»   »  ಸುದೀಪ್ 'ಕೋಟಿಗೊಬ್ಬ 2' ಚಿತ್ರೀಕರಣ ಆರಂಭ

ಸುದೀಪ್ 'ಕೋಟಿಗೊಬ್ಬ 2' ಚಿತ್ರೀಕರಣ ಆರಂಭ

Posted By:
Subscribe to Filmibeat Kannada

ಅಭಿನವ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಬ್ಲಾಕ್ ಬಸ್ಟರ್ ಹಿಟ್ 'ಮಾಣಿಕ್ಯ' ಹಾಗೂ 'ರನ್ನ' ಚಿತ್ರದ ನಂತರ ಸುದೀಪ್ ಮತ್ತೆ ಇನ್ನೊಂದು ಬಿಗ್ ಬಜೆಟ್ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಈ ಮೊದಲೇ ಕೆ.ಎಸ್ ರವಿಕುಮಾರ್ ಅವರ 'ಕೋಟಿಗೊಬ್ಬ 2' ಚಿತ್ರದಲ್ಲಿ ಕಿಚ್ಚ ಸುದೀಪ್ ನಟಿಸುತ್ತಿರುವುದಾಗಿಯೂ ಜೊತೆಗೆ ಕಿಚ್ಚನ ನಾಯಕಿಯಾಗಿ ತೆಲುಗು ತಾರೆ ನಿತ್ಯಾ ಮೆನನ್ ಕಾಣಿಸಿಕೊಳ್ಳುತ್ತಾರೆ ಅನ್ನುವ ಸುದ್ದಿಗಳಿಗೆ ಚಿತ್ರತಂಡದವರು ಪುಷ್ಟಿ ನೀಡಿದ್ದು, ಇದೀಗ 'ಕೋಟಿಗೊಬ್ಬ 2' ಚಿತ್ರತಂಡ ಚಿತ್ರೀಕರಣ ಆರಂಭಿಸಿದೆ.

ನಿರ್ಮಾಪಕ ಸೂರಪ್ಪ ಬಾಬು ಅವರು ಬಂಡವಾಳ ಹಾಕುತ್ತಿರುವ 'ಕೋಟಿಗೊಬ್ಬ 2' ಚಿತ್ರ ಡಾ.ವಿಷ್ಣುವರ್ಧನ್ ಅವರ 'ಕೋಟಿಗೊಬ್ಬ' ಚಿತ್ರದ ಮುಂದುವರಿದ ಭಾಗ ಅನ್ನೋದು ಗಾಂಧಿನಗರದಲ್ಲಿ ಸದ್ಯಕ್ಕೆ ಕೇಳಿಬರುತ್ತಿರುವ ಮಾತುಗಳು.[ಕಿಚ್ಚ ಸುದೀಪನ ಜೊತೆ ಮೈನಾ ಬೆಡಗಿ ನಿತ್ಯಾ ಮೆನನ್ ]

sudeep

ಅಂದಹಾಗೆ ಈಗಾಗಲೇ 'ಕೋಟಿಗೊಬ್ಬ 2' ಚಿತ್ರದ ಚಿತ್ರೀಕರಣಕ್ಕಾಗಿ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಸುದೀಪ್ ಅವರ ಸೀನ್ ಗಾಗಿ ಅದ್ಧೂರಿ ಸೆಟ್ ನಿರ್ಮಾಣ ಮಾಡಲಾಗಿದ್ದು, ಇಂದಿನಿಂದ(ಆಗಸ್ಟ್ 18) ಅಧಿಕೃತವಾಗಿ ಚಿತ್ರದ ಚಿತ್ರೀಕರಣ ಮಾಡಲಾಗುತ್ತಿದೆ. ಜೊತೆಗೆ ನಾಯಕಿ ನಿತ್ಯಾ ಮೆನನ್ ಕೂಡ ಪಾಲ್ಗೊಳ್ಳಲಿದ್ದಾರೆ.['ಕೋಟಿಗೊಬ್ಬ-2' ಚಿತ್ರದ ಶೂಟಿಂಗ್ ಗೆ ಮುಹೂರ್ತ ಫಿಕ್ಸ್]

ಬಿಗ್ ಬಜೆಟ್ ನ ಚಿತ್ರವಾಗಿರುವುದರಿಂದ ನಿರ್ದೇಶಕ ಕೆ.ಎಸ್ ರವಿಕುಮಾರ್ ಅವರಿಗೆ ಚಿತ್ರದ ಬಗ್ಗೆ ಸ್ವಲ್ಪ ಜಾಸ್ತೀನೇ ನಿರೀಕ್ಷೆಗಳಿವೆ. ಆದ್ದರಿಂದ ಚಿತ್ರವನ್ನು ವಿಶೇಷವಾಗಿ ಮಾಡಲು ನಿರ್ಧರಿಸಿದ್ದಾರೆ.[ಫ್ಯಾನ್ಸ್ ಒತ್ತಡಕ್ಕೆ ಮಣಿದು ಮತ್ತೆ ಬಣ್ಣ ಹಚ್ಚಿದ ಸುದೀಪ]

ಅದೇನೇ ಇರಲಿ ಸ್ಯಾಂಡಲ್ ವುಡ್ ನಲ್ಲಿ ಕೆಲವು ದಿನಗಳ ಹಿಂದೆ ಕಿಚ್ಚ ಸುದೀಪ್ ಅವರಿಗೆ ಸ್ವಲ್ಪ ಮಟ್ಟಿನಲ್ಲಿ ಬೇಸರ ಹಾಗೂ ಕಿರಿಕ್ ಗಳಾಗಿದ್ದರು ಸಹ ಸದ್ಯಕ್ಕೆ ಇದೀಗ ಎಲ್ಲವೂ ಸುಖಾಂತ್ಯ ಕಂಡಿರುವುದರಿಂದ ಮತ್ತೆ ಅಭಿಮಾನಿಗಳ ಎದುರಿನಲ್ಲಿ ಸುದೀಪ್ ಅವರು ರಾರಾಜಿಸಲಿದ್ದಾರೆ.

English summary
Kannada actor kiccha sudeep is going to deliver hatrick hit by doing "kotigobba' sequel. And Nithya menen new pair up with Sudeep. The movie is directed by KS Ravikumar, Produced by Soorappa Babu.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada