For Quick Alerts
  ALLOW NOTIFICATIONS  
  For Daily Alerts

  ಬರೀ ರೀಮೇಕ್ ಅಲ್ಲ ರೀ, ಸುದೀಪ್ ಸ್ವಮೇಕೂ ಮಾಡ್ತಾರೆ!

  By Harshitha
  |

  ಸ್ನೇಹಕ್ಕಾಗಿ ಮತ್ತು ನಿರ್ಮಾಪಕರಿಗೆ ಸಹಾಯ ಮಾಡುವುದಕ್ಕೆ ಹೋಗಿ ಸುದೀಪ್ 'ರೀಮೇಕ್ ರಾಜಾ' ಅಂತಲೇ ಬ್ರ್ಯಾಂಡ್ ಆಗಿದ್ದರು. ಇತ್ತೀಚೆಗೆ ರಿಲೀಸ್ ಆಗಿದ್ದ 'ಮಾಣಿಕ್ಯ' ಮತ್ತು ಇದೀಗ ಚಿತ್ರೀಕರಣ ಭರದಿಂದ ಸಾಗುತ್ತಿರುವ 'ಅತ್ತಾರಿಂಟಿಕಿ ದಾರೇದಿ' ರೀಮೇಕ್ 'ರನ್ನ' ಸೇರಿದಂತೆ ಪರಭಾಷಾ ಚಿತ್ರಗಳನ್ನ ನಕಲು ಮಾಡುವುದರಲ್ಲೇ ಸುದೀಪ್ ಬಿಜಿ.

  ಇಂತ ಬಿಜಿ ಶೆಡ್ಯುಲ್ ಮಧ್ಯೆ ಸ್ವಮೇಕ್ ಚಿತ್ರವೊಂದರ ಬಗ್ಗೆ ಸುದೀಪ್ ಗಮನಹರಿಸಿದ್ದಾರೆ. 'ಗಜಕೇಸರಿ' ಚಿತ್ರದ ನಂತ್ರ ಕ್ಯಾಮರಾಮೆನ್ ಕೃಷ್ಣ ನಿರ್ದೇಶಿಸುತ್ತಿರುವ 'ಹೆಬ್ಬುಲಿ' ಚಿತ್ರಕ್ಕೆ ಸುದೀಪ್ ಸದ್ಯದಲ್ಲೇ ಚಾಲನೆ ನೀಡಲಿದ್ದಾರೆ.

  ಹಾಗ್ನೋಡಿದರೆ, 'ಮಾಣಿಕ್ಯ' ಚಿತ್ರದ ನಂತ್ರ ಸುದೀಪ್ ಗಾಂಧಿನಗರದಲ್ಲಿ 'ಹೆಬ್ಬುಲಿ'ಯಾಗಿ ಘರ್ಜಿಸಬೇಕಿತ್ತು. ಆದ್ರೆ ಅಷ್ಟರಲ್ಲಿ 'ರನ್ನ'ನಾಗುವುದಕ್ಕೆ ಮುಂದಾದರು. ಅದೇ ಗ್ಯಾಪ್ ನಲ್ಲಿ ಇಳಯದಳಪತಿ 'ವಿಜಯ್ 58' ಚಿತ್ರಕ್ಕಂತ ಸುದೀಪ್ ಇದೀಗ ಚೆನ್ನೈಗೆ ಹಾರಿದ್ದಾರೆ. ಅಲ್ಲೇ ಕೆ.ಎಸ್.ರವಿಕುಮಾರ್ ಜೊತೆ ಮತ್ತೊಂದು ಸಿನಿಮಾ ಮಾಡುವುದಾಗಿ ಘೋಷಿಸಿದ್ದಾರೆ. ಹಾಗಾದ್ರೆ, 'ಹೆಬ್ಬುಲಿ' ಕಥೆ ಏನಾಯ್ತು ಅನ್ನುವಷ್ಟರಲ್ಲಿ ಕೃಷ್ಣ, ಸುದೀಪ್ ಜೊತೆ ಮಾತನಾಡಿಕೊಂಡು ಬಂದಿದ್ದಾರೆ.

  ಚೆನ್ನೈನಲ್ಲೇ ಕೃಷ್ಣ ಮತ್ತು ಸುದೀಪ್ ಭೇಟಿಯಾಗಿದ್ದು, ಮಾರ್ಚ್ ನಲ್ಲಿ 'ಹೆಬ್ಬುಲಿ' ಚಿತ್ರಕ್ಕೆ ಮುಹೂರ್ತ ಫಿಕ್ಸ್ ಮಾಡಿದ್ದಾರೆ. ಈಗಾಗ್ಲೇ 'ಹೆಬ್ಬುಲಿ'ಯ ಸ್ಕ್ರಿಪ್ಟ್ ರೆಡಿಯಾಗಿದ್ದು, ತಾಂತ್ರಿಕ ಮತ್ತು ಪಾತ್ರವರ್ಗವನ್ನು ಫೈನಲ್ ಮಾಡುವುದಕ್ಕೆ ಕೃಷ್ಣ ಓಡಾಡುತ್ತಿದ್ದಾರೆ. ಕನ್ನಡ, ತಮಿಳು, ತೆಲುಗಿನಲ್ಲಿ ಏಕಕಾಲಕ್ಕೆ ಚಿತ್ರ ರೆಡಿಯಾಗಲಿದ್ದು, ಬಾಲಿವುಡ್ ರೇಂಜಿಗೆ ಚಿತ್ರವನ್ನ ತೆರೆಗೆ ತರುವ ಉತ್ಸುಕದಲ್ಲಿದ್ದಾರೆ ಕೃಷ್ಣ.

  'ಹೆಬ್ಬುಲಿ' ಚಿತ್ರದಲ್ಲಿ ಮೊದಲ ಬಾರಿಗೆ ಆರ್ಮಿ ಆಫೀಸರ್ ಪಾತ್ರ ನಿರ್ವಹಿಸುತ್ತಿದ್ದಾರೆ ಸುದೀಪ್. ಹೀಗಾಗಿ ಆರ್ಮಿಗೆ ಸಂಬಂಧಪಟ್ಟ ಬಹುತೇಕ ಚಿತ್ರೀಕರಣ ಕಾಶ್ಮೀರದಲ್ಲಿ ನಡೆಯಲಿದೆಯಂತೆ. ಇನ್ನೂ, 'ಹೆಬ್ಬುಲಿ' ತ್ರಿಭಾಷಾ ಚಿತ್ರ ಆಗಿರುವುದರಿಂದ ಮೂರು ಭಾಷೆಯಲ್ಲಿ ಜನಪ್ರಿಯವಾಗಿರುವ ನಾಯಕ ನಟಿಯನ್ನೇ ಕರೆತರುವ ತಯಾರಿ ನಡೆಯುತ್ತಿದೆ ಅನ್ನುತ್ತಾರೆ ನಿರ್ದೇಶಕ ಕೃಷ್ಣ. [ಸ್ಯಾಂಡಲ್ ವುಡ್ ನ 'ಹೆಬ್ಬುಲಿ'ಯಾಗಿ ಕಿಚ್ಚ ಸುದೀಪ್]

  ಸದ್ಯಕ್ಕೆ ಕಾಲಿವುಡ್ ನಲ್ಲಿ ಬಿಜಿಯಾಗಿರುವ ಸುದೀಪ್, ಅಲ್ಲಿಂದ ಬಂದಮೇಲೆ ಗಾಂಧಿನಗರದಲ್ಲಿ 'ಹೆಬ್ಬುಲಿ'ಯಾಗಿ ಘರ್ಜಿಸುವುದು ಖಚಿತ. 'ಹೆಬ್ಬುಲಿ'ಯಂತ ಸ್ವೇಮೇಕ್ ಚಿತ್ರದ ಮೂಲಕವಾದರೂ ಸುದೀಪ್, 'ರೀಮೇಕ್ ಕಿಂಗ್' ಅಲ್ಲ ಅನ್ನುವುದನ್ನ ಪ್ರೂವ್ ಮಾಡಲಿ ಅನ್ನುವುದೇ ಅವರ ಅಭಿಮಾನಿಗಳ ಆಶಯ. (ಏಜೆನ್ಸೀಸ್)

  English summary
  Finally, Sudeep has given a nod to Cinematographer Krishna's next directorial venture Hebbuli. Sudeep will be seen as Army Officer, and the film will go on floors from March 2015.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X