»   » ಸ್ಯಾಂಡಲ್ ವುಡ್ ನಲ್ಲಿ 'ಹೆಬ್ಬುಲಿ' ಘರ್ಜನೆ ಶುರು ಆಯ್ತು.!

ಸ್ಯಾಂಡಲ್ ವುಡ್ ನಲ್ಲಿ 'ಹೆಬ್ಬುಲಿ' ಘರ್ಜನೆ ಶುರು ಆಯ್ತು.!

Posted By:
Subscribe to Filmibeat Kannada

'ಗಜಕೇಸರಿ' ಚಿತ್ರದ ಮೂಲಕ ಹೊಸ ಇನ್ನಿಂಗ್ಸ್ ಆರಂಭಿಸಿದ ಛಾಯಾಗ್ರಾಹಕ ಎಸ್ ಕೃಷ್ಣ ಅವರು ಕಿಚ್ಚ ಸುದೀಪ್ ಅವರಿಗೆ 'ಹೆಬ್ಬುಲಿ' ಚಿತ್ರಕ್ಕೆ ಆಕ್ಷನ್-ಕಟ್ ಹೇಳುತ್ತಿರುವ ವಿಚಾರ ನಿಮಗೆ ಗೊತ್ತೇ ಇದೆ.

ಛಾಯಾಗ್ರಹಣದಿಂದ ಫುಲ್ ಟೈಮ್ ನಿರ್ದೇಶಕರಾಗಿ ಭಡ್ತಿ ಹೊಂದಿರುವ 'ಮುಂಗಾರು ಮಳೆ' ಕೃಷ್ಣ ಅವರು ಕಿಚ್ಚ ಸುದೀಪ್ ಅವರ 'ಹೆಬ್ಬುಲಿ' ಚಿತ್ರದ ಪ್ರೋಮೋ ಶೂಟಿಂಗ್ ಮಾಡುತ್ತಿದ್ದೇವೆ ಎಂದು ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟ ಬೆನ್ನಲ್ಲೇ ಇದೀಗ ಚಿತ್ರದ ಶೂಟಿಂಗ್ ಗೆ ಮೂಹೂರ್ತವಾಗಿರುವ ಸುದ್ದಿಯನ್ನು ಹೊರಹಾಕಿ ಅಭಿಮಾನಿ ದೇವರುಗಳು ಖುಷ್ ಆಗುವಂತೆ ಮಾಡಿದ್ದಾರೆ.[ಸ್ಯಾಂಡಲ್ ವುಡ್ ನ 'ಹೆಬ್ಬುಲಿ'ಯಾಗಿ ಕಿಚ್ಚ ಸುದೀಪ್]

Sudeep's Kannada movie 'Hebbuli' to kick start for shooting

ಇದೇ ಮೊದಲ ಬಾರಿಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು 'ಹೆಬ್ಬುಲಿ' ಚಿತ್ರದಲ್ಲಿ ಆರ್ಮಿ ಆಫೀಸರ್ ಪಾತ್ರದಲ್ಲಿ ಮಿಂಚಿದ್ದು, ಇದಕ್ಕಾಗಿ ಆರ್ಮಿ ಕ್ಯಾಂಪ್ ಗಳಲ್ಲಿ ಚಿತ್ರೀಕರಣ ಮಾಡಲು ಈಗಾಗಲೇ ಪರವಾನಗಿ ಕೂಡ ಪಡೆಯಲಾಗಿದೆ.

ಆದ್ದರಿಂದ ಸಿನಿಮಾ ಶೂಟಿಂಗ್ ಗೆ ಅಚ್ಚುಕಟ್ಟಾಗಿ ಮುಹೂರ್ತ ನೆರವೇರಿಸಿದ್ದು, ಸದ್ಯದಲ್ಲೇ ಚಿತ್ರದ ಶೂಟಿಂಗ್ ಆರಂಭವಾಗಲಿದೆ. ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಅವರು ಈ ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡಲಿದ್ದಾರೆ.[ಕಿಚ್ಚನ 'ಹೆಬ್ಬುಲಿ'ಗೆ, ದೇವಿಶ್ರೀ ಬದಲು ಅರ್ಜುನ್ ಜನ್ಯ ಮ್ಯೂಸಿಕ್]

Sudeep's Kannada movie 'Hebbuli' to kick start for shooting

ಅಂದಹಾಗೆ ಚಿತ್ರಕ್ಕೆ ನಾಯಕಿ ಯಾರು ಎಂಬುದು ಇನ್ನು ಪಕ್ಕಾ ಆಗಿಲ್ಲ. ಆದರೂ ದಕ್ಷಿಣ ಭಾಗದ ಇಬ್ಬರು ನಟಿಮಣಿಗಳ ಹೆಸರು ತಳಕು ಹಾಕಿಕೊಂಡಿತ್ತು. ಆದರೆ ಯಾರು ಕಿಚ್ಚನ ಜೊತೆ ಡ್ಯುಯೆಟ್ ಹಾಡುತ್ತಾರೆ ಎಂಬುದು ಸದ್ಯದಲ್ಲೇ ಗೊತ್ತಾಗಲಿದೆ.

ಸದ್ಯಕ್ಕೆ ಸ್ಯಾಂಡಲ್ ವುಡ್ ನಲ್ಲಿ 'ಹೆಬ್ಬುಲಿ' ಘರ್ಜನೆ ಜೋರಾಗಿದ್ದು, ನಟ ಕಿಚ್ಚ ಸುದೀಪ್ ಅವರ ಸಿನಿ ಕೆರಿಯರ್ ನಲ್ಲಿ ಇದೊಂದು ವಿಭಿನ್ನ ಸಿನಿಮಾ ಆಗಲಿದೆ ಅಂತೆ. ಒಟ್ನಲ್ಲಿ 'ಹೆಬ್ಬುಲಿ' ಸಿನಿಮಾ ಅಭಿಮಾನಿಗಳಲ್ಲಿ ಭಾರಿ ಕುತೂಹಲದ ಜೊತೆಗೆ ನಿರೀಕ್ಷೆ ಕೂಡ ಮೂಡಿಸಿದೆ.

English summary
Sudeep, who is busy with the third season of Bigg Boss, Kannada, will be busier from next week, with his film 'Hebbuli' all set to start its shooting schedule by the end of this month. The cinematographer of 'Mungaru Male', S Krishna will be tuning director for this film.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada