»   » ಟ್ವಿಟ್ಟರ್ ಜಟಾಪಟಿ: ರಕ್ಷಿತ್ ಶೆಟ್ಟಿ ಬಗ್ಗೆ ಸುದೀಪ್ ಹೊಸ ಕಾಮೆಂಟ್.!

ಟ್ವಿಟ್ಟರ್ ಜಟಾಪಟಿ: ರಕ್ಷಿತ್ ಶೆಟ್ಟಿ ಬಗ್ಗೆ ಸುದೀಪ್ ಹೊಸ ಕಾಮೆಂಟ್.!

Posted By:
Subscribe to Filmibeat Kannada

ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಕಿಚ್ಚ ಸುದೀಪ್ ಮತ್ತು ರಕ್ಷಿತ್ ಶೆಟ್ಟಿ ರವರನ್ನ ಫಾಲೋ ಮಾಡುತ್ತಿರುವವರಿಗೆ, ಇಬ್ಬರ ಮಧ್ಯೆ ಆದ 'ವಾದ-ವಿವಾದ' ಗೊತ್ತಿದೆ ತಾನೆ.?

ಕೆಲವೇ ದಿನಗಳ ಹಿಂದೆಯಷ್ಟೇ, ರಕ್ಷಿತ್ ಶೆಟ್ಟಿ ಮಾಡಿದ ಒಂದು ಟ್ವೀಟ್ ಹಾಗೂ ಹೇಳಿದ ಒಂದು ಪದವನ್ನು ಇಟ್ಕೊಂಡು ಸುದೀಪ್ ಟ್ವಿಟ್ಟರ್ ನಲ್ಲಿ ಮಾತಿಗಿಳಿದದ್ದು ನಿಮಗೆ ನೆನಪಿರಬಹುದು. ಒಂದ್ವೇಳೆ ಮರೆತು ಹೋಗಿದ್ದರೆ ಈ ಲಿಂಕ್ ಕ್ಲಿಕ್ ಮಾಡಿ ವಾಪಸ್ ಬನ್ನಿ....[ಟ್ವಿಟ್ಟರ್ ನಲ್ಲಿ ಸುದೀಪ್-ರಕ್ಷಿತ್ ಶೆಟ್ಟಿ ಮಧ್ಯೆ ಮಾತಿನ ಸಮರ, ಸಮರ್ಥನೆ.!]

ಇಬ್ಬರು ಸ್ಟಾರ್ ನಟರ ಪ್ರಶ್ನೋತ್ತರ ಟ್ವೀಟ್ ಗಳನ್ನ ನೋಡಿದವರು, ಇಬ್ಬರ ಮಧ್ಯೆ 'ಕಿಚ್ಚು' ಹತ್ತಿದೆ ಅಂತಲೇ ಭಾವಿಸಿದ್ರು.! ಸುದೀಪ್ ಜೊತೆ ಮಾತಿಗೆ ಸಿಲುಕಿ ಕೊನೆಗೆ ಸೋಲು ಒಪ್ಪಿಕೊಂಡ ರಕ್ಷಿತ್ ಶೆಟ್ಟಿ, ಬಳಿಕ ಈ ಬಗ್ಗೆ ಎಲ್ಲೂ ತುಟಿಕ್ ಪಿಟಿಕ್ ಅಂದಿರಲಿಲ್ಲ. ಮುಂದೆ ಓದಿ....

ಸುದೀಪ್ ಈಗ ಬಾಯ್ಬಿಟ್ಟಿದ್ದಾರೆ.!

ಟ್ವಿಟ್ಟರ್ ನಲ್ಲಿ ಆಗಿದ್ದನ್ನ, ಅಲ್ಲಿಗೆ ಬಿಟ್ಟಿದ್ದ ಸುದೀಪ್ ಇದೀಗ ಚಿತ್ರಲೋಕ.ಕಾಮ್ ವೆಬ್ ತಾಣಕ್ಕೆ ನೀಡಿದ ಸಂದರ್ಶನದಲ್ಲಿ ರಕ್ಷಿತ್ ಶೆಟ್ಟಿ ಮತ್ತು ಅವರ ಜೊತೆ ಆದ ಟ್ವಿಟ್ಟರ್ ಜಟಾಪಟಿ ಕುರಿತು ಕಾಮೆಂಟ್ ಮಾಡಿದ್ದಾರೆ.

ಸುದೀಪ್ ಏನು ಹೇಳಿದ್ದಾರೆ.?

ಚಿತ್ರಲೋಕ.ಕಾಮ್ ಸಂಪಾದಕ ಕೆ.ಎಂ.ವೀರೇಶ್ ನಡೆಸಿರುವ ಸಂದರ್ಶನದಲ್ಲಿ ರಕ್ಷಿತ್ ಶೆಟ್ಟಿ ಬಗ್ಗೆ ಏನೆಲ್ಲ ಮಾತನಾಡಿದ್ದಾರೆ ಅಂತ ಅವರ ಮಾತುಗಳಲ್ಲೇ ಓದಿರಿ ಮುಂದಿನ ಸ್ಲೈಡ್ ಗಳಲ್ಲಿ....

ಟ್ವಿಟ್ಟರ್ ನಲ್ಲಿ ಸೀರಿಯಸ್ ಇಲ್ಲ.!

''Rakshit Shetty is a very sweet guy. ವೈಯುಕ್ತಿಕವಾಗಿ ಸಿಕ್ಕಿದಾಗ ಏನಾಗುತ್ತೆ ಅಂದ್ರೆ ನಾವು ಮಾತಾಡ್ತಾ ಇರ್ತೀವಿ. ಆದ್ರೆ, ಟ್ವಿಟ್ಟರ್ ನಲ್ಲಿ ನಾವಿಬ್ಬರೂ ಸೀರಿಯಸ್ ಇಲ್ಲ. He is like my brother'' - ಸುದೀಪ್

ನಗುತ್ತಾ ಟ್ವೀಟ್ ಮಾಡ್ತಿರ್ತೀವಿ.!

''ನೀವು ಯಾವ ರೀತಿ ಓದಿದ್ರಿ ಅನ್ನೋದು ಇಂಪಾರ್ಟೆಂಟ್ ಈಗ. ಯಾಕೆ ಇವರಿಬ್ಬರು ಈ ರೀತಿ ಕಿತ್ತಾಡುತ್ತಿದ್ದಾರೆ.? ಅಂತ ಅಂದುಕೊಳ್ತಿದ್ರೆ, Actually, ನಾವಿಬ್ಬರು ನಗಾಡಿಕೊಂಡು ಟ್ವೀಟ್ ಮಾಡ್ತಿರ್ತೀವಿ'' - ಸುದೀಪ್

ವಾಟ್ಸ್ ಆಪ್ ಮಾಡಿ ಸರ್....

''ಅವನು ಆ ಕಡೆಯಿಂದ ಹೇಳ್ತಿರ್ತಾನೆ, 'ಯಾಕ್ ಸರ್, ದಯವಿಟ್ಟು ನನಗೆ ವಾಟ್ಸ್ ಆಪ್ ಮಾಡಿ ಸರ್' ಅಂತ. We have fun'' - ಸುದೀಪ್

ನಮ್ಮ ಮನೆ ಹುಡುಗ

''I have respect for him. He is a beautiful creator. ನಾನು ನಮ್ಮ ಮನೆ ಹುಡುಗನ ಹಾಗೆ ನೋಡ್ತೀವಿ ಅವನನ್ನ'' - ಸುದೀಪ್

ರಕ್ಷಿತ್ ಶೆಟ್ಟಿ ಅಭಿಮಾನಿ

''ಅವರ 'ಉಳಿದವರು ಕಂಡಂತೆ' ನೋಡಿ, ಅವರ ದೊಡ್ಡ ಅಭಿಮಾನಿ ಆಗ್ಬಿಟ್ಟೆ'' - ಸುದೀಪ್

Transformation ಅಂದ್ರೆ....

''The moment he said Transformation, ನಾನು ಅದನ್ನೇ ಹಿಡ್ಕೊಂಡೆ. ಯಾಕಂದ್ರೆ, Transformation is only from Good to Bad and Bad to Good'' - ಸುದೀಪ್

ನಾನು ಕಾಲೆಳೆಯುತ್ತಿದ್ದೆ.!

''ಪ್ರತಿ ಹದಿನೈದು ವರ್ಷಕ್ಕೊಮ್ಮೆ ಹೊಸಬರು ಹುಟ್ಟಿಕೊಳ್ತಿರ್ತಾರೆ. ಹಾಗಂತ ಹಿಂದಿನ ಹದಿನೈದು ವರ್ಷ ನೆಗ್ಲೆಟ್ ಮಾಡೋಕೆ ಆಗಲ್ಲ. ಅವರಿಂದಲೇ ಅಲ್ಲವೇ ಇಂಡಸ್ಟ್ರಿ ನಡೆದುಕೊಂಡು ಬಂದಿದ್ದು. ಹೀಗಾಗಿ ರಕ್ಷಿತ್ ಇಂಗ್ಲೀಷ್ ನಲ್ಲಿ ಹೇಳಿದ್ರಲ್ಲಾ, ನಾನು ಕಾಲೆಳೆಯುತ್ತಿದ್ದೆ'' - ಸುದೀಪ್

ಐ ಲವ್ ಹಿಮ್.!

''Rakshit is my boy. I love him for his creative strength'' - ಸುದೀಪ್

ಸುದೀಪ್ ಸಂದರ್ಶನ

ಚಿತ್ರಲೋಕ.ಕಾಮ್ ಗೆ ಸುದೀಪ್ ನೀಡಿರುವ ಸಂದರ್ಶನದ ಲಿಂಕ್ ಇಲ್ಲಿದೆ ನೋಡಿ....

English summary
Kannada Actor Kiccha Sudeep has given clarification in an interview with Chitraloka.com over his twitter argument with Kannada Actor Rakshit Shetty.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada