Don't Miss!
- Finance
7th Pay Commission: ನೌಕರರಿಗೆ ಸಿಹಿ ಸುದ್ದಿ: ಬಾಕಿ DA ಹಣ ನೀಡಲು ಕೇಂದ್ರ ಸರ್ಕಾರ ನಿರ್ಧಾರ, ಹೇಗೆ?
- News
ಉದ್ಯಾನವನಕ್ಕೆ ಇಟ್ಟಿದ್ದ ಟಿಪ್ಪು ಸುಲ್ತಾನ್ ಹೆಸರು ತೆಗೆದ ಮಹಾರಾಷ್ಟ್ರ
- Sports
KCC Cup 2023: ಯಾವ ತಂಡಕ್ಕೆ ಯಾರು ನಾಯಕ?; ಸುದೀಪ್ ತಂಡದಲ್ಲಿ ಯೂನಿವರ್ಸಲ್ ಬಾಸ್!
- Technology
ವಾಟ್ಸಾಪ್ನ ಈ ಹೊಸ ಫೀಚರ್ಸ್ನಲ್ಲಿ ಏನೆಲ್ಲಾ ಅನುಕೂಲ ಇದೆ ಗೊತ್ತಾ!?
- Automobiles
ಭಾರತದಲ್ಲಿ ದಾಖಲೆ ಮಟ್ಟದ ಬುಕ್ಕಿಂಗ್ ಪಡೆದುಕೊಳ್ಳುತ್ತಿವೆ ಮಾರುತಿ ಜಿಮ್ನಿ, ಫ್ರಾಂಕ್ಸ್
- Lifestyle
ಸಂಗಾತಿ ಸುಮ್-ಸಮ್ಮನೇ ಸಂಶಯ ಪಡುತ್ತಾರಾ? ಅವರ ಸಂಶಯ ಹೋಗಲಾಡಿಸಲು ಏನು ಮಾಡಬೇಕು?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಸದ್ಯದಲ್ಲೇ 'ಕೋಟಿಗೊಬ್ಬ 2' ಚಿತ್ರದ ಬಿಡುಗಡೆ ದಿನಾಂಕ ಘೋಷಣೆ
ಕಿಚ್ಚ ಸುದೀಪ್ ಮತ್ತು ನಿತ್ಯಾ ಮೆನನ್ ಕಾಣಿಸಿಕೊಂಡಿರುವ ಬಹು ಕೋಟಿ ವೆಚ್ಚದ ಹಾಗೂ ಬಹು ನಿರೀಕ್ಷಿತ 'ಕೋಟಿಗೊಬ್ಬ 2' ಚಿತ್ರದ ಶೂಟಿಂಗ್ ಅಂತಿಮ ಹಂತದಲ್ಲಿದ್ದು, ಇನ್ನೇನು ಎರಡು ಹಾಡುಗಳು ಮಾತ್ರ ಬಾಕಿ ಉಳಿದಿವೆ.
'ಲಿಂಗಾ' ಚಿತ್ರದ ಖ್ಯಾತಿಯ ಖ್ಯಾತ ನಿರ್ದೇಶಕ ಕೆ.ಎಸ್ ರವಿಕುಮಾರ್ ನಿರ್ದೇಶನ ಮಾಡಿರುವ ಈ ಸಿನಿಮಾ ಕನ್ನಡ ಮತ್ತು ತಮಿಳು ಭಾಷೆಯಲ್ಲಿ ಏಕಕಾಲದಲ್ಲಿ ತೆರೆ ಕಾಣಲಿದೆ. ತಮಿಳಿನಲ್ಲಿ ಈ ಸಿನಿಮಾ 'ಮುಡಿಂಜ ಇವನ ಪುಡಿ' ಎಂಬ ಹೆಸರಿನಲ್ಲಿ ತೆರೆ ಕಾಣುತ್ತಿದೆ.[ಅಬ್ಬಾ.! ಅಂತೂ ಕಿಚ್ಚನ ಚಿತ್ರಕ್ಕೆ ಟೈಟಲ್ ಪಕ್ಕಾ ಆಯ್ತು]
ಮುಂದಿನ ತಿಂಗಳು ಮೇ 2 ರಿಂದ ಕೊನೆಯ ಎರಡು ಹಾಡುಗಳ ಚಿತ್ರೀಕರಣ ನಡೆಯಲಿದ್ದು, ಚಿತ್ರೀಕರಣಕ್ಕಾಗಿ ಮುಂಬೈಯನ್ನು ಆಯ್ಕೆ ಮಾಡಲಾಗಿದೆ. ಈ ಎರಡು ಹಾಡುಗಳಿಗೆ ನೃತ್ಯ ನಿರ್ದೇಶಕ ಇಮ್ರಾನ್ ಸರ್ದಾರಿಯಾ ಅವರು ಕೊರಿಯೋಗ್ರಫಿ ಮಾಡಲಿದ್ದಾರೆ.
ಮೊದಲ ಹಾಡಿಗೆ ಭಾರಿ ವೆಚ್ಚದಲ್ಲಿ ವೈಭವಯುತ ಸೆಟ್ ಹಾಕಲಾಗುತ್ತಿದ್ದು, ಇದು ಸಿನಿಮಾದಲ್ಲಿ ಸುದೀಪ್ ಅವರ ಪರಿಚಯದ ಹಾಡಾಗಲಿದೆ. ಮತ್ತೊಂದು ಹಾಡಿನಲ್ಲಿ ನಟಿ ನಿತ್ಯಾ ಮೆನನ್ ಮತ್ತು ಸುದೀಪ್ ಅವರು ಡ್ಯುಯೆಟ್ ಹಾಡಲಿದ್ದಾರೆ.[ವಾವ್ ಏಪ್ರಿಲ್ ತಿಂಗಳು ಸುದೀಪ್ ಅಭಿಮಾನಿಗಳಿಗೆ ಹಬ್ಬ ರೀ..!]

'ಚಿತ್ರ ಬಿಡುಗಡೆ ಆದ ಮೇಲೆ ಈ ಎರಡು ಹಾಡುಗಳೇ ಎಲ್ಲಾ ಮಾತನಾಡಲಿವೆ. ಈ ಎರಡು ಹಾಡುಗಳ ಚಿತ್ರೀಕರಣ ಆದ ನಂತರ ಇಡೀ ಚಿತ್ರದ ಚಿತ್ರೀಕರಣ ಸಂಪೂರ್ಣವಾದಂತೆ. ತದನಂತರ ನಾನು ಎರಡು ಬಾಷೆಗಳಲ್ಲಿ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ ಮಾಡಲಿದ್ದೇನೆ' ಎಂದು ನಿರ್ಮಾಪಕ ಸೂರಪ್ಪ ಬಾಬು ಅವರು ತಿಳಿಸುತ್ತಾರೆ.[ಇದಕ್ಕೆ ನೋಡಿ ಕನ್ನಡದ ಹುಡುಗರಿಗೆ ನಿತ್ಯಾ ಮೆನನ್ ಇಷ್ಟ ಆಗೋದು]
ಈಗಾಗಲೇ ಚಿತ್ರದ ಡಬ್ಬಿಂಗ್ ಕೂಡ ನಡೆಯುತ್ತಿದ್ದು, ಖ್ಯಾತ ನಟ ಮುಖೇಶ್ ತಿವಾರಿ, ಶರತ್ ಲೋಹಿತಾಶ್ವ, ನೇಸರ್, ರವಿಶಂಕರ್ ಮುಂತಾದ ಘಟಾನುಘಟಿಗಳು ಸುದೀಪ್ ಅವರ ಜೊತೆ ಕಾಣಿಸಿಕೊಂಡಿದ್ದಾರೆ. ಚಿತ್ರದ ಹಾಡುಗಳಿಗೆ ಡಿ.ಇಮಾಮ್ ಅವರು ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.