಚಿತ್ರರಂಗದಲ್ಲಿ ಫಿಲಂ ಚೇಂಬರ್ ಇದೆ. ಬಂದು ಕಂಪ್ಲೇಂಟ್ ಮಾಡು ಅಂತಿಯಲ್ಲ. ಕಂಪ್ಲೇಂಟ್ ಯಾಕೆ ಮಾಡಬೇಕು. ಕನ್ನಡ ಫಿಲ್ಮ್ ಚೇಂಬರ್‌ಗೆ ಗೊತ್ತಿಲ್ವಾ ಜೂಜು ಆಡಿಸಿದ್ದು. ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದೀಯಾ ಅಂತಿಯಲ್ಲ. ಮಾತಾಡುವುದಕ್ಕಿಂತ ಮುಂಚಿತವಾಗಿ ಅಧ್ಯಯನ ಮಾಡಿಕೊಂಡು ಮಾತಾಡು. ದಿನಕ್ಕೆ ಏನಿಲ್ಲಾ ಅಂದರೂ ಒಂದು ಸಾವಿರ ಕಾಲ್ ಬರುತ್ತಿದೆ. ಸಾಧ್ಯವಾದಷ್ಟು ಕಾಲ್ ರಿಸೀವ್ ಮಾಡುತ್ತಿದ್ದೇನೆ. ಮಾತಾಡುತ್ತಿದ್ದೇನೆ. ಆ ಆಡಿಯೋ ಕಾಲ್ ಅನ್ನು ಕಿಚ್ಚ ಸುದೀಪ್ ಪಿ ಎ ಜಾಕ್ ಮಂಜುಗೆ ಕಳುಹಿಸಿದ್ದೀನಿ." ಎಂದಿದ್ದಾನೆ.

ಗಲೀಜು ಕ್ಲೀನ್ ಮಾಡುತ್ತೇನೆ
" ಡಾ. ರಾಜ್‌ಕುಮಾರ್ ಕಲಾಭಿಮಾನಿಗಳಿಗೆ ಒಂದೇ ಒಂದು ಕೆಟ್ಟ ಚಟವನ್ನಾದರೂ ಹೇಳಿಕೊಟ್ಟಿದ್ದಾರಾ? ನೀವು ಚಿತ್ರರಂಗದ ಒಂದು ಕುಟುಂಬ ಅಂತ ಹೇಳಿದ್ರಲ್ಲ. ಈ ಕುಟುಂಬದವರು ಸುದೀಪ್ ಜೂಜು ಆಡಿಸಿದಾಗ ಕೇಳಿದಿದ್ದರೆ ನಾವ್ಯಾಕೆ ಬರುತ್ತಿದ್ದೆವು? ನಿಮ್ಮ ಮನೆಯಲ್ಲಿ ಗಲೀಜು ಮಾಡಿಕೊಂಡಿದ್ದಕ್ಕೆ ನಾನು ಇವತ್ತು ಗಲೀಜು ಕ್ಲೀನ್ ಮಾಡುವುದಕ್ಕೆ ಬಂದಿರುವುದು. ರಮ್ಮಿ ಆಡಿ, ಎಲ್ಲಾ ಹಣವನ್ನು ಹಂಚಿ, ಈ ತರ ಆದರೆ ಯಾರು ಬಂದು ಸಿನಿಮಾ ನೋಡುವವರು. " ಎಂದು ಹೇಳಿದ್ದಾನೆ.
1
ಗಂಟೆಯಲ್ಲಿ
'ವಿಕ್ರಾಂತ್
ರೋಣ'
ಟ್ರೈಲರ್
ರೆಕಾರ್ಡ್:
ಯಾವ
ಭಾಷೆಯಲ್ಲಿ
ಎಷ್ಟು
ವೀಕ್ಷಣೆ?

ಬೀದಿಗೆ ಬಂದ ಜನರು: ಹೊಣೆ ಯಾರು?
"ಅಲ್ಯಾರೋ ಜೂಜಿನಿಂದ ಸತ್ತು ಹೋದರೆ, ಅದು ಸುದೀಪ್‌ಯಿಂದಲೇ ಸತ್ತು ಹೋದ ಅಂತ ಬರೆದಿಡಬೇಕಾ ಅವನು? ಜೂಜಿನಿಂದ ಸತ್ತಿರುವುದು. ಸರ್ಕಾರ ಅಪ್ಲಿಕೇಶನ್ ಅನ್ನು ಬ್ಯಾನ್ ಮಾಡಬೇಕಿತ್ತು. ಅದು ಖಂಡಿತಾ ತಪ್ಪು. ಆದರೆ ಎಲ್ಲೂ ಪ್ರಚಾರ ಮಾಡಿರಲಿಲ್ಲ. ನೀನು ಹೇಳಿದ್ಯಲ್ಲಾ ಮೇರು ನಟ ಅಂತ. ಆ ಮೇರು ನಟನಿಗೆ ಬುದ್ದಿ ಬೇಕು. ನಾನು ಏನಾದರೂ ಕೆಟ್ಟ ಕೆಲಸ ಮಾಡಿದರೆ, ನನ್ನ ಅಭಿಮಾನಿಗಳೂ ಕೂಡ ಅದೇ ಕೆಲಸ ಮಾಡುತ್ತಾರೆ ಅಂತ. ಸ್ಕಿಲ್ ಗೇಮ್ ಅಂತ ಸಾವಿರಾರು ಜನ ಜನ ಬೀದಿಗೆ ಬಂದಿದ್ರಲ್ಲ. ಹೊಣೆ ತೆಗೆದುಕೊಳ್ಳುವುದು ಯಾರು?" ಎಂದು ಯುವಕ ಕಿಡಿ ಕಾರಿದ್ದಾನೆ.